Advertisement
ಜಡಿ ಮಳೆಯ ಕಾರಣದಿಂದಾಗಿ ರಸ್ತೆಗಳು ಹಾಳಾಗಿದ್ದವು. ಇತ್ತೀಚಿಗೆ ಹಾಕಿದ್ದ ಡಾಂಬರು ಕಿತ್ತು ಬಂದು ಗುಂಡಿಗಳನ್ನು ಮೂಡಿಸಿತ್ತು. ಈ ಮೂಲಕ ಕಾಮಗಾರಿಯ ಗುಣಮಟ್ಟವನ್ನು ಸಾರ್ವಜನಿಕವಾಗಿ ಸಾರಿ ಹೇಳಿತ್ತು. ಜಿಲ್ಲಾ ಕೇಂದ್ರ ಸೇರಿದಂತೆ ಬಹುತೇಕ ಗ್ರಾಮೀಣ ರಸ್ತೆಗಳು ಸಂಚಾರಕ್ಕೆ ಯೋಗ್ಯವಿಲ್ಲದಂತಾಗಿದ್ದವು.
Related Articles
Advertisement
ವ್ಯಾಪಾರಕ್ಕೂ ಪೆಟ್ಟು: ಮಳೆ, ಗಾಳಿಯ ಕಾರಣದಿಂದ ದೇಹವನ್ನು ಬೆಚ್ಚಗಿರಿಸಲು ಜನತೆ ಉಣ್ಣೆಯ ಬಟ್ಟೆಗಳು, ಜರ್ಕಿನ್, ಶಾಲು, ಟೋಪಿಗಳಿಗೆ ಮೊರೆ ಹೋದರು. ತೀರಾ ಅಗತ್ಯವಿದ್ದರೆ ಮಾತ್ರವೇ ಮನೆಗಳಿಂದ ಹೊರ ಬರುತ್ತಿದ್ದರು. ಸಂಜೆಯ ವೇಳೆಯ ವ್ಯಾಪಾರ ವಹಿವಾಟು ತೀರಾಕಡಿಮೆ ಎನ್ನುವಂತಿತ್ತು.
ದೊಡ್ಡ ಕಾರ್ಯಕ್ರಮ ಮುಂದಕ್ಕೆ: ಜಡಿಮಳೆ, ಚಳಿಗಾಳಿಯ ಪರಿಣಾಮದಿಂದ ಬಹುತೇಕ ದೊಡ್ಡ ಕಾರ್ಯಕ್ರಮಗಳು ಮುಂದೂಡಲ್ಪಟ್ಟವು. ನಿಗದಿತವಾಗಿದ್ದ ಮದುವೆಗಳು ನಡೆದವಾದರೂ, ನಿರೀಕ್ಷಿತ ಜನರ ಆಗಮನ ಕಾಣಿಸುತ್ತಿರಲಿಲ್ಲ. ನಿತ್ಯವೂ ಪಾರ್ಕ್ ಮತ್ತಿತರ ಸಾರ್ವಜನಿಕ ಸ್ಥಳಗಳಲ್ಲಿ ವಾಕಿಂಗ್, ಯೋಗ, ಕರಾಟೆ, ಜಿಮ್‌ಗೆ ತೆರಳುತ್ತಿದ್ದವರು ಜಡಿ ಮಳೆಯಿಂದ ತಮ್ಮ ನಿತ್ಯದ ಕಾರ್ಯಚಟುವಟಿಕೆಗಳಿಂದ ದೂರ ಉಳಿದಿದ್ದು ಸಾಮಾನ್ಯವಾಗಿತ್ತು. ಸೋಮವಾರ ಬೆಳಿಗ್ಗೆಯಿಂದಲೇ ಬಿಸಿಲು ಕಾಣಿಸಿಕೊಂಡು ಸಂಜೆಯವರೆಗೂ ಬಿಸಿಲಿನ ವಾತಾವರಣಇದ್ದುದ್ದರಿಂದ ಜನತೆಕೊಂಚ ಮಟ್ಟಿಗೆ ಜಡಿಮಳೆಕಾಟದಿಂದಚೇತರಿಸಿಕೊಳ್ಳುವಂತಾಗಿತ್ತು.
ನೆನೆದ ಕಡತಗಳು: ಮಳೆಯಿಂದಾಗಿ ಶಿಥಿಲಗೊಂಡಿ ರುವ ಕಟ್ಟಡಗಳು ಕೆಲವೆಡೆ ಕುಸಿದು ಬಿದ್ದಿದ್ದು, ಕೆಲವು ಬೀಳುವ ಸಾಧ್ಯತೆಯಿಂದ ಭೀತಿ ಹುಟ್ಟಿಸಿವೆ. ಹಳೆಯ ಕಟ್ಟಡದ ಸರಕಾರಿ ಕಚೇರಿಗಳು ಮಳೆಯಿಂದಾಗಿ ಸೋರುತ್ತಿದ್ದ ಕಾರಣ ಕಡತಗಳು ಸಂಪೂರ್ಣ ನೆನೆದು ಹೋಗಿರುವ ಘಟನೆಗಳು ನಡೆದಿವೆ. ಸೋಮವಾರ ಕಂಡು ಬಂದ ಬಿಸಿಲಿಗೆ ಕಡತಗಳನ್ನು ಬಿಸಿಲಿಗಿಟ್ಟು ಒಣಗಿಸುತ್ತಿದ್ದ ದೃಶ್ಯವುಹಳೇಡೀಸಿ ಕಚೇರಿಆವರಣದ ಕಚೇರಿಗಳಲ್ಲಿಕಂಡುಬಂದಿತು. ಆದರೂ, ಸೋಮವಾರ ಸಂಜೆ ವೇಳೆಗೆ ಮತ್ತೆ ಮೋಡಕವಿದ ವಾತಾವರಣಕಂಡು ಬಂದಿದ್ದರಿಂದ ಸಾರ್ವಜನಿಕರು ಇನ್ನೆಷ್ಟು ದಿನ ಈ ಜಡಿಮಳೆ ಚಳಿಗಾಳಿಯಕಾಟ ಎಂದು ಗೊಣಗುವಂತಾಗಿದೆ.
ಜ್ವರದಿಂದ ಬಳಲಿದ ಜನ : ಕೊರೊನಾ ನೆಗೆಟಿವ್ ಇದ್ದರೂ ಜ್ವರ ಬಾಧೆಯಿಂದ ಜನರು ನರಳುತ್ತಿರುವುದು, ಒಬ್ಬರಿಗೆ ಜ್ವರಕಾಣಿಸಿಕೊಂಡು ಇಡೀ ಕುಟುಂಬ ಜ್ವರದಿಂದ ನರಳುತ್ತಿದ್ದುದು ಸಾಮಾನ್ಯ ಎನ್ನುವಂತಾಗಿತ್ತು. ಇದು ಜನರ ಆತಂಕಕ್ಕೂಕಾರಣವಾಗಿತ್ತು. ಆದರೆ, ಹೆಚ್ಚಿನ ಪ್ರಾಣಹಾನಿ ಇಲ್ಲದೆ ಒಂದಷ್ಟು ಸಾವಿರ ರೂ. ಖರ್ಚು ಮಾಡಿಸಿ ಒಂದು ವಾರದೊಳಗೆ ಜ್ವರ ವಾಸಿಯಾಗುತ್ತಿದ್ದುದು ಜನರನ್ನುಕೊಂಚ ಸಮಾಧಾನವಾಗುವಂತೆ ಮಾಡಿತು.
-ಕೆ.ಎಸ್.ಗಣೇಶ್