Advertisement
ಪೂರ್ವ ಭಾಗದ ಕೆ.ಆರ್. ಪುರದಲ್ಲಿ 44.5 ಮಿಮೀ ಮಳೆಯಾಗಿದೆ. ಮಹದೇವಪುರ ಹಾಗೂ ದೊಡ್ಡನೆಕ್ಕುಂದಿಯಲ್ಲಿ ತಲಾ 33 ಮಿಮೀ ಮಳೆಯಾಗಿದೆ. ಪರಿಣಾಮ, ಪೂರ್ವಭಾಗದಲ್ಲಿ ಶನಿವಾರ ಬೈಕ್ ಸವಾರರು ಸಂಚರಿಸಲು ಪರದಾಡುವಂತಾಯಿತು.
ದಾಸನಪುರ 16 ಮಿಮೀ, ಆಲೂರು 8.5, ಹುಸ್ಕೂರು 10.5, ಮಾದನಾಯಕನಹಳ್ಳಿ 13, ಅಡಕೆಮಾರನಹಳ್ಳಿ 12.5, ಹಸೆರುಘಟ್ಟ 19.5, ಅರಕೆರೆ 17, ಶಿವಕೋಟೆ 13, ಸೊನ್ನೇನಹಳ್ಳಿ 13.5, ಐಟಿಸಿ ಜಾಲ 21.5, ಹುಣಸೆಮಾರನಹಳ್ಳಿ 16.5, ಸಿಂಗನಾಯಕನಹಳ್ಳಿ 29.5, ಚಿಕ್ಕಬಣಾವರ 10, ಬಾಗಲಗುಂಟೆ 20, ಹೂಡಿ 23, ಹೊರಮಾವು 10.5, ಎಚ್‌ಎಎಲ್ 20, ರಾಮೂರ್ತಿನಗರ 13.5, ಮಹದೇವಪುರ 33, ವರ್ತೂರು 21, ದೊಡ್ಡನೆಕ್ಕುಂದಿ 33, ಮಾರತ್ತಹಳ್ಳಿ 13, ವಿಜ್ಞಾನನಗರ 8 ಮಳೆಯಾಗಿದೆ.
Related Articles
Advertisement
ಇದನ್ನೂ ಓದಿ : ಪೆರ್ಲ : ಪ್ರೀತಿಸಿ ವಿವಾಹವಾದ ಯುವ ದಂಪತಿ ನೇಣು ಬಿಗಿದು ಆತ್ಮಹತ್ಯೆ
8 ಮರಗಳು ಧರೆಗೆ:ನಗರದಲ್ಲಿ ಮಳೆ ಮತ್ತು ಬಿರುಗಾಳಿ ಬೀಸಿದ್ದರಿಂದ ಮರಗಳು ಉರುಳಿ ಬಿದ್ದಿದ್ದು, ಮರದ ಕೊಂಬೆಗಳು ಮುರಿದು ಬಿದ್ದಿವೆ. ಕೆ.ಆರ್. ಪುರದ ವಿಜಯ ಬ್ಯಾಂಕ್ ಕಾಲೋನಿ, ಕುಂದನಹಳ್ಳಿಯ ಎಇಸಿಐ ಲೇಔಟ್, ಜಯನಗರ 4ನೇ ಬ್ಲಾಕ್, ಅತ್ತಿಗುಪ್ಪೆ, ಆಸ್ಟಿನ್‌ಟೌನ್‌ನ ಜಸ್ಮಾ ಭವನ, ಮಲ್ಲಸಂದ್ರ, ಗೆಳೆಯರ ಬಳಗದ ಎಜಿಬಿ ಬಡಾವಣೆ ಸೇರಿದಂತೆ ಹಲವೆಡೆ ಮರಗಳು ಉರುಳಿ ಬಿದ್ದಿವೆ ಎಂದು ಬಿಬಿಎಂಪಿ ಸಹಾಯವಾಣಿ ಮಾಹಿತಿ ನೀಡಿದೆ.