ವಿಜಯಪುರ: ಜಿಲ್ಲೆಯಲ್ಲಿ ಶುಕ್ರವಾರ ಸಂಜೆಯಿಂದ ಆರಂಭವಾಡಿರುವ ಮಳೆ ಶನಿವಾರ ಬೆಳಗಿನ ವರೆಗೆ 34.58 ಮಿಲಿಮೀಟರ್ ಸುರಿದಿದೆ. ಮಳೆಗೆ ವಿಜಯಪುರ ಜಿಲ್ಲೆಯ ಜನತೆ ತತ್ತರಿಸಿದೆ.
ನಿರಂತರ ಮಳೆಗೆ ಜಿಲ್ಲೆ ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಜಿಟಿಜಿಟಿ ಮಳೆಯ ಕಾರಣ ಬೆಳೆ ಬೆಳೆದು ನಿಂತಿರುವ ಜಮೀನುಗಳಲ್ಲಿ ನೀರು ನಿಂತಿದ್ದು, ಅಪಾರ ಪ್ರಮಾಣದ ಬೆಳೆ ಹಾನಿಯ ಭೀತಿ ಎದುರಾಗಿದೆ.
ಮುದ್ದೇಬಿಹಾಳ ತಾಲ್ಲೂಕ ನಾಲತವಾಡ ಪಟ್ಟಣ ಪಂಚಾಯತ್ ಅವೈಜ್ಞಾನಿಕವಾಗಿ ನಿರ್ಮಿಸಿರುವ ಕಾಂಕ್ರೀಟ್ ಸಿಮೆಂಟ್ ರಸ್ತೆಯಿಂದ ಮನೆಗಳ ಗೋಡೆಗಳಲ್ಲಿ ನೀರು ಸೋರಿಕೆಯಾಗುತ್ತಿದೆ. ಇದರಿಂದ ಗ್ರಾಮದ ವಿನಾಯಕ ನಗರ ಪ್ರದೇಶ ನಿವಾಸಿಗಳೂ ತತ್ತರಿಸಿದ್ದಾರೆ.
ಇದನ್ನೂ ಓದಿ: ಚಿತ್ರೀಕರಣದ ವೇಳೆ ಅನಾರೋಗ್ಯ: ಸ್ಯಾಂಡಲ್ ವುಡ್ ನಟ ಶರಣ್ ಆಸ್ಪತ್ರೆಗೆ ದಾಖಲು
ಮನೆಗಳಿಗೂ ಸೋರಿಕೆಯಾಗಿ ನುಗ್ಗುತ್ತಿರುವ ನೀರನ್ನು ಹೊರ ಹಾಕಲು ಹೆಣಗಾಡುತ್ತಿರುವ ಸ್ಥಳೀಯರು, ಪಟ್ಡಣ ಪಂಚಾಯತ್ ಅಧಿಕಾರಗಳ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಮುದ್ದೇಬಿಹಾಳ, ತಾಳಿಕೋಟಿ, ಆಲಮೇಲ, ಸಿಂದಗಿ, ದೇವರಹಿಪ್ಪರಗಿ, ಬಸವನಬಾಗೇವಾಡಿ, ಕೊಲ್ಹಾರ, ಬಬಲೇಶ್ವರ, ತಿಕೋಟ, ವಿಜಯಪುರ ತಾಲೂಕ ಸೇರಿದಂತೆ ಜಿಲ್ಲೆಯ ಬಹುತೇಕ ಎಲ್ಲೆಡೆ ನಿರಂತರ ಮಳೆ ಸುರಿಯುತ್ತಿದೆ.