Advertisement
ಅರಬಿ ಸಮುದ್ರದಲ್ಲಿ ಉಂಟಾ ಗಿರುವ ಕ್ಯಾರ್ ಚಂಡಮಾರುತದಿಂದ ಮಹಾರಾಷ್ಟ್ರದ ಕರಾವಳಿ ಜಿಲ್ಲೆಗಳಾದ ರತ್ನಗಿರಿ ಮತ್ತು ಸಿಂಧುದುರ್ಗದಲ್ಲಿ ಶನಿವಾರವೂ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಅನಂತರ ಕ್ರಮೇಣ ಚಂಡ ಮಾರುತವು ಒಮನ್ ಕರಾ ವಳಿಯತ್ತ ಸಂಚ ರಿಸ ಲಿದೆ ಎಂದು ನಿರೀಕ್ಷಿಸಲಾಗಿದೆ.
ಗೋವಾದಲ್ಲಿ 3 ದಿನಗಳಿಂದ ಒಂದೇ ಸಮನೆ ಮಳೆಯಾಗುತ್ತಿದ್ದು, ಶನಿವಾರ ಇದೇ ತೀವ್ರತೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಾಂಡೋವಿ ನದಿಯ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ಮುಂಬಯಿ- ಗೋವಾ ರಾಷ್ಟ್ರೀಯ ಹೆದ್ದಾರಿ ಜಲಾವೃತವಾಗಿದೆ. ಕರ್ನಾಟಕದಲ್ಲಿ 285 ಸಾವು
ಪ್ರಸಕ್ತ ಮುಂಗಾರು ಅವಧಿ ಯಲ್ಲಿ ಮಳೆ, ಪ್ರವಾಹದಿಂದ ದೇಶಾ ದ್ಯಂತ ಒಟ್ಟು 2,155 ಮಂದಿ ಸಾವಿಗೀಡಾ ಗಿದ್ದಾರೆ ಎಂದು ಕೇಂದ್ರ ಗೃಹ ಇಲಾಖೆ ಮಾಹಿತಿ ನೀಡಿದೆ. ಈ ಪೈಕಿ 285 ಸಾವು ಕರ್ನಾಟಕದಲ್ಲಿ ಸಂಭವಿಸಿವೆ.
Related Articles
ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಶಾಲೆಗಳಿಗೆ ರಜೆ ಶನಿವಾರ ನೀಡ ಲಾಗಿದೆ. ದ.ಕ. ಜಿಲ್ಲೆ ಯಲ್ಲಿ ಅಂಗನವಾಡಿಯಿಂದ ಪದವಿ ಪೂರ್ವದವರೆಗೆ, ಉಡುಪಿ ಜಿಲ್ಲೆಯಲ್ಲಿ ಅಂಗನವಾಡಿಯಿಂದ ಪದವಿವರೆಗೆ ರಜೆ ಘೋಷಿಸಲಾಗಿದೆ. ಕೆಲವು ಶಾಲೆಗಳಲ್ಲಿ ನಡೆಯುತ್ತಿರುವ ಪಿ.ಯು.ಪರೀಕ್ಷೆಗಳನ್ನು ಮುಂದೂಡಲಾಗಿದೆ.
Advertisement