ಬೆಂಗಳೂರು: ರಾಜಧಾನಿ ನಗರಿಯ ಸೌಂದರ್ಯಕ್ಕೆ ಅಡ್ಡಿಯಾಗುತ್ತಿರುವ ಬೇಕಾಬಿಟ್ಟಿ ಅಳವಡಿಸಿದ ಆಪ್ಟಿಕಲ್ ಫೈಬರ್ ಕೇಬಲ್‌ಗಳ (ಓಎಫ್ಸಿ) ತೆರವು ಕಾರ್ಯಾಚರಣೆ ಪುನಾರಂಭಿಸಿರುವ ಬಿಬಿಎಂಪಿ, ಮಂಗಳವಾರ ಕನ್ನಿಂಗ್‌ಹ್ಯಾಂ ರಸ್ತೆ ಹಾಗೂ ಅಕ್ಕಪಕ್ಕ ಅಳವಡಿಸಿದ್ದ ಕೇಬಲ್‌ಗಳನ್ನು ತೆರವುಗೊಳಿಸಿದೆ.
ಕನ್ನಿಂಗ್‌ಹ್ಯಾಂ ರಸ್ತೆಯಲ್ಲಿ ಟೆಂಡರ್ ಶ್ಯೂರ್ ಯೋಜನೆಯಲ್ಲಿ ನಿರ್ಮಿಸಿರುವ ಪಾದಚಾರಿ ಮಾರ್ಗದಲ್ಲಿನ ಡೆಕ್‌ಗಳಲ್ಲಿ ಓಎಫ್ಸಿಳನ್ನು ಅಳವಡಿಸಿಕೊಳ್ಳುವಂತೆ ಪಾಲಿಕೆ ನೀಡಿದ್ದ ಸೂಚನೆಗಳನ್ನು ಉಲ್ಲಂ ಸಿ ಮತ್ತೆ ರಸ್ತೆಯ ಮೇಲೆ ಅಳವಡಿಸಿದ್ದ ಕೇಬಲ್‌ಗಳನ್ನು ಪಾಲಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿ ತೆರವುಗೊಳಿಸಿದರು.
ಬಿಬಿಎಂಪಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ ಗುಣಶೇಖರ್ ಹಾಗೂ ಸಮಿತಿಯ ಸದಸ್ಯರು ಈ ಸಂದರ್ಭದಲ್ಲಿ ಹಾಜರಿದ್ದು ತೆರವು ಕಾರ್ಯಾಚರಣೆ ಕುರಿತು ಪರಿಶೀಲನೆ ನಡೆಸಿದರು. ಕನ್ನಿಂಗ್‌ಹ್ಯಾಂ ರಸ್ತೆಯ ಚಂದ್ರಿಕಾ ಹೋಟೆಲ್ ಬಳಿ ಪಾದಚಾರಿ ಮಾರ್ಗದಲ್ಲಿ ಅಳವಡಿಸಲಾಗಿದ್ದ ಐಡಿಯಾ, ಏರ್‌ಟೆಲ್, ವೊಡಾ ಫೋನ್ ಸೇರಿದಂತೆ ಹಲವು ಕಂಪನಿಗಳ ಕೇಬಲ್‌ಗಳನ್ನು ಕಿತ್ತು ಹಾಕಲಾಯಿತು.
ಅಲ್ಲದೆ, ಇದೇ ಹೋಟೆಲ್ ಮುಂಭಾಗದಲ್ಲಿ ಖಾಸಗಿ ಸಂಸ್ಥೆಯೊಂದು ಅನಧಿಕೃತವಾಗಿ ಕೇಬಲ್ ಅಳವಡಿಸಿದ್ದು, ಈ ಬಗ್ಗೆ ಪಾಲಿಕೆ ನೋಟಿಸ್ ಜಾರಿ ಮಾಡಿದ್ದರೂ ಅದಕ್ಕೆ ಮಾನ್ಯತೆ ನೀಡಿರಲಿಲ್ಲ. ಅಲ್ಲದೆ, ಪೊಲೀಸ್ ದೂರು ನೀಡಿದರೂ ತೆರವುಗೊಳಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಆ ಕಂಪನಿಯ ಕೇಬಲ್‌ಗಳನ್ನು ಕೂಡ ತೆರವುಗೊಳಿಸಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ$ಎಂ.ಕೆ.ಗುಣಶೇಖರ್ ಯಾವುದೇ ಮುಲಾಜಿಗೆ ಒಳಗಾಗದೆ ದಿಟ್ಟತನದಿಂದ ಓಎಫ್ಸಿಗಳನ್ನು ತೆರವುಗೊಳಿಸಿದ್ದೇವೆ. ಮುಂದಿನ ದಿನಗಳಲ್ಲಿ ಇತರ ಟೆಂಡರ್ ಶ್ಯೂರ್ ರಸ್ತೆಗಳಲ್ಲೂ ಇದೇ ರೀತಿಯ ಕಾರ್ಯಾಚರಕಣೆ ನಡೆಸಲಾಗುವುದು ಎಂದರು.
ಅನಧಿಕೃತ ಓಎಫ್ಸಿ ತೆರವು ವಿಚಾರದಲ್ಲಿ ಯಾವುದೇ ಕಂಪನಿಗಳ ಒತ್ತಡಕ್ಕೆ ಮಣಿಯುವುದಿಲ್ಲ. ಬಿಬಿಎಂಪಿ ಕೋಟ್ಯಂತರ ರೂ. ವೆಚ್ಚದಲ್ಲಿ ಟೆಂಡರ್ ಶ್ಯೂರ್ ರಸ್ತೆಗಳನ್ನು ನಿರ್ಮಿಸುತ್ತದೆ. ಆ ವೇಳೆ ಕೇಬಲ್ ಕಂಪನಿಗಳ ಅನುಕೂಲಕ್ಕಾಗಿ ಡೆಕ್‌ಗಳನ್ನು ನಿರ್ಮಿಸಲಾಗುತ್ತದೆ.
ಆದರೆ, ಪಾಲಿಕೆಯನ್ನು ವಂಚಿಸಿ ಕಂಪೆನಿಗಳು ಕೇಬಲ್‌ಗಳನ್ನು ಡೆಕ್‌ಗಳಲ್ಲಿ ಅಳವಡಿಸದೆ ರಸ್ತೆಯ ಹೊರ ಭಾಗದಲ್ಲೇ ಬಿಡುತ್ತಿವೆ. ಈ ಬಗ್ಗೆ ಹಲವು ಸಭೆಗಳನ್ನು ನಡೆಸಿ ಎಚ್ಚರಿಕೆ ನೀಡಿದ್ದರೂ ಹಲವು ಕಂಪನಿಗಳು ನಿರ್ಲಕ್ಷ್ಯ ವಹಿಸಿವೆ. ಅಂತಹ ಕಂಪೆನಿಗಳ ವಿರುದ್ಧದ ಕಾರ್ಯಾಚರಣೆ ತೀರ್ವಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.