Advertisement
ಉಡುಪಿ, ಮಣಿಪಾಲ, ಮಲ್ಪೆ ಸುತ್ತಮುತ್ತಲಿನ ಭಾಗದಲ್ಲಿ ಮುಂಜಾನೆ ಕೆಲಕಾಲ ನಿರಂತರ ಮಳೆಯಾಗಿದ್ದು, ತಗ್ಗು ಪ್ರದೇಶ ಗದ್ದೆಗಳಲ್ಲಿ ನೆರೆ ಆವರಿಸಿತ್ತು. ಮಧ್ಯಾಹ್ನ ಬಳಿಕ ಮಳೆ ಕಡಿಮೆಯಾಗಿದ್ದು, ನೆರೆ ಪ್ರಮಾಣ ಕೊಂಚ ತಗ್ಗಿದೆ. ಗಾಳಿ ಮಳೆಗೆ ಹಲವೆಡೆ ಹಾನಿ ಸಂಭವಿಸಿದ್ದು, ವಿದ್ಯುತ್ ವ್ಯತ್ಯಯ ಉಂಟಾಗಿತ್ತು.ಕಾರ್ಕಳ 87.7., ಕುಂದಾಪುರ 82.6., ಉಡುಪಿ 117.7, ಬೈಂದೂರು 97.7., ಬ್ರಹ್ಮಾವರ 97.0, ಕಾಪು 77.4, ಹೆಬ್ರಿ 107.7 ಮಿ. ಮೀ. ಮಳೆಯಾಗಿದೆ. ಶನಿವಾರ ಬೆಳಗ್ಗೆ 8.30ರ ಹಿಂದಿನ 24 ಗಂಟೆಗಳ ಕಾಲ 93.4 ಮಿ. ಮೀ. ಸರಾಸರಿ ಮಳೆಯಾಗಿದೆ.