Advertisement
ಮುಂಜಾನೆಯಿಂದ ನಿರಂತವಾಗಿ ಗಾಳಿ ಮಳೆಯಾಗುತ್ತಿದ್ದ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ಜನಸಂಚಾರ ವಿರಳವಾಗಿತ್ತು. 6ರಿಂದ 10 ವರೆಗಿನ ಅಗತ್ಯ ವಸ್ತು ಖರೀದಿ ಸಮಯದಲ್ಲಿ ಅಂಗಡಿಗಳಲ್ಲಿ ನಿತ್ಯ ಕಾಣುವ ಜನ ದಟ್ಟಣೆ ಕಂಡು ಬಂದಿಲ್ಲ. ನಗರದ ವಿವಿಧ ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸ್ ಸಿಬಂದಿಗಳು ಮಳೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದೃಶ್ಯಗಳು ಕಂಡು ಬಂತು.
ಜಿಲ್ಲೆಯಲ್ಲಿ ಕಳೆದೊಂದು ತಿಂಗಳಿನಿಂದ ಅಂಗಡಿಮುಂಗಟ್ಟುಗಳು ಬಂದ್ ಮಾಡಲಾಗಿದೆ. ಇದರಿಂದಾಗಿ ಮಳೆಗಾಲದ ಪೂರ್ವ ಸಿದ್ಧತೆ ಭಾಗವಾದ ರೈನ್‌ಕೋಟ್, ಕೊಡೆ ಖರೀದಿಗೆ ಹಿನ್ನಡೆಯಾಗಿದೆ. ಉದ್ಯೋಗ ನಿಮಿತ್ತ ಹೊರಗಡೆ ಬಂದ ಜನರು ಮಳೆಯಿಂದ ರಕ್ಷಣೆ ಪಡೆಯಲು ಬಸ್ ನಿಲ್ದಾಣಗಳನ್ನು ಆಶ್ರಯಿಸುತ್ತಿರುವ ದೃಶ್ಯ ಕಂಡು ಬಂತು. ವಿವಿಧೆಡೆ ವಿದ್ಯುತ್ ವ್ಯತ್ಯಯ
ನಿರಂತವಾದ ಗಾಳಿ ಮಳೆಯಿಂದಾಗಿ ಜಿಲ್ಲೆಯಾದ್ಯಂತ ವಿವಿಧ ಕಡೆಯಲ್ಲಿ ವಿದ್ಯುತ್ ಕಂಬ, ಟ್ರಾನ್ಸ್‌ಫಾರ್ಮರ್, ವಿದ್ಯುತ್ ತಂತಿಗಳು ನೆಲಕ್ಕೆ ಉರುಳಿದೆ. ಏಕಕಾಲದಲ್ಲಿ ವಿವಿಧೆಡೆಯಲ್ಲಿ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ದುರಸ್ತಿ ಕಾರ್ಯದಲ್ಲಿ ವಿಳಂಬವಾಗಿದ್ದು, ಇದರಿಂದಾಗಿ ವಿವಿಧ ತಾಲೂಕಿನಲ್ಲಿ ಶನಿವಾರ ಮುಂಜಾನೆಯಿಂದ ವಿದ್ಯುತ್ ವ್ಯತ್ಯಯವಾಗಿದೆ. ನಗರದ ವಿವಿಧೆಡೆಯಲ್ಲಿ ಕಂಬದ ಮೇಲೆ ಬಿದಿರುವ ಮರಗಳನ್ನು ತೆರವುಗೊಳಿಸುವ ದೃಶ್ಯ ಕಂಡು ಬಂತು.
Related Articles
Advertisement
ಶುಕ್ರವಾರ ತಡ ರಾತ್ರಿಯಿಂದ ಪ್ರಾರಂಭವಾದ ಮಳೆ ಶನಿವಾರ ತುಸು ವೇಗ ಪಡೆದುಕೊಂಡು ನಿರಂತರವಾಗಿ ಮಳೆಯಾಗಿದೆ. ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಮುಂದಿನ 4 ದಿನವೂ ಭಾರೀ ಮಳೆಯಾಗಲಿದೆ. ಜೂ.12ರ ಬೆಳಗ್ಗೆ 8.30ರ ಹಿಂದಿನ 24 ಗಂಟೆಯಲ್ಲಿ ಉಡುಪಿ 37.9 ಮಿ.ಮೀ , ಕಾರ್ಕಳ 38.2 ಮಿ.ಮೀ., ಬ್ರಹ್ಮಾವರ 52.1 ಮಿ.ಮೀ., ಕಾಪು 15.7 ಮಿ.ಮೀ., ಕುಂದಾಪುರ 42.8ಮಿ.ಮೀ., ಬೈಂದೂರು 59.9ಮಿ.ಮೀ., ಹೆಬ್ರಿ 65.3 ಮಿ.ಮೀ. ಮಳೆಯಾಗಿದ್ದು ಜಿಲ್ಲೆಯಾದ್ಯಂತ ಒಟ್ಟು 46.6 ಮಿ.ಮೀ. ಮಳೆಯಾಗಿದೆ.
ಜಿಲ್ಲೆಯಾದ್ಯಂತ ಮಳೆಯಾಗುತ್ತಿದೆ. ವಿದ್ಯುತ್ ಕಂಬ, ತಂತಿ, ಟ್ರಾನ್ಸ್‌ಫಾರ್ಮರ್‌ಗಳಿಗೆ ಹಾನಿಯಾಗಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಿದೆ. ಮೆಸ್ಕಾಂ ಸಿಬಂದಿಗಳು ದುರಸ್ತಿ ಕಡೆಗೆ ಹೆಚ್ಚಿನ ಗಮನ ಹರಿಸಲಾಗಿದೆ.– ನರಸಿಂಹ ಪಂಡಿತ್, ಅಧಿಕ್ಷಕ ಎಂಜಿನಿಯರ್, ಮೆಸ್ಕಾಂ, ಉಡುಪಿ.