Advertisement

ಭಾರಿ ಮಳೆಗೆ ಕೆರೆಗಳು ಭರ್ತಿ; ಹನಗೋಡು ರಸ್ತೆ ಬಂದ್, ಬೆಳೆ ನಾಶ

10:17 PM Sep 05, 2022 | Team Udayavani |

ಹುಣಸೂರು: ಹುಣಸೂರು ನಗರ ಸೇರಿದಂತೆ ತಾಲೂಕಿನಾದ್ಯಂತ ಭಾನುವಾರ ಮಧ್ಯರಾತ್ರಿಯಿಂದ ಬೆಳಗಿನ ಜಾವದವರೆಗೆ ಸುರಿದ ಬಾರೀ ಮಳೆಯಿಂದಾಗಿ ನಗರದ ಬಡಾವಣೆಗಳ ಮನೆಗಳಿಗೆ ನೀರು ನುಗ್ಗಿದರೆ, ಹಲವಾರು ಕೆರೆಗಳ ಏರಿ ಮೇಲೆ ನೀರು ಹರಿದು ಅಪಾರ ಪ್ರಮಾಣದ ಬೆಳೆ ಹಾನಿಮಾಡಿದೆ. ಆರು ಮನೆಗಳಿಗೆ ಹಾನಿಯಾಗಿದೆ.

Advertisement

ಭಾನುವಾರ ರಾತ್ರಿ 5 ಗಂಟೆಗಳ ಕಾಲ ಸುರಿದ ಬಿರುಸಿನ ಮಳೆಯಿಂದ ನಗರದ ಮಾರುತಿ ಬಡಾವಣೆ ಮೇಲ್ಬಾಗದ ವಳ್ಳಮ್ಮನಕಟ್ಟೆಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಕೋಡಿ ಬಿದ್ದ ಪರಿಣಾಮ ಕಟ್ಟೆ ಪಕ್ಕದಲ್ಲಿರುವ ಸಾಕೇತ,ಮಂಜುನಾಥ ಬಡಾವಣೆಯ ಅನೇಕ ಮನೆಗಳಿಗೆ 2-3 ಅಡಿಗಳಷ್ಟು ನೀರು ತುಂಬಿಕೊAಡಿತ್ತು. ಬಡಾವಣೆಯ ಮದ್ಯದಲ್ಲಿರುವ ರಾಜ ಕಾಲುವೆ ಬಹುತೇಕ ಒತ್ತುವರಿಯಿಂದಾಗಿ ಮಂದಗತಿಯಲ್ಲಿ ಹರಿದ ನೀರು ನ್ಯೂ ಮಾರುತಿ ಬಡಾವಣೆಯ ಕೆಲ ಭಾಗದ ಕೆಲ ಭಾಗದ ಮನೆಗಳಿಗೆ ಹಾಗೂ ಮಂಜುನಾಥ ಬಡಾವಣೆಯ ಕೆಳ ಭಾಗದ ಹತ್ತಕ್ಕೂ ಹೆಚ್ಚು ಮನೆಗಳಿಗೆ ಮಧ್ಯ ರಾತ್ರಿ ದಿಢೀರ್ ನೀರು ನುಗ್ಗಿತು.

ಛಾಯಾದೇವಿ ಕಾಲೇಜಿನ ರಸ್ತೆ ಮೇಲೆ ಹಾಗೂ ಶಬ್ಬೀರ್‌ನಗರದ ರಸ್ತೆ ಮೇಲೆ ೨-೩ ಅಡಿ ನೀರು ಹರಿಯಿತು. ನೀರು ತುಂಬಿಕೊಂಡಿದ್ದರಿಂದ ಮನೆಯಲ್ಲಿದ್ದ ಪದಾರ್ಥಗಳಿಗೆ ಹಾನಿಯಾಗಿದೆ. ಮನೆಗಳಿಗೆ ತುಂಬಿಕೊಂಡಿದ್ದ ನೀರನ್ನು ಹೊರ ಹಾಕಿದರೂ ಮತ್ತೆ ಮತ್ತೆ ತುಂಬುತ್ತಲೇ ಇತ್ತು. ಕೆಲವರು ನಿದ್ದೆಯನ್ನೇ ಮಾಡಿಲ್ಲ. ಬೆಳಗ್ಗೆ 10 ರ ವೇಳೆಗೆ ನೀರಿನ ಹರಿವು ಇಳಿಮುಖವಾಯಿತು.

ವಿಷಯ ತಿಳಿದು ಮುಂಜಾನೆಯೇ ನಗರಸಭೆ ಸದಸ್ಯರಾದ ರಾಧಾ, ಶ್ವೇತಾಮಂಜುನಾಥ್, ದಫೇದಾರ್ ಕೃಷ್ಣೇಗೌಡ ಸೇರಿದಂತೆ ಸಿಬಂದಿಗಳೊಂದಿಗೆ ಆಗಮಿಸಿ ಸ್ಥಳಪರಿಶೀಲಿಸಿ ಕಟ್ಟಿಕೊಂಡಿದ್ದ ಮಣ್ಣನ್ನು ಜೆಸಿಬಿಯಂತ್ರದ ಮೂಲಕ ತೆರವುಗೊಳಿಸಿ ನೀರು ಹರಿಯಲು ಅವಕಾಶ ಮಾಡಿಕೊಟ್ಟರು. ಈ ವರ್ಷದಲ್ಲಿ ಎರಡನೇ ಬಾರಿಗೆ ಅನಾಹುತ ಸೃಷ್ಟಿಸಿದೆ.

ಏರಿ ಮೇಲೆ ಹರಿದ ನೀರು, ರಸ್ತೆಗಳು ಬಂದ್
ಬಾರೀ ಮಳೆಯಿಂದಾಗಿ ಹನಗೋಡು-ಹುಣಸೂರು ಮುಖ್ಯ ರಸ್ತೆ ಬದಿಯ ತಟ್ಟೆಕೆರೆಯ ಕೆರೆ ಸಂಪೂರ್ಣ ಭರ್ತಿಯಾಗಿ ರಸ್ತೆ ಮೇಲೆ, ನಾಲೆ ಏರಿ ಮೇಲೆ, ಹೈರಿಗೆ ಕೆರೆಯ ನಾಲೆಯಲ್ಲಿ ಅಪಾರಪ್ರಮಾಣದ ನೀರು ಹರಿದು ರಸ್ತೆ ಬಂದಾಗಿತ್ತು. ಇನ್ನು ಹೈರಿಗೆ-ತಟ್ಟೆಕೆರೆ ರಸ್ತೆ ಮೇಲೂ ನೀರು ಹರಿಯಿತು. ಬೆಳಗ್ಗೆ 10ರ ನಂತರ ನೀರಿನ ಇಳಿಮುಖವಾಗಿ ವಾಹನಗಳು ಸಂಚರಿಸಿದವು.

Advertisement

ಬೆಳೆ ನಾಶ
ಧರ್ಮಾಪುರ ಜಿ.ಪಂ.ವ್ಯಾಪ್ತಿಯ ಎಲ್ಲೆ ಕೆರೆಗಳು ಭರ್ತಿಯಾಗಿ ನಾಟಿ ಮಾಡಿದ್ದ ಭತ್ತದ ಬೆಳೆಯನ್ನು ಕೊಚ್ಚಿ ಹಾಕಿದ್ದು, 100 ಎಕರೆಯಷ್ಟು ಪ್ರದೇಶದಲ್ಲಿ ಬೆಳೆದಿದ್ದ ಭತ್ತದ ಫಸಲು ನೀರಿನಲ್ಲಿ ಕೊಳೆಯುತ್ತಿದೆ. ಅದೇರೀತಿ ಹನಗೋಡು ಭಾಗದಲ್ಲೂ ಅಪಾರ ಪ್ರಮಾಣದ ಬೆಳೆಗಳ ಮೇಲೆ ನೀರು ಹರಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next