Advertisement

ಹಳೆಯಂಗಡಿ: ಸಿಡಿಲು ಬಡಿದು ಹೊತ್ತಿ ಉರಿದ ಮರ

12:03 PM Apr 14, 2022 | Team Udayavani |

ಹಳೆಯಂಗಡಿ: ಗುಡುಗು ಮಿಂಚು ಸಹಿತ ಭಾರೀ ಮಳೆಗೆ ತಾಳೆ ಮರಕ್ಕೆ ಸಿಡಿಲು ಬಡಿದು ಬೆಂಕಿಯ ಕೆನ್ನಾಲಿಗೆಯಲ್ಲಿ ಧಗಧಗನೆ ಹೊತ್ತಿ ಉರಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಹಳೆಯಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಳುವೈಲು ಎಂಬಲ್ಲಿ ಬುಧವಾರ ತಡರಾತ್ರಿ ನಡೆದಿದೆ.

Advertisement

ಭಾರಿ ಮಳೆಗೆ ವಿದ್ಯುತ್ ಅಸ್ತವ್ಯಸ್ಥಗೊಂಡಿದ್ದಲ್ಲದೇ, ಸಿಡಿಲಿನಿಂದ ಹಳೆಯಂಗಡಿಯ ಕೊಳುವೈಲು ಪ್ರದೇಶದ ಮಾಲತಿ ಎಂಬುವರ ಮನೆಯ ಆವರಣದಲ್ಲಿದ್ದ ತಾಳೆ ಮರಕ್ಕೆ ಸಿಡಿಲು ಬಡಿದು ಕ್ಷಣಾರ್ಧದಲ್ಲಿ ಬೆಂಕಿಯ ಕೆನ್ನಾಲಿಗೆಯಲ್ಲಿ ಧಗಧಗನೆ ಹೊತ್ತಿ ಉರಿದಿದೆ.

ಸ್ಥಳೀಯರೊಬ್ಬರು ನೀರಿನ ಟ್ಯಾಂಕ್ ಮೂಲಕ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದ್ದರು. ನಂತರ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಬಂದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ:ಕೈ ನಾಯಕರ ವಿರುದ್ಧ ಜಮೀರ್ ಕೋಪ; ಸುರ್ಜೇವಾಲ ಎದರು ಅಸಮಾಧಾನ ತೋಡಿದ ಜಮೀರ್ ಅಹಮದ್

ಸಿಡಿಲಿನ ಅಘಾತದಿಂದ ಮನೆಯಲ್ಲಿ ವಿದ್ಯುತ್ ಉಪಕರಣಗಳಿಗೆ ಹಾನಿಯಾಗಿದೆ. ನಷ್ಟದ ಅಂದಾಜು ಇನ್ನಷ್ಟೇ ತಿಳಿಯಬೇಕಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next