Advertisement

ಅವಾಂತರ ಸೃಷ್ಟಿಸಿದ ಧಾರಾಕಾರ ಮಳೆ

06:31 PM Mar 25, 2022 | Team Udayavani |

ಚಿಕ್ಕಮಗಳೂರು: ವರ್ಷದ ಮೊದಲ ಮಳೆ ಚಿಕ್ಕಮಗಳೂರು ನಗರದಲ್ಲಿ ಅವಾಂತರ ಸೃಷ್ಟಿಸಿದೆ. ಬುಧವಾರ ರಾತ್ರಿ ಸುರಿದ ಬಾರೀ ಮಳೆಗೆ ಚರಂಡಿಗಳು ಉಕ್ಕಿ ಹರಿದಿವೆ. ಮಳೆ ನೀರು ಮನೆಗಳಿಗೆ ನುಗ್ಗಿ ಜನ ನರಕಯಾತನೆ ಅನುಭವಿಸುವಂತೆ ಮಾಡಿದೆ.

Advertisement

ಬುಧವಾರ ರಾತ್ರಿ ಗುಡುಗು, ಸಿಡಲು ಸಹಿತವಾಗಿ ಆರಂಭವಾದ ಮಳೆ ಮಧ್ಯರಾತ್ರಿವರೆಗೂ ಎಡಬಿಡದೆಸುರಿದಿದೆ. ಮಳೆಯ ಆರ್ಭಟಕ್ಕೆ ಬೋಳರಾಮೇಶ್ವರ ದೇವಸ್ಥಾನ ಹಿಂಭಾಗ, 13ನೇ ವಾರ್ಡ್‌ ಶಂಕರಪುರ ಬಡಾವಣೆ, 19ನೇ ವಾರ್ಡ್‌ ಪಂಪನಗರ, ಮಾಕೇರ್ಟ್‌ ರಸ್ತೆ, ಕೆ.ಎಂ.ರಸ್ತೆ ಸೇರಿದಂತೆ ಇತರೆ ಬಡಾವಣೆಗಳಲ್ಲಿ ಚರಂಡಿ ನೀರು ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಸಿದೆ.

ತಗ್ಗು ಪ್ರದೇಶಗಳಲ್ಲಿ ಭಾರೀ ಪ್ರಮಾಣದ ನೀರು ಹರಿದ ಪರಿಣಾಮ ಚರಂಡಿಗಳಲ್ಲಿನ ಕಸ ರಸ್ತೆ ತುಂಬೆಲ್ಲ ಹರಡಿಕೊಂಡಿದೆ. ಭಾರೀ ಪ್ರಮಾಣದ ನೀರು ರಸ್ತೆ ಮೇಲೆ ಹರಿದಿದ್ದು ವಾಹನ ಸವಾರರು ಪರದಾಡಿದರು. ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಮನೆಗಳಲ್ಲಿದ್ದ ಸಾಮಾಗ್ರಿಗಳು ನೀರು ಪಾಲಾಗಿ ಭಾರೀ ನಷ್ಟವಾಗಿದೆ. ನಗರ ಪ್ರದೇಶದಲ್ಲಿ ಚರಂಡಿಗಳು ಕಸ ಕಡ್ಡಿಗಳಿಂದ ತುಂಬಿದ್ದು, ರಾಜಕಾಲುವೆ ಸ್ವತ್ಛಗೊಳಿದ ಪರಿಣಾಮ ಮಳೆ ನೀರು ರಸ್ತೆ ಮೇಲೆ ಹರಿದು ಮನೆಗಳಿಗೆ ನುಗ್ಗಿದೆ. ನಗರಸಭೆಯ ಬೇಜಬ್ದಾರಿತನವೇ ಇದಕ್ಕೆ ಕಾರಣವೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭೇಟಿ-ಪರಿಶೀಲನೆ: ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಾದ ಟಿಪ್ಪುನಗರ, ಶಂಕರಪುರ, ಉಪ್ಪಳ್ಳಿ, ಉಂಡೇದಾಸರಹಳ್ಳಿ ಮತ್ತೀತರೇ ಕಡೆಗಳಿಗೆ ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣು ಗೋಪಾಲ್‌ ಮತ್ತು ಅ ಧಿಕಾರಿಗಳ ತಂಡ ಗುರುವಾರ ಬೆಳಿಗ್ಗೆ ಭೇಟಿನೀಡಿ ಪರಿಶೀಲನೆ ನಡೆಸಿತು. ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್‌ ಮಾತನಾಡಿ, ನಗರದ ತಗ್ಗು ಪ್ರದೇಶಗಳಿಗೆ ಮಳೆನೀರು ನುಗ್ಗಿದ್ದು, ಹಾನಿಯ ಪರಿಶೀಲನೆ ನಡೆಸಲಾಗುತ್ತಿದೆ. ಉಪ್ಪಳ್ಳಿಯಲ್ಲಿ ಮನೆಗೋಡೆ ಕುಸಿದು ಬಿದ್ದಿದೆ. ಟಿಪ್ಪುನಗರದ ಕೆಲವು ಮನೆಗಳಿಗೆ ನೀರು ನುಗ್ಗಿದೆ. ಬಡಾವಣೆಯ ಸಮಸ್ಯೆ ಗಳ ಬಗ್ಗೆ ಜನರೊಂದಿಗೆ ಚರ್ಚಿಸಿದ್ದು ಚರಂಡಿ ಸೇರಿದಂತೆ ಮೂಲಭೂತ ಸೌಲಭ್ಯಗಳ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ರಾಜಕಾಲುವೆಯಲ್ಲಿ ನೀರು ಸರಾಗವಾಗಿ ಹರಿಯದ ಕಾರಣ ಮನೆಗಳಿಗೆ ನೀರು ನುಗ್ಗಿದೆ.  ಮಳೆಗಾಲ ಆರಂಭಕ್ಕೂ ಮುನ್ನ ಸಮಸ್ಯೆಗಳು ಗಮನಕ್ಕೆ ಬಂದಿದ್ದು ವಾರ್ಡ್‌ಗಳ ಮೂಲಭೂತ ಸೌಕರ್ಯಕ್ಕೆ ಹೆಚ್ಚು ಒತ್ತು ನೀಡಲಾಗುವುದು ಎಂದರು. ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಎ.ಸಿ.ಕುಮಾರ್‌, ರೂಪಾಕುಮಾರ್‌, ನಗರಸಭೆ ಎಇಇ ಕುಮಾರ್‌, ಆರೋಗ್ಯ ಪರಿವೀಕ್ಷಕ ರಂಗಪ್ಪ, ಸದಸ್ಯರಾದ ಜಾವೀದ್‌, ಗೋಪಿ ಇದ್ದರು.

Advertisement

ಜಿಲ್ಲಾದ್ಯಂತ ವರ್ಷಧಾರೆ
ಚಿಕ್ಕಮಗಳೂರು ನಗರ ಸೇರಿದಂತೆ ಜಿಲ್ಲಾಧ್ಯಂತ ಬುಧವಾರ ಮಳೆ ಆರ್ಭಟಿಸಿದೆ. ಚಿಕ್ಕಮ ಗಳೂರಿನಲ್ಲಿ 54.3, ವಸ್ತಾರೆ 12, ಜೋಳದಾಳ್‌ 57, ಆಲ್ದೂರು 5.2, ಕೆ.ಆರ್‌.ಪೇಟೆ 4, ಅತ್ತಿಗುಂಡಿ 13, ಸಂಗಮೇಶ್ವರಪೇಟೆ 11.4, ಬೆ„ರಾವಳ್ಳಿ 34.2 ಮಿ.ಮೀ. ಮಳೆಯಾಗಿದೆ. ಕಡೂರು 2, ಬೀರೂರು 5.2, ಸಖರಾಯಪಟ್ಟಣ 3, ಎಮ್ಮೆದೊಡ್ಡಿ 2 ಮೀ.ಮೀ. ಮಳೆ ಯಾಗಿದೆ. ಶೃಂಗೇರಿ 16, ಕಿಗ್ಗಾ 16, ಕೆರೆಕಟ್ಟೆ 30.6 ಮಿ.ಮೀ. ಮಳೆಯಾಗಿದೆ. ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ 5, ಗೋಣಿಬೀಡು 4.2 ಕಳಸ 5.2 ಮಿ.ಮೀ. ಮಳೆಯಾಗಿದೆ.

ತರೀಕೆರೆ 2.2, ಲಕ್ಕವಳ್ಳಿ 2.2, ರಂಗೇನಹಳ್ಳಿ 3, ಲಿಂಗದಹಳ್ಳಿ 6.8, ತ್ಯಾಗಬಾಗಿ 1 ಮಿ. ಮೀ. ಮಳೆಯಾಗಿದೆ. ಕೊಪ್ಪ 29, ಹರಿಹರಪುರ 56, ಜಯಪುರ 40, ಬಸರೀಕಟ್ಟೆ 21.9, ಕಮ್ಮರಡಿ 90.2 ಮಿ.ಮೀ.ಮಳೆಯಾಗಿದೆ. ನರಸಿಂಹರಾಜಪುರ 23, ಬಾಳೆಹೊನ್ನೂರು 27.8, ಮಾಗುಂಡಿ 15 ಮಿ.ಮೀ ಮಳೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next