Advertisement

ಬಾಳೆಹೊನ್ನೂರಲ್ಲಿ ಭಾರೀ ಮಳೆ

05:00 PM Mar 30, 2022 | Team Udayavani |

ಬಾಳೆಹೊನ್ನೂರು: ಪಟ್ಟಣದ ಸುತ್ತ ಮುತ್ತ ಮಂಗಳವಾರ ಮಧ್ಯಾಹ್ನ ಗುಡುಗು- ಮಿಂಚು, ಸಿಡಿಲು ಹಾಗೂ ಗಾಳಿ ಸಹಿತ ಭಾರೀ ಮಳೆಯಾಗಿದೆ. 1ಗಂಟೆಗೂ ಹೆಚ್ಚು ಕಾಲ ಮಳೆ ಸುರಿದ ಹಿನ್ನೆಲೆಯಲ್ಲಿ ಚರಂಡಿಗಳು ತುಂಬಿ ಹರಿದವು. ಪಟ್ಟಣದ ಮುಖ್ಯ ರಸ್ತೆ ಪಕ್ಕದಲ್ಲಿ ಲಕ್ಷಾಂತರ ರೂ. ವೆಚ್ಚದಲ್ಲಿ ವೈಜ್ಞಾನಿಕವಾಗಿ ಬಾಕ್ಸ್‌ ಚರಂಡಿ ನಿರ್ಮಿಸದ ಹಿನ್ನೆಲೆಯಲ್ಲಿ ಹಳ್ಳದೋಪಾದಿಯಲ್ಲಿ ನೀರು ರಸ್ತೆಯಲ್ಲಿ ಹರಿಯಿತು. ಚರ್ಚ್‌, ಗಲ್ಲಿ ಹಾಗೂ ಪಂಚಾಯ್ತಿ ಮುಂಭಾಗದಿಂದ ಹರಿದುಬಂದ ನೀರು ಜೆಸಿವೃತ್ತದಲ್ಲಿ ಸಂಗ್ರಹವಾಗಿ ನ.ರಾ. ಪುರ ರಸ್ತೆಯಲ್ಲಿ ಹರಿದ ಪರಿಣಾಮ ಸಂಚಾರಕ್ಕೆ ಅಡಚಣೆಯಾಯಿತು.

Advertisement

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಬಾಕ್ಸ್‌ ಚರಂಡಿ ನಿರ್ಮಿಸಿದರೂ ಸಹ ಬಾಕ್ಸ್‌ ಚರಂಡಿಯಲ್ಲಿ ನೀರು ಹರಿಯದೆ ರಸ್ತೆಯಲ್ಲಿ ನೀರು ಹರಿಯಿತು . ಕಳೆದ 3 ವರ್ಷಗಳಿಂದ ಸಂಬಂಧಪಟ್ಟ ಇಲಾಖೆಗೆ ತಿಳಿಸಿದ್ದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ. ಸಂಗಮೇಶ್ವರಪೇಟೆ, ಕಡಬಗೆರೆ, ಖಾಂಡ್ಯ, ಬನ್ನೂರು, ಹಲಸೂರು, ಸೀಕೆ ಮುದುಗುಣಿ, ಕಣಬೂರು ಸುತ್ತಾಮುತ್ತ ಭಾರೀ ಮಳೆಯಾಗಿದೆ. ಕಳೆದ 8 ದಿನಗಳಿಂದ ಉತ್ತಮವಾಗಿ ಮಳೆಯಾಗಿದ್ದು ಕಾಫಿ ಬೆಳೆಗಾರರು ಸಂತಸ ವ್ಯಕ್ತಪಡಿಸಿದ್ದರು.

ಇದೀಗ ಸುರಿದ ಭಾರೀ ಮಳೆಯಿಂದ ಕಾಫಿ  ಬೀಜ ಕಾಯಿಗಟ್ಟಲು ಸಿದ್ಧವಾಗಿದೆ. ಆದರೆ ಮಳೆಯಿಂದಾಗಿ ಹೂಗಳೆಲ್ಲ ಉದುರಿ ಹೋಗಿದ್ದು, ಮುಂದಿನ ವರ್ಷದ ಕಾಫಿ ಬೀಜ ಉತ್ಪಾದನೆಯಲ್ಲಿ ವ್ಯತ್ಯಯವಾಗಲಿದೆ. ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು ಮಳೆಬಂದ ಹಿನ್ನೆಲೆಯಲ್ಲಿ ತಂಪು ವಾತಾವರಣ ಸೃಷ್ಟಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next