ಮಂಡ್ಯ: ಜಿಲ್ಲೆಯಲ್ಲಿ ಕಳೆದ ಬಾರಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದು ಅವಾಂತರ ಸೃಷ್ಟಿಸಿದ್ದ ಮಳೆ ರಾಯ, ಈ ಬಾರಿ ವಾಡಿಕೆಗಿಂತ ಶೇ.0.2ರಷ್ಟು ಮಾತ್ರ ಹೆಚ್ಚು ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ಏಪ್ರಿಲ್, ಮೇ ತಿಂಗಳಲ್ಲಿ ಪೂರ್ವ ಮುಂಗಾರು ಮಳೆಯೇ ಬೀಳಲಿಲ್ಲ. ಜೂನ್ ತಿಂಗಳಲ್ಲಿ ಮುಂಗಾರು ಮಳೆ ಆರಂಭಗೊಂಡರೂ ಸಮರ್ಪಕ ವಾಗಿ ಸುರಿಯಲಿಲ್ಲ. ಇದೀಗ ಜುಲೈ ಅಂತ್ಯದಲ್ಲಿ ಜಿಟಿಜಿಟಿ ಮಳೆ ನಿರಂತರವಾಗಿ ಸುರಿಯುತ್ತಿದೆ.
269.9 ಮಿ.ಮೀ ಮಳೆ: ಜಿಲ್ಲೆಯಲ್ಲಿ ಏಳು ತಾಲೂಕುಗಳಲ್ಲೂ ಜನವರಿಯಿಂದ ಜು.26ರವರೆಗೆ ಒಟ್ಟು 269.4 ಮಿ.ಮೀ ಸರಾಸರಿ ವಾಡಿಕೆ ಮಳೆಯಾಗಬೇಕಿತ್ತು. ಆದರೆ, 269.9 ಮಿ.ಮೀ ಸರಾಸರಿ ಮಳೆಯಾಗಿರುವ ಬಗ್ಗೆ ದಾಖಲಾಗಿದೆ. ಅಂದರೆ ಶೇ.0.2ರಷ್ಟು ಮಿ.ಮೀ ಮಾತ್ರ ಹೆಚ್ಚು ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ಕೆ.ಆರ್. ಪೇಟೆ 311.0 ಮಿ.ಮೀ ವಾಡಿಕೆ ಮಳೆ ಪೈಕಿ 253.3 ಮಿ.ಮೀ ಮಳೆಯಾಗಿದ್ದು, ಶೇ.18.6ರಷ್ಟು ಮಳೆ ಕಡಿಮೆಯಾಗಿದೆ. ಮದ್ದೂರು 272.3 ಮಿ.ಮೀ ವಾಡಿಕೆ ಮಳೆಯಾಗಬೇಕಿತ್ತು. ಆದರೆ, 267.5 ಮಿ.ಮೀ ಮಳೆಯಾಗಿದ್ದು, ಶೇ.1.8ರಷ್ಟು ಮಳೆ ಕಡಿಮೆ, ಮಳವಳ್ಳಿ 276.3 ಮಿ.ಮೀ ವಾಡಿಕೆ ಮಳೆಗಿಂತ 296.9 ಮಿ.ಮೀ ಮಳೆಯಾಗಿದ್ದು, ಶೇ.7.5ರಷ್ಟು ಹೆಚ್ಚು ಮಳೆಯಾಗಿದೆ. ಮಂಡ್ಯ 263.5 ಮಿ.ಮೀ ವಾಡಿಕೆ ಮಳೆಗಿಂತ 223.7 ಮಿ.ಮೀ ಮಳೆಯಾಗಿದ್ದು, ಶೇ.15.1ರಷ್ಟು ಕಡಿಮೆ, ನಾಗಮಂಗಲ 276.1 ಮಿ.ಮೀ ವಾಡಿಕೆ ಮಳೆಗಿಂತ 283.4 ಮಿ.ಮೀ ಹೆಚ್ಚು ಅಂದರೆ ಶೇ.2.6ರಷ್ಟು ಮಳೆಯಾಗಿದೆ. ಪಾಂಡವಪುರ 282.7 ಮಿ.ಮೀ ವಾಡಿಕೆಗಿಂತ 285.9 ಮಿ.ಮೀ ಮಳೆಯಾಗಿದ್ದು, ಶೇ.1.1ರಷ್ಟು ಹೆಚ್ಚು ಹಾಗೂ ಶ್ರೀರಂಗಪಟ್ಟಣದಲ್ಲಿ 264.2 ಮಿ.ಮೀ ಮಳೆಗಿಂತ 248.1 ಮಿ.ಮೀ ಮಳೆಯಾಗಿದ್ದು, ಶೇ.6.1ರಷ್ಟು ಸರಾಸರಿ ಮಳೆ ಕಡಿಮೆಯಾಗಿರುವ ಬಗ್ಗೆ ದಾಖಲಾಗಿದೆ.
5.1ರಷ್ಟು ಹೆಚ್ಚು ಮಳೆ: ಕಳೆದ ಜು.1ರಿಂದ 26ರವರೆಗೆ ಜಿಲ್ಲೆಯಲ್ಲಿ ಶೇ.5.1ರಷ್ಟು ಹೆಚ್ಚು ಮಳೆ ಬಿದ್ದಿರುವ ವರದಿಯಾಗಿದೆ. ವಾಡಿಕೆ ಮಳೆ 46.7 ಮಿ.ಮೀ ಇದ್ದು, ಪ್ರಸ್ತುತ 49.1 ಮಿ.ಮೀ ಮಳೆಯಾಗಿದೆ. ಕೆ.ಆರ್.ಪೇಟೆ 67.9 ಮಿ.ಮೀ, ಮದ್ದೂರು 45.2 ಮಿ.ಮೀ, ಮಳವಳ್ಳಿ 28.1 ಮಿ.ಮೀ, ಮಂಡ್ಯ 43.2 ಮಿ.ಮೀ, ನಾಗಮಂಗಲ 63.0 ಮಿ.ಮೀ, ಪಾಂಡವಪುರ 47.2 ಮಿ.ಮೀ ಹಾಗೂ ಶ್ರೀರಂಗಪಟ್ಟಣ 32.2 ಮಿ.ಮೀ ಸರಾಸರಿ ಮಳೆಯಾಗಿದೆ.
ಶೇ.8.3ರಷ್ಟು ಕಡಿಮೆ ಮಳೆ: ಜೂನ್‌ನಿಂದ ಜುಲೈ 26ರವರೆಗೆ ಶೇ.8.3ರಷ್ಟು ಕಡಿಮೆ ಮಳೆಯಾಗಿದೆ. 103.2 ಮಿ.ಮೀ ಸರಾಸರಿ ವಾಡಿಕೆ ಮಳೆ ಇದ್ದು, ಆದರೆ, 94.6 ಮಿ.ಮೀ ಮಾತ್ರ ಮಳೆಯಾಗಿದೆ. ಕೆ.ಆರ್.ಪೇಟೆ 117.6 ಮಿ.ಮೀ, ಮದ್ದೂರು 105.4 ಮಿ.ಮೀ, ಮಳವಳ್ಳಿ 85.9 ಮಿ.ಮೀ, ಮಂಡ್ಯ 74.4 ಮಿ.ಮೀ, ನಾಗಮಂಗಲ 108.9 ಮಿ.ಮೀ, ಪಾಂಡವ ಪುರ 79.0 ಮಿ.ಮೀ ಹಾಗೂ ಶ್ರೀರಂಗಪಟ್ಟಣ 61.5 ಮಿ.ಮೀ ಸರಾಸರಿ ಮಳೆ ದಾಖಲಾಗಿದೆ. ಏಳು ದಿನಗಳಲ್ಲಿ ಶೇ.113.8ರಷ್ಟು ಹೆಚ್ಚು ಮಳೆ: ಜು.20ರಿಂದ 26ರವರೆಗೆ ಜಿಲ್ಲೆಯಲ್ಲಿ ಶೇ.113.8ರಷ್ಟು ಸರಾಸರಿ ಮಳೆ ದಾಖಲಾಗಿದೆ. ಕೆ.ಆರ್.ಪೇಟೆ 48.9 ಮಿ.ಮೀ, ಮದ್ದೂರು 22.0 ಮಿ.ಮೀ, ಮಳವಳ್ಳಿ 15.1 ಮಿ.ಮೀ, ಮಂಡ್ಯ 27.3 ಮಿ.ಮೀ, ನಾಗಮಂಗಲ 33.4 ಮಿ.ಮೀ, ಪಾಂಡವಪುರ 30.7 ಮಿ.ಮೀ ಹಾಗೂ ಶ್ರೀರಂಗ ಪಟ್ಟಣ 18.1 ಮಿ.ಮೀ ಮಳೆ ಸುರಿದಿದೆ.
ಜಿಲ್ಲೆಯಲ್ಲಿ ಜಿಟಿಜಿಟಿ ಮಳೆ: ಪ್ರಸ್ತುತ ಜಿಲ್ಲೆಯಲ್ಲಿ ಜಿಟಿಜಿಟಿ ಮಳೆ ಸುರಿಯು ತ್ತಿದೆ. ಕಳೆದ 24 ಗಂಟೆಗಳ ಬುಧವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಜಿಲ್ಲೆಯಲ್ಲಿ 9.1 ಮಿ.ಮೀ ಸರಾಸರಿ ಮಳೆ ದಾಖಲಾಗಿದೆ. ವಾಡಿಕೆ 1.3 ಮಿ.ಮೀ ಮಳೆ ಇದ್ದು, ಶೇ. 600 ರಷ್ಟು ಹೆಚ್ಚು ಮಳೆಯಾಗಿದೆ. ಕೆ.ಆರ್.ಪೇಟೆ 11.5 ಮಿ.ಮೀ, ಮದ್ದೂರು 9.4 ಮಿ.ಮೀ, ಮಳವಳ್ಳಿ 4.4 ಮಿ.ಮೀ, ಮಂಡ್ಯ 11.2 ಮಿ.ಮೀ, ನಾಗಮಂಗಲ 11.6 ಮಿ.ಮೀ, ಪಾಂಡವಪುರ 7.8 ಮಿ.ಮೀ ಹಾಗೂ ಶ್ರೀರಂಗಪಟ್ಟಣ 4.3 ಮಿ.ಮೀ ಸರಾಸರಿ ಮಳೆ ಬಿದ್ದಿರುವ ಬಗ್ಗೆ ದಾಖಲಾಗಿದೆ.
ಜಿಲ್ಲೆಯಲ್ಲಿ ಜಿಟಿಜಿಟಿ ಮಳೆ: ಪ್ರಸ್ತುತ ಜಿಲ್ಲೆಯಲ್ಲಿ ಜಿಟಿಜಿಟಿ ಮಳೆ ಸುರಿಯು ತ್ತಿದೆ. ಕಳೆದ 24 ಗಂಟೆಗಳ ಬುಧವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಜಿಲ್ಲೆಯಲ್ಲಿ 9.1 ಮಿ.ಮೀ ಸರಾಸರಿ ಮಳೆ ದಾಖಲಾಗಿದೆ. ವಾಡಿಕೆ 1.3 ಮಿ.ಮೀ ಮಳೆ ಇದ್ದು, ಶೇ. 600 ರಷ್ಟು ಹೆಚ್ಚು ಮಳೆಯಾಗಿದೆ. ಕೆ.ಆರ್.ಪೇಟೆ 11.5 ಮಿ.ಮೀ, ಮದ್ದೂರು 9.4 ಮಿ.ಮೀ, ಮಳವಳ್ಳಿ 4.4 ಮಿ.ಮೀ, ಮಂಡ್ಯ 11.2 ಮಿ.ಮೀ, ನಾಗಮಂಗಲ 11.6 ಮಿ.ಮೀ, ಪಾಂಡವಪುರ 7.8 ಮಿ.ಮೀ ಹಾಗೂ ಶ್ರೀರಂಗಪಟ್ಟಣ 4.3 ಮಿ.ಮೀ ಸರಾಸರಿ ಮಳೆ ಬಿದ್ದಿರುವ ಬಗ್ಗೆ ದಾಖಲಾಗಿದೆ.