Advertisement

ಭಟ್ಕಳದಲ್ಲಿ ಭಾರಿ ಮಳೆ

05:53 AM Jun 01, 2020 | Suhan S |

ಭಟ್ಕಳ: ಕಳೆದ ಎರಡು ದಿನಗಳಿಂದ ಭಟ್ಕಳದಲ್ಲಿ ಗುಡುಗು ಸಹಿತ ಮಳೆಯಾಗುತ್ತಿದ್ದು, ರವಿವಾರ ಬೆಳಗಿನ ಜಾವ ಭಾರೀ ಗಾಳಿ ಮಳೆಯಾಗಿದೆ.

Advertisement

ಬೆಳಗ್ಗೆ ತನಕ 24 ಗಂಟೆಗಳಲ್ಲಿ 34.6 ಮಿ.ಮೀ. ಮಳೆಯಾಗಿದ್ದರೆ, ಇಲ್ಲಿಯ ತನಕ ಒಟ್ಟೂ 138.8 ಮಿ.ಮೀ. ಮಳೆಯಾಗಿದೆ. ಇದು ಅನುಕೂಲವಾಗಿದ್ದು, ಕೃಷಿ ಚಟುವಟಿಕೆ ಚುರುಕುಗೊಂಡಿದೆ. ಕಳೆದ ಎರಡು ದಿನಗಳಿಂದ ಗುಡುಗು ಸಿಡಿಲು ಸಹಿತ ಮಳೆಯಾಗುತ್ತಿದ್ದು, ರವಿವಾರ ಬೆಳಗ್ಗೆ ಸಿಡಿಲಿನ ಅಬ್ಬರಕ್ಕೆ ಶಿರಾಲಿಯಲ್ಲಿನ ಒಂದು ಮನೆಗೆ ಸ್ವಲ್ಪ ಹಾನಿಯಾಗಿದ್ದರೂ ಮನೆಯಲ್ಲಿದ್ದವರಿಗೆ ಯಾವುದೇ ತೊಂದರೆಯಾಗಿಲ್ಲ. ಕಳೆದ ಎರಡು ದಿನಳಿಂದ ರಾತ್ರಿ ಹೋದ ವಿದ್ಯುತ್‌ ಬೆಳಗ್ಗೆಯಾದರೂ ಬಾರದೇ ನಾಗರಿಕರು ತೀವ್ರ ಪರದಾಡುವಂತಾಯಿತು.

Advertisement

Udayavani is now on Telegram. Click here to join our channel and stay updated with the latest news.

Next