Advertisement

ಸತತ ಮಳೆಗೆ ತತ್ತರಿಸಿದ ಬಳ್ಳಾರಿ ಜನತೆ

10:42 AM Oct 28, 2019 | Suhan S |

ಬಳ್ಳಾರಿ: ದೀಪಾವಳಿ ಹಬ್ಬದ ಅಮವಾಸ್ಯೆ ದಿನವಾದ ಸೋಮವಾರ ಬೆಳಗಿನಜಾವ ಸತತವಾಗಿ ಸುರಿದ ‌ಮಹಾಮಳೆಗೆ ಗಣಿನಾಡು ಬಳ್ಳಾರಿ ಜಿಲ್ಲೆ ತತ್ತರಿಸಿದೆ.

Advertisement

ಬಳ್ಲಾರಿ ತಾಲೂಕಿನ‌ ಸಂಜೀವರಾಯನಕೊಪಟೆ, ಇಬ್ರಾಹಿಂಪುರ ಬಹುತೇಕ ಗ್ರಾಮಗಳು ಮಳೆ ನೀರಿನಿಂದ ಜಲಾವೃತಗೊಂಡಿವೆ. ಸಂಜೀವರಾಯನಕೊಪಟೆ ಗ್ರಾಮದಿಂದ‌ ಸಮೀಪದ ಚರಕುಂಟೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮೇಲ್ಸೆತುವೆ ಸಂಪೂರ್ಣವಾಗಿ ಜಲಾವೃತಗೊಂಡಿದೆ.

ರಸ್ತೆಯುದ್ಧಕ್ಕೂ ಇರುವ ವಿದ್ಯುತ್ ಕಂಬಗಳು ಮಳೆಯ ಅಬ್ಬರದಿಂದ ಒಂದು ಕಡೆ ವಾಲಿವೆ. ಮಳೆಯ ನೀರಿನಿಂದ ಕಂಬಗಳು ಯಾವ ಸಂದರ್ಭದಲ್ಲಾದ್ರೂ ಧರೆಗೆ ಉರುಳುವ ಸಾಧ್ಯತೆ ಹೆಚ್ಚಿದೆ. ಇನ್ನು ಚರಕುಂಟೆ ಗ್ರಾಮಸ್ಥರು ಅತ್ತ ದೀಪಾವಳಿ ಹಬ್ಬದ ಆಚರಣೆಗೂ ಸಿದ್ಧರಾಗದೇ, ಕೃಷಿ ವಟುವಟಿಕೆಯಲ್ಲಿ ತಟಸ್ಥರಾಗಿದ್ದಾರೆ.

ಅಲ್ಲದೇ, ಇಬ್ರಾಹಿಂಪುರ ಗ್ರಾಮದಲ್ಲಂತೂ ಈ ಮಹಾಮಳೆಯ ನೀರಿನಿಂದ ಇಡೀ ಗ್ರಾಮವೆಲ್ಲ ಜಲಾವೃತಗೊಂಡಿದೆ. ಗ್ರಾಮದ  ರಾಜ ಬೀದಿ ಹಾಗೂ ಪ್ರಮುಖ ರಸ್ತೆಯೆಲ್ಲೆಲ್ಲಾ ನೀರು ನುಗ್ಗಿದೆ. ಅದರಿಂದ ಗ್ರಾಮಸ್ಥರಿಗೆ ದೀಪಾವಳಿ ಹಬ್ಬವನ್ನು ಈ‌ ಮಳೆಯ ನೀರಿನಲ್ಲೇ ಕಳೆಯುವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next