Advertisement
ನೂರಕ್ಕೂ ಮಿಕ್ಕಿ ಮನೆಗಳು ಹೊರಗಿನ ಸಂಪರ್ಕವನ್ನು ಕಡಿತಗೊಂಡಿದ್ದು, ನೂರಾರು ಎಕ್ರೆ ನಾಟಿ ಮಾಡಿರುವ ಗದ್ದೆಗಳು ಜಲಾವೃತಗೊಂಡಿವೆ.
ಅರೆಹೊಳೆ, ಸಾಲ್ಬುಡಾ ಭಾಗದಲ್ಲಿ ಕೆಲವು ದಿನಗಳ ಹಿಂದಷ್ಟೇ ನಾಟಿ ಮಾಡಿರುವ ನೂರಾರು ಗದ್ದೆಗಳು ಸಂಪೂರ್ಣ ಮುಳುಗಡೆಯಾಗಿವೆ. ಕೆಲವು ಗದ್ದೆಗಳಿಗೆ ಎರಡು ದಿನಗಳ ಹಿಂದಷ್ಟೇ ನಾಟಿ ಕಾರ್ಯ ಆಗಿತ್ತು. ಅವು ಕೊಳೆತು ಹೋಗುವ ಸಾಧ್ಯತೆಯಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
Related Articles
ನಾಡ ಗ್ರಾಮದ ಚಿಕ್ಕಳ್ಳಿ, ಬಡಾಕೆರೆ, ಪಡುಕೋಣೆ, ಮರವಂತೆ, ಕುರು ಕುದ್ರು ಭಾಗದಲ್ಲೂ ಗದ್ದೆಗಳು ಜಲಾವೃತಗೊಂಡಿವೆ. ಪಡುಕೋಣೆ – ಮರವಂತೆ ರಸ್ತೆಯಲ್ಲೂ ಭಾರೀ ನೀರು ಹರಿಯುತ್ತಿತ್ತು.
Advertisement
ಎಸ್‌ಡಿಆರ್‌ಎಫ್ ತಂಡ ಆಗಮನರಾಜ್ಯ ವಿಪತ್ತು ನಿರ್ವಹಣ ಪಡೆ (ಎಸ್‌ಡಿಆರ್‌ಎಫ್) ತಂಡ ಹಾಗೂ ಬೈಂದೂರಿನ ಅಗ್ನಿ ಶಾಮಕ ದಳದ ಸಿಬಂದಿ ಸಾಲುºಡಾಕ್ಕೆ ಬೆಳಗ್ಗೆಯೇ ಆಗಮಿಸಿದೆ. ಸ್ಥಳೀಯ ಯುವಕರು ಅಗತ್ಯವಿರುವವರನ್ನು ದೋಣಿ ಮೂಲಕ ಕರೆದೊಯ್ದರು. ತಾಲೂಕು ಆಡಳಿತದಿಂದ ನಾವುಂದದ ಶಾಲೆಯಲ್ಲಿ ಕಾಳಜಿ ಕೇಂದ್ರವನ್ನು ತೆರೆಯ ಲಾಗಿದೆ. ಬೈಂದೂರಿನ 6 ಕಡೆ ಕೇಂದ್ರ ತೆರೆಯಲು ಸಿದ್ಧತೆ ನಡೆಸಲಾಗಿದೆ. ತಹಶೀಲ್ದಾರ್ ಭೇಟಿ
ಸಾಲ್ಬುಡಾ, ಅರೆಹೊಳೆ ಪ್ರದೇಶಕ್ಕೆ ಬೈಂದೂರು ತಹಶೀಲ್ದಾರ್ ಪ್ರದೀಪ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಭಾರತಿ ಸಹಿತ ಪ್ರಮುಖರು ದೋಣಿಯಲ್ಲಿ ತೆರಳಿ ಸ್ಥಳೀಯರ ಸಂಕಷ್ಟ ಆಲಿಸಿದರು. ರಸ್ತೆಯನ್ನು ಎತ್ತರಗೊಳಿಸಲು ಮನವಿ ಮಾಡಿದ್ದರೂ ಇದನ್ನು ಗಂಭೀರವಾಗಿ ಪರಿಗಣಿಸದ ಬಗ್ಗೆ ಹಾಗೂ ದೋಣಿಗೆ ಸರಿಯಾದ ವ್ಯವಸ್ಥೆ ಕಲ್ಪಿಸದ ಕುರಿತು ಸ್ಥಳೀಯರು ಆಕ್ರೋಶ ಹೊರಹಾಕಿದರು. ವೃದ್ಧರನ್ನು ಆಸ್ಪತ್ರೆಗೆ ಕರೆದೊಯ್ಯಲು ಪ್ರಯಾಸ
ಸಾಲ್ಬುಡಾದಲ್ಲಿ ಮುದುರ ಎಂಬ ವೃದ್ಧರೊಬ್ಬರು ಗುರುವಾರ ಬೆಳಗ್ಗೆ ಅಸ್ವಸ್ಥಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಕರೆ ದೊಯ್ಯಲು ತೀವ್ರ ಪ್ರಯಾಸ ಪಡಬೇಕಾಯಿತು. ದೋಣಿ ಮೂಲಕ ಮನೆಯವರು ಹಾಗೂ ಊರವರು ಸೇರಿ ನಾವುಂದದ ಈಚೆ ಬದಿಗೆ ಕರೆದುಕೊಂಡು ಬಂದು, ಬಳಿಕ ಆಸ್ಪತ್ರೆಗೆ ದಾಖಲಿಸಲಾಯಿತು. ಜಾನುವಾರುಗಳಿಗೆ ಸಂಕಷ್ಟ
ಸಾಲ್ಬುಡಾ ಹಾಗೂ ಅರೆಹೊಳೆ ಪ್ರದೇಶಗಳು ಸಂಪೂರ್ಣ ಮುಳುಗಡೆಯಾಗಿದ್ದು, ಇಲ್ಲಿನ ಮನೆಗಳನ್ನು ತುಸು ಎತ್ತರದ ಪ್ರದೇಶದಲ್ಲಿ ಕಟ್ಟಿರುವುದರಿಂದ ಮನೆಯೊಳಗೆ ನೀರು ನುಗ್ಗುವ ಸಾಧ್ಯತೆ ಇಲ್ಲ. ಆದರೆ ಮನೆಯಂಗಳ, ಬಾವಿಗಳು, ಜಾನುವಾರು ಕೊಟ್ಟಿಗೆಗಳಲ್ಲಿ ಭಾರೀ ಪ್ರಮಾಣದ ನೀರು ನಿಂತಿವೆ. ಇದರಿಂದ ಜಾನುವಾರುಗಳಿಗೆ ತುಂಬಾ ಸಮಸ್ಯೆಯಾಗುತ್ತಿದೆ. ಇಲ್ಲಿನ ಹೆಚ್ಚಿನ ಮನೆಗಳಲ್ಲಿ ಜಾನುವಾರುಗಳಿವೆ. ನೆರೆ ಬಂದಾಗ ಬಳಸಲು ನಾವುಂದ ಭಾಗದಲ್ಲಿ ತಾತ್ಕಾಲಿಕ ಶೆಡ್ ಮಾಡಬೇಕು ಎಂಬ ಸ್ಥಳೀಯರ ಬೇಡಿಕೆ ದೀರ್ಘ ಕಾಲದಿಂದಿದೆ.