Advertisement

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

11:34 PM Apr 19, 2024 | Team Udayavani |

ಅಬುದಾಭಿ: ತೀವ್ರ ಮಳೆಯಿಂದಾಗಿ ದುಬಾೖಯಲ್ಲಿ ಪ್ರವಾಹದ ಪರಿಸ್ಥಿತಿ ಉಂಟಾಗಿದೆ. ಹೀಗಾಗಿ ದುಬಾೖ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಥವಾ ಈ ಮಾರ್ಗದಲ್ಲಿ ಪ್ರಯಾಣಿಸಲು ಯೋಜಿಸಿರುವ ಭಾರತೀಯರು ಕೆಲವು ದಿನಗಳ ಕಾಲ ತಮ್ಮ ಪ್ರಯಾಣವನ್ನು ಮುಂದೂಡುವಂತೆ ಯುಎಇ ಯಲ್ಲಿರುವ ಭಾರತೀಯ ರಾಯ ಭಾರಿ ಕಚೇರಿ ಸಲಹೆ ನೀಡಿದೆ.

Advertisement

ದಾಖಲೆ ಮಳೆಗೆ ದುಬಾೖ ಮತ್ತು ಸುತ್ತಮುತ್ತ ಪ್ರವಾಹ ಉಂಟಾಗಿದೆ. ದುಬಾೖ ಅಂ.ರಾ. ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಮತ್ತೆ ಸೇವೆ ಆರಂಭವಾಗುವವರೆಗೂ ದುಬಾೖಗೆ ಪ್ರಯಾಣಿಸದಂತೆ ಸಲಹೆ ನೀಡಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next