Advertisement
ಬುಧವಾರ ಬೆಳಿಗ್ಗೆ 8 ಗಂಟೆಗೆ ಗಂಡೋರಿ ನಾಲಾ ಜಲಾಶಯಕ್ಕೆ ಒಳಹರಿವು 35,000 ಕ್ಯುಸೆಕ್ ನೀರು ಇದ್ದು, 30,000 ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗಿದೆ ಎಂದು ಕರ್ನಾಟಕ ನೀರಾವರಿ ನಿಗಮ ನಿಯಮಿತ ಕಲಬುರಗಿ ವೃತ್ತದ ಅಧೀಕ್ಷಕ ಅಭಿಯಂತ ಜಗನ್ನಾಥ ಹಾಲಿಂಗೆ ತಿಳಿಸಿದ್ದಾರೆ.
Related Articles
Advertisement
ಬೆಣ್ಣೆತೋರಾ ಜಲಾಶಯಕ್ಕೆ ಒಳಹರಿವು 80,510 ಕ್ಯುಸೆಕ್ ಇದ್ದು, 59,350 ಕ್ಯುಸೆಕ್ ನೀರನ್ನು ಹರಿಬಿಡಲಾಗಿದೆ. ಲೋವರ್ ಮುಲ್ಲಾಮಾರಿ ಜಲಾಶಯಕ್ಕೆ 38,500 ಕ್ಯುಸೆಕ್ ನೀರು ಒಳಹರಿವಿದ್ದು, 57,000 ಕ್ಯುಸೆಕ್ ನೀರು ಹೊರಬಿಡಲಾಗಿದೆ.
ಚಿಂಚೋಳಿ ತಾಲೂಕಿನ ಚಂದ್ರಮಪಳ್ಳಿ ಜಲಾಶಯದ ಒಳ ಹರಿವು 6,395 ಕ್ಯುಸೆಕ್ ಇದ್ದರೆ, ಹೊರ ಹರಿವು 6,125 ಕ್ಯುಸೆಕ್ ಇದೆ. ಅಪ್ಪರ ಮುಲ್ಲಾಮಾರಿ ಜಲಾಶಯದಲ್ಲಿ 13,020 ಕ್ಯುಸೆಕ್ ನೀರು ಒಳ ಹರಿವಿದ್ದು, ಅಷ್ಟೆ ಪ್ರಮಾಣದ ನೀರು ಹೊರ ಬಿಡಲಾಗಿದೆ.
ಇದನ್ನೂ ಓದಿ:ಅಂಜನಾದ್ರಿಯಲ್ಲಿ ಅರ್ಚಕ ವಿದ್ಯಾದಾಸ ಬಾಬಾರಿಂದ ನಿರಾತಂಕವಾಗಿ ಪೂಜೆ ಆರಂಭ
ಮುಂದಿನ 3-4 ದಿನಗಳ ಕಾಲ ಹೆಚ್ಚಿನ ಮಳೆಯಾಗುವ ಸಂಭವವಿದ್ದು, ನದಿ ಪಾತ್ರದ ಜನರು ನದಿ ಕಡೆಗೆ ಹೋಗಬಾರದು. ತಮ್ಮ ಜಾನುವಾರಗಳನ್ನು ಸಹ ನದಿ ದಂಡೆಗೆ ಬಿಡದಂತೆ ಹಾಗೂ ತುಂಬಾ ಎಚ್ಚರಿಕೆಯಿಂದಿರುವಂತೆ ಜಗನ್ನಾಥ ಹಾಲಿಂಗೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.