Advertisement

ಮೂರು ದಿನದ ಹಿಂದೆ ಕಾಣೆಯಾಗಿದ್ದ ವೃದ್ಧೆ ಶವವಾಗಿ ಪತ್ತೆ! ಚಿಕ್ಕಮಗಳೂರನಲ್ಲಿ ಮಳೆಗೆ ಐದನೇ ಬಲಿ

02:03 PM Aug 09, 2020 | keerthan |

ಚಿಕ್ಕಮಗಳೂರು: ಈ ಬಾರಿಯ ಮಹಾಮಳೆಗೆ ಜಿಲ್ಲೆಯಲ್ಲಿ ಐದನೇ ಜೀವಹಾನಿಯಾಗಿದೆ. ಮೂರು ದಿನದ ಹಿಂದೆ ಕಾಣೆಯಾಗಿದ್ದ ವೃದ್ಧೆಯೋರ್ವರು ಇಂದು ಶವವಾಗಿ ಪತ್ತೆಯಾಗಿದ್ದಾರೆ.

Advertisement

ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸೋಮವತಿ ನದಿಯಲ್ಲಿ ಕೊಚ್ಚಿ ಹೋಗಿ ವೃದ್ಧೆ ಸಾವನ್ನಪ್ಪಿದ್ದಾರೆ. ಮೃತರನ್ನು ತರುವೆ ಗ್ರಾಮದ ರತ್ನಮ್ಮ (70) ಎಂದು ಗುರುತಿಸಲಾಗಿದೆ.

ಮೂರು ದಿನಗಳ ಹಿಂದೆ ಹಳ್ಳ ದಾಟಿ ಹೋಗುವಾಗ ರತ್ನಮ್ಮ ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಇಂದು ಎರಡು ಕಿಲೋಮೀಟರ್ ದೂರದಲ್ಲಿ ಮೃತದೇಹ ಪತ್ತೆಯಾಗಿದೆ. ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಪ್ರಾಣಿಗಳ ಪರದಾಟ: ಕುದುರೆಮುಖ ಪ್ರದೇಶದ ವ್ಯಾಪ್ತಿಯಲ್ಲಿ ಭಾರಿ ಮಳೆಯಾಗುತ್ತಿದ್ದು, ಭದ್ರೆಯ ಸುಳಿಗೆ ಸಿಲುಕಿ ಪ್ರಾಣಿಗಳು ಒದ್ದಾಡುತ್ತಿವೆ. ಕಳಸದ ಕೋಟೆ ಹೊಳೆ ಸೇತುವೆ ಬಳಿ ಭದ್ರಾ ನದಿಯಲ್ಲಿ‌ ಕಡವೆಯ ಮೃತದೇಹವೊಂದು ತೇಲಿಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next