Advertisement

ಅದ್ಯಪಾಡಿ: ಗುಡ್ಡ ಕುಸಿತಕ್ಕೆ ತಾತ್ಕಾಲಿಕ ಪರಿಹಾರ

10:48 PM Jul 24, 2019 | mahesh |

ಮಹಾನಗರ: ನಗರದಲ್ಲಿ ಬುಧವಾರ ಉತ್ತಮ ಮಳೆಯಾಗಿದೆ. ಬೆಳಗ್ಗಿನಿಂದಲೇ ಬಿಟ್ಟು ಬಿಟ್ಟು ಮಳೆ ಯಾಗಿದ್ದು, ತಗ್ಗು ಪ್ರದೇಶಗಳಲ್ಲಿ ಕೃತಕ ನೆರೆ ಸೃಷ್ಟಿಯಾಗಿತ್ತು. ಬಿಜೈ ಬಟ್ಟಗುಡ್ಡೆ ಬಳಿ ಕಳೆದ ಸೋಮ ವಾರ ರಸ್ತೆಗೆ ಮಣ್ಣು ಜರಿದು ಬಿದ್ದಿದ್ದು, ಬುಧವಾರ ಕಾಮಗಾರಿ ನಡೆದಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಮುದಿನ ಎರಡು ದಿನಗಳಲ್ಲಿ ದ.ಕ. ಸಹಿತ ಕರಾವಳಿ ಭಾಗಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ.

Advertisement

ಗುಡ್ಡ ಕುಸಿತಕ್ಕೆ ತಾತ್ಕಾಲಿಕ ಪರಿಹಾರ
ಬಜಪೆ:
ಎರಡೂ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕಂದಾವರ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಅದ್ಯಪಾಡಿ ಚರ್ಚ್‌ ಬಳಿಯ ಗುಡ್ಡದ ಮಣ್ಣು ಕುಸಿತವಾಗಿದ್ದು ತಾತ್ಕಾಲಿಕ ಪರಿಹಾರವಾಗಿ ಮರಳುತುಂಬಿದ ಗೋಣಿ ಯನ್ನು ಇಡಲಾಗಿದೆ. ಆದರೂ ಗುಡ್ಡದ ಮಣ್ಣು ಕುಸಿಯುವ ಭೀತಿಯಿದೆ.

ಧಾರಾಕಾರ ಮಳೆಯಿಂದಾಗಿ ಅದ್ಯಪಾ ಡಿಯ ಲೋಕೋಪಯೋಗಿ ರಸ್ತೆಯಲ್ಲಿ ಗುಡ್ಡ ಮಣ್ಣು ಕುಸಿದು ರಸ್ತೆಗೆ ಬಿದ್ದು ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು. ರಸ್ತೆಗೆ ಬಿದ್ದ ಮಣ್ಣನ್ನು ಮಂಗಳವಾರ ಜೇಸಿಬಿಯಿಂದ ತೆಗೆಯಲಾಯಿತು. ಮಳೆಗೆ ಮಣ್ಣು ಇನ್ನೂ ಕುಸಿದಿದ್ದು ಬುಧವಾರ ಲೋಕೋಪಯೋಗಿ ಇಲಾಖೆಯಿಂದ ಗುಡ್ಡದ ಬುಡಕ್ಕೆ ಮರಳು ತುಂಬಿದ ಗೋಣಿ ಇಡಲಾಗಿದೆ. ತಾತ್ಕಾಲಿಕ ಪರಿಹಾರವನ್ನು ಕಂಡುಕೊಳ್ಳಲಾಗಿದೆ.

ಗುಡ್ಡದ ಮೇಲೆ ಕೆಂಪುಕಲ್ಲು ತೆಗೆದು ಬಿಟ್ಟ ಕೋರೆ ಇದೆ. ಕೋರಿಯಲ್ಲಿ ಮಳೆ ನೀರು ತುಂಬಿರುವುದರಿಂದ ನೀರಿನ ಒರತೆ ರಭಸವಾಗಿದೆ. ಗುಡ್ಡದಲ್ಲಿ ಮಣ್ಣಿನ ಕೊರೆತೆಯೂ ಕುಸಿತಕ್ಕೆ ಕಾರಣವಾಗಿದೆ. ಮಣ್ಣು ಕುಸಿತವಾದಲ್ಲಿ ದೊಡ್ಡ ಗುಂಡು ಕಲ್ಲುಗಳಿದ್ದು ಇನ್ನೂ ಮಳೆ ಬಂದಲ್ಲಿ ಇದು ಕೆಳಗೆ ರಸ್ತೆಗೆ ಬೀಳುವ ಸಂಭವವಿದೆ.

ಗುಡ್ಡದ ಕೆಳಗಿರುವ ಮನೆಗಳಿಗೆ ಅಪಾ ಯದ ಬಗ್ಗೆ ಸೂಚಿಸಲಾಗಿದೆ. ಮಳೆ ಹೆಚ್ಚಾ ದಂತೆ ಮಣ್ಣು ಕುಸಿತವಾಗುವ ಸಂಭವವಿದೆ. ಸ್ಥಳಕ್ಕೆ ತಹಶೀಲ್ದರ ಗುರು ಪ್ರಸಾದ್‌ ಅವರು ಭೇಟಿ ನೀಡಿ, ಪರಿಶೀಲಿಸಿ, ಅಗತ್ಯ ಕ್ರಮಕ್ಕೆ ಸೂಚನೆ ನೀಡಿದ್ದಾರೆ. ನೀರಿನ ಒರತೆ ಜಾಸ್ತಿಯಾಗಿದ್ದು, ಮಣ್ಣು ಕುಸಿತ ಕಂಡ ಪ್ರದೇಶದ ಕೆಳಗಡೆಯೂ ಕುಸಿಯಲು ಆರಂಭವಾಗಿದೆ. ತಾತ್ಕಾಲಿಕ ಪರಿಹಾರಕ್ಕೆ ಮರಳುತುಂಬಿದ ಗೋಣಿಯನ್ನು ಇಡಲಾಗಿದೆ. ಮಳೆ ಕಡಿಮೆಯಾದ ಅನಂತರ ಶಾಶ್ವ್ವತ ಪರಿಹಾರವಾಗಿ ತಡೆಗೋಡೆ ನಿರ್ಮಾಣಕ್ಕೆ ಸುಮಾರು 25ಲಕ್ಷ ರೂ. ಬೇಕಾಗುತ್ತದೆ ಎಂದು ಲೋಕಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್‌ ಗೋಪಾಲ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next