ಕಾಪು: ಭಾರೀ ಗಾಳಿ-ಮಳೆಗೆ ತಾಲೂಕಿನ ವಿವಿಧೆಡೆ ವಿದ್ಯುತ್ ಕಂಬಗಳ ಮೇಲೆ ಮರ ಬಿದ್ದು, ವಿದ್ಯುತ್ ವೃತ್ಯಯ ಉಂಟಾಗಿದ್ದು, ಮೆಸ್ಕಾಂಗೆ ಅಪಾರ ಹಾನಿಯುಂಟಾಗಿದೆ.
ಜು.14ರ ರವಿವಾರ ರಾತ್ರಿ ಬೀಸಿದ ಭಾರೀ ಗಾಳಿಗೆ ಕೊಪ್ಪಲಂಗಡಿ, ಮೂಳೂರು, ರಾಮನಗರ, ಕೊಂಬಗುಡ್ಡೆ, ಕರಂದಾಡಿ, ಹೇರೂರು, ಕಲ್ಯ, ಮಲ್ಲಾರು, ಪಾಂಬೂರು, ಉದ್ಯಾವರ, ಉಚ್ಚಿಲ ಪೊಲ್ಯ ಸಹಿತ ವಿವಿಧೆಡೆ ಮರ ಬಿದ್ದು ವಿದ್ಯುತ್ ಕಂಬಗಳು ಮತ್ತು ತಂತಿಗಳು ತುಂಡಾಗಿವೆ.
ಇದರಿಂದಾಗಿ ವಿದ್ಯುತ್ ಪೂರೈಕೆಯಲ್ಲಿ ವೃತ್ಯಯವುಂಟಾಗಿದ್ದು ಕಾಪು ಮೆಸ್ಕಾಂನ ಅಧಿಕಾರಿಗಳು ಮತ್ತು ಸಿಬಂದಿಗಳು ಮರ ತೆರವುಗೊಳಿಸಿ, ವಿದ್ಯುತತ ಮರು ಜೋಡಿಸುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ.