ನವದೆಹಲಿ: ರಾಷ್ಟ್ರರಾಜಧಾನಿಯಲ್ಲಿ ಶನಿವಾರ ಸಾಯಂಕಾಲ ಉತ್ತಮ ಮಳೆಯಾಗಿದೆ. ಇದರಿಂದಾಗಿ ಇಲ್ಲಿನ ವಾಯುಮಾಲಿನ್ಯ ಮಟ್ಟ ಹಾಗೂ ವಾತಾವರಣದಲ್ಲಿನ ಬಿಸಿ ಮಟ್ಟಗಳು ಇಳಿಮುಖವಾಗಿವೆ.
ಮೋಡ ಕವಿದ ವಾತಾವರಣ ಹಾಗೂ ಪ್ರತಿಕೂಲ ಹವಾಮಾನದ ಕಾರಣದಿಂದ ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸುಮಾರು 14 ವಿಮಾನಗಳ ಸಂಚಾರ ಮಾರ್ಗವನ್ನು ಬದಲಿಸಲಾಗಿದೆ.
ದೆಹಲಿಯಲ್ಲಿ ಇಂದು ಗರಿಷ್ಠ ತಾಪಮಾನ 27.3 ಡಿಗ್ರಿ ಸೆಲ್ಷಿಯಸ್ ದಾಖಲಾಗಿತ್ತು ಇದು ಪ್ರಸಕ್ತ ಋತುವಿನ ಸಾಮಾನ್ಯ ತಾಪಮಾನಕ್ಕಿಂತ 2 ಡಿಗ್ರಿ ಸೆಲ್ಷಿಯಸ್ ಅಧಿಕವಾಗಿದೆ. ಇನ್ನು ಕನಿಷ್ಟವೆಂದರೆ 16.2 ಡಿಗ್ರಿ ಸೆಲ್ಷಿಯಸ್ ತಾಪಮಾನ ದಾಖಲಾಗಿದೆ.
ಶನಿವಾರ ಸಾಯಂಕಾಲ 5.30 ಗಂಟೆಯವರೆಗೆ 3.5 ಮಿಮಿ ಮಳೆಪ್ರಮಾಣ ದಾಖಲಾಗಿತ್ತು. ಇಲ್ಲಿನ ಲೋಧಿ ರಸ್ತೆಯಲ್ಲಿ ಗರಿಷ್ಟ 3.8 ಮಿಮಿ ಮಳೆ ಪ್ರಮಾಣ ದಾಖಲಾಗಿದೆ. ಮಳೆಯ ಕಾರಣದಿಂದ 100 ಪ್ರತಿಶತ ತೇವಾಂಶ ಪ್ರಮಾಣ ದಾಖಲಾಗಿದೆ.