ವಿಜಯಪುರ: ಭೀಮಾ ನದಿ ಪ್ರವಾಹದಿಂದ ಜಲಾವೃತವಾಗಿರುವ ಸಿಂದಗಿ ತಾಲೂಕಿನ ತಾರಾಪುರ ಗ್ರಾಮಸ್ಥರು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಕ್ಕೆ ಮುಂದಾಗಿದ್ದಾರೆ. ಆದರೆ ದೋಣಿ ಹಾಗೂ ಸೂಕ್ತ ಸೌಲಭ್ಯ ನೀಡುತ್ತಿಲ್ಲ ಎಂದು ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ವಿಜಯಪುರ ಜಿಲ್ಲೆಯಲ್ಲಿ ಭೀಮಾ ನದಿ ಪ್ರವಾಹ ಗಂಭೀರ ಸ್ವರೂಪ ಪಡೆದಿದೆ.
ಮಹಾರಾಷ್ಟ್ರ ರಾಜ್ಯದ ಉಜನಿ ಜಲಾಶಯದಿಂದ ಭಾರಿ ಪ್ರಮಾಣದ ನೀರು ಹರಿಯುತ್ತಿದೆ. ಕಾರಣ ಜಿಲ್ಲೆಯ ಭೀಮಾ ನದಿ ತೀರದ ಹಳ್ಳಿಗಳ ಜಮೀನಿಗೆ ಸೀಮಿತ ವಾಗಿದ್ದ ಪ್ರವಾಹದ ನೀರು, ಇದೀಗ ಜನವಸತಿ ಪ್ರದೇಶಕ್ಕೆ ನುಗ್ಗ ತೊಡಗಿದೆ.
ಇದನ್ನೂ ಓದಿ:ರಾಜ್ಯಕ್ಕೆ ನೆರವಿನ ಭರವಸೆ; ಮುಖ್ಯಮಂತ್ರಿಗೆ ಪ್ರಧಾನಿ ಮೋದಿ ದೂರವಾಣಿ ಕರೆ
ಇದರ ಭಾಗವಾಗಿ ಜಲಾವೃತ ತಾರಾಪುರ ಗ್ರಾಮ ತೊರೆಯುವಂತೆ ಸೂಚನೆ ನೀಡಿದ ಅಧಿಕಾರಿಗಳು, ಸಾಮಾನು, ಜನ-ಜಾನುವಾರು ಸಾಗಿಸಲು ಬೋಟ್ ವ್ಯವಸ್ಥೆ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅಧಿಕಾರಿಗಳು ಇರುವ ಬೋಟ್ ಗಳನ್ನು ಎಲ್ಲೆಡೆ ಹೊಂದಿಸಿಕೊಂಡು, ರಕ್ಷಣಾ ಕಾರ್ಯದಲ್ಲಿ ತೊಡಗಲು ಒತ್ತಡಕ್ಕೆ ಸಿಲುಕುವಂತಾಗಿದೆ.