Advertisement
ಕುಂದಾಪುರ ಹಾಗೂ ಬೈಂದೂರು ತಾಲೂಕಿನೆಲ್ಲೆಡೆ ಸೋಮವಾರ ರಾತ್ರಿ ಭಾರೀ ಮಳೆಯಾಗಿದ್ದು, ಹಲವೆಡೆ ಗುಡುಗು, ಮಿಂಚು ಸಹಿತ ಗಾಳಿ- ಮಳೆಗೆ ಮರ ಬಿದ್ದು, ವಿದ್ಯುತ್ ಕಂಬ, ತಂತಿಗಳಿಗೆ ಹಾನಿಯಾಗಿದ್ದರಿಂದ ರಾತ್ರಿಯಿಡೀ ಹಲವೆಡೆ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಿತ್ತು.
Related Articles
Advertisement
ಶಂಕರನಾರಾಯಣ ಗ್ರಾಮದ ಗಿರಿಜಮ್ಮ ಶೆಡ್ತಿ, ಆಶಾ, ಅಭಿಷೇಕ್, ಶರಾವತಿ, ಕೊರ್ಗಿ ಗ್ರಾಮದ ಮೀನ ಬಳೆಗಾರ್ತಿ, ಶಂಕರ ಶೆಟ್ಟಿ ಹಾಗೂ ವಡೇರಹೋಬಳಿ ಗ್ರಾಮದ ಸೀತು ಅವರ ತೋಟಗಳಿಗೆ ಗಾಳಿ- ಮಳೆಯಿಂದಾಗಿ ಹಾನಿ ಉಂಟಾಗಿದೆ. ಒಟ್ಟಾರೆ 1.85 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಶಂಕರನಾರಾಯಣ: ಗ್ರಾ.ಪಂ. ನಿಯೋಗ ಭೇಟಿ
ಶಂಕರನಾರಾಯಣ ಗ್ರಾಮದ ಬೆದ್ರಕಟ್ಟೆ ಎಂಬಲ್ಲಿ ಕೊರಗ ಕಾಲೊನಿಯಲ್ಲಿ ನೆಲೆಸಿದ್ದ ಸಣ್ಣ ಶೆಡ್ ರೀತಿಯ 4-5 ಸಣ್ಣ-ಸಣ್ಣ ಮನೆಗಳ ಶೀಟು ಗಾಳಿ – ಮಳೆಗೆ ಹಾರಿ ಹೋಗಿದೆ. ಮಂಗಳವಾರ ಬೆಳಗ್ಗೆ ಗ್ರಾ.ಪಂ. ಅಧ್ಯಕ್ಷೆ ಲತಾ ದೇವಾಡಿಗ ನೇತೃತ್ವದ ಪಂ. ನಿಯೋಗ ಭೇಟಿ ನೀಡಿ, ಹೊಸ ಶೀಟು ಖರೀದಿಸಲು ವ್ಯವಸ್ಥೆ ಕಲ್ಪಿಸಿದೆ. ಈ ವೇಳೆ ಉಪಾಧ್ಯಕ್ಷ ರವಿ ಕುಲಾಲ್, ಗ್ರಾ.ಪಂ. ಸದಸ್ಯರು, ಪಿಡಿಒ ಶ್ವೇತಲತಾ, ಸಿಬಂದಿ ಉಪಸ್ಥಿತರಿದ್ದರು.