ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಸತತವಾಗಿ ಸುರಿಯುತ್ತಿರುವ ಮಳೆ ಪ್ರಭಾವದಿಂದ ಬಹುತೇಕ ಕೆರೆ ಕುಂಟೆಗಳಿಗೆ ಕೋಡಿ ಹರಿಯುತ್ತಿದೆ ಭಾನುವಾರ ಜಿಲ್ಲೆಯ ಗೌರಿ ಬಿದನೂರು ತಾಲೂಕಿನಲ್ಲಿ ಸಣ್ಣ ನೀರಾವರಿ ಇಲಾಖೆಯ ಕೆರೆಯ ಕಟ್ಟೆ ಹೊಡೆದು ಹೋಗಿ ಸುಮಾರು ನೂರಾರು ಎಕರೆ ಬೆಳೆ ನಾಶವಾಗಿ ಮನೆಗಳಿಗೆ ಹಾನಿಯಾಗಿದೆ.
ಸಣ್ಣ ನೀರಾವರಿ ಅಧಿಕಾರಿಗಳ ನಿರ್ಲಕ್ಷ್ಯ ದಿಂದ ಕೆರೆಯ ನೀರು ಹೊರಹರಿದಿದೆ. ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆ ಯ 201 ಕೆರೆಗಳು ಮತ್ತು ಜಿಪಂನ 1300ಕ್ಕೂ ಅಧಿಕ ಕೆರೆಗಳಿದ್ದು ಇತ್ತೀಚೆಗೆ ಸುರಿಯುತ್ತಿರುವ ಮಳೆ ಯಿಂದಾಗಿ ಕೆರೆ ಗಳು ಭರ್ತಿಯಾಗಿ ಸೂಕ್ತ ರೀತಿಯಲ್ಲಿ ನಿರ್ವಹಣೆ ಇಲ್ಲದೆ ತನ್ನ ಅಸ್ತಿತ್ವ ಕಳೆದು ಕೊಳ್ಳುವ ಅಪಾಯ ತಲೆದೋರಿದೆ. ಜಿಲ್ಲೆಯಲ್ಲಿ ಸತತವಾಗಿ ಸುರಿಯುತ್ತಿದ್ದು, ಕೆರೆಗಳು ಅಭದ್ರತೆಯಲ್ಲಿವೆ. ಸಣ್ಣ ನೀರಾ ವರಿ ಮತ್ತು ಜಿಪಂ ಅಧಿಕಾರಿಗಳು ಕೆರೆಗಳನ್ನು ಭದ್ರಗೊಳಿಸಿ ಅಭಿವೃದ್ಧಿ ಗೊಳಿಸಲು ನಿರ್ಲಕ್ಷ್ಯವಹಿಸಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಎಂ.ಎನ್ ನಾಗರಾಜ್ ಅವರು ಸೆಪ್ಟೆಂಬರ್‌ನಲ್ಲಿ ನಡೆಸಿದ ಕೆರೆಗಳನ್ನು ಸಂರಕ್ಷಣೆ ಮಾಡುವ ಕಾರ್ಯಪಡೆಯ ಸಭೆಯಲ್ಲಿ ಜಿಲ್ಲೆಯಲ್ಲಿರುವ ಕೆರೆ-ಕುಂಟೆಗಳು ಸ್ಥಿತಿಗಳು ಖುದ್ದು ಪರಿ ಶೀಲನೆ ನಡೆಸಿ ಯಾವುದಾದರೂ ಕೆರೆ ಶಿಥಿಲ ವ್ಯವಸ್ಥೆಯಲ್ಲಿ ಇದ್ದರೆ ಮಾಹಿತಿ ಯನ್ನು ನೀಡಬೇಕು ಎಂದು ಸೂಚಿಸಿದ್ದರು. ಆದರೆ ಸಭೆಯಲ್ಲಿ ಹಾಜರಿದ್ದ ಅಧಿಕಾರಿ ಗಳು ಜಿಲ್ಲೆಯಲ್ಲಿ ವ್ಯಾಪಕವಾಗಿ ಮಳೆ ವ್ಯಾಪಕವಾಗಿರುವ ಕಾರಣ ಕೆರೆಗಳು ಭದ್ರವಾಗಿವೆ ಎಂದಿದ್ದರು. ಇತ್ತೀಚೆಗೆ ಜಿಲ್ಲೆಯ ಗೌರಿಬಿದನೂರು ಕೆರೆ ಒಡೆದಿದ್ದು, ಸುತ್ತಮುತ್ತಲ ಬೆಳೆ ನಷ್ಟವಾಗಿದೆ.
ಹಿರಿಯ ಅಧಿಕಾರಿಗಳ ಭೇಟಿ: ಸಣ್ಣ ನೀರಾವರಿ ಇಲಾಖೆಯ ಚೀಫ್ ಇಂಜಿನಿಯರ್ ರಾಘವನ್ ಅವರು ವಿಷಯ ತಿಳಿದ ಕೂಡಲೇ ತಾತ್ಕಾಲಿಕವಾಗಿ ಕೆರೆ ಯನ್ನು ಭದ್ರಗೊಳಿಸಲು ಕ್ರಮವಹಿಸಿ ಸಣ್ಣ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಶ್ರೀನಿವಾಸ್‌ರೆಡ್ಡಿಗೆ ಸೂಚನೆ ನೀಡಿದ್ದರು. ನಿರೀಕ್ಷೆಗಿಂತ ಹೆಚ್ಚು ಮಳೆ ಪರಿಣಾಮ ಅಧಿಕಾರಿಗಳು ವಹಿಸಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.
ಸಿಎಂ ಬಸವರಾಜ ಬೊಮ್ಮಾಯಿ, ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಸುಧಾಕರ್ ಅವರು ಭೇಟಿ ನೀಡಿ ಹೋದರೂ ಇದು ವರೆಗೂ ಕೆರೆಯನ್ನು ಅಭಿವೃದ್ಧಿಗೊಳಿಸಲು ಸಾಧ್ಯವಾಗಿಲ್ಲ ಜೊತೆಗೆ ರೈತರಿಗೆ ಪರಿ ಹಾರವೂ ಸಿಗಲಿಲ್ಲ ಎನ್ನುತ್ತಾರೆ ರೈತ ವಿಜಯಬಾವ ರೆಡ್ಡಿ.
ಜಿಲ್ಲೆಯ ಗೌರಿಬಿದನೂರು ತಾಲೂಕಿನಲ್ಲಿ ಕೆರೆಕಟ್ಟೆ ಒಡೆದುಗೋಗಿ ಬೆಳೆ ನಾಶವಾಗಿರುವ ಅಧಿಕಾರಿಗಳಿಗೆ ಮಾಹಿತಿ ಪಡೆದುಕೊಳ್ಳಲಾಗಿದೆ. ಈಗಾಗಲೇ ಸುಮಾರು 128 ಎಕರೆ ಪ್ರದೇಶದಲ್ಲಿ ಬೆಳೆ ನಾಶವಾಗಿ ಸುಮಾರು 20 ಮನೆಗಳಿಗೆ ಜಖಂಗೊಂಡಿದೆ. ಕೂಡಲೇ ಪರಿಹಾರವನ್ನು ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
– ಎನ್.ಎಂ.ನಾಗರಾಜ್ ಜಿಲ್ಲಾಧಿಕಾರಿ ಚಿಕ್ಕಬಳ್ಳಾಪುರ
ಜಿಲ್ಲೆಯಲ್ಲಿ ವ್ಯಾಪಕವಾಗಿ ಮಳೆ ಬೀಳುತ್ತಿದೆ ಆದರೆ ಜಲ ಮೂಲಗಳಾದ ಕೆರೆ-ಕುಂಟೆಗಳನ್ನುಭದ್ರಗೊಳಿಸಿ ಅಭಿವೃಧಿœಗೊಳಿಸುವುದರಲ್ಲಿ ಸರ್ಕಾರ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ವಿಫಲರಾಗಿದ್ದಾರೆ ಅದರ ಪರಿಣಾಮ ಜಿಲ್ಲೆಯ ಗೌರಿಬಿದನೂರು ಮತ್ತು ಶಿಡ್ಲಘಟ್ಟ ತಾಲೂಕಿನ ರೈತರುಸಂಕಷ್ಟವನ್ನು ಅನುಭವಿಸಿದ್ದಾರೆ.
-ಮುನೇಗೌಡ, ಜೆಡಿಎಸ್ ಅಧ್ಯಕ್ಷ