Advertisement

ಪಾಕ್‌ ಭಾರೀ ಗುಂಡಿನ ದಾಳಿ: 4 ಪೌರರ ಸಾವು; 9 ಮಂದಿಗೆ ಗಾಯ

12:38 PM May 23, 2018 | udayavani editorial |

ಜಮ್ಮು : ಜಮ್ಮು, ಕಥುವಾ ಮತ್ತು ಸಾಂಬಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿ ಪಕ್ಕದಲ್ಲಿರುವ ಗ್ರಾಮಗಳನ್ನು ಹಾಗೂ ಭಾರತೀಯ ಸೇನೆಯ  ಹೊರಠಾಣೆಗಳನ್ನು ಗುರಿ ಇರಿಸಿ ಪಾಕ್‌ ಸೇನಾ ಪಡೆ ಇಂದು ಬುಧವಾರ ನಡೆಸಿರುವ ಅಪ್ರಚೋದಿತ ಗುಂಡಿನ ಹಾಗೂ ಮಾರ್ಟರ್‌ ದಾಳಿಗೆ ನಾಲ್ವರು ಪೌರರು ಮೃತಪಟ್ಟು ಇತರ 9 ಮಂದಿ ಗಾಯಗೊಂಡರು.

Advertisement

ಪಾಕ್‌ ರೇಂಜರ್‌ಗಳು ಜಮ್ಮು, ಕಥುವಾ ಮತ್ತು ಸಾಂಬಾ ಜಿಲ್ಲೆಯಲ್ಲಿನ ಎಲ್‌ಓಸಿ ಮತ್ತು ಅಂತಾರಾಷ್ಟ್ರೀಯ ಗಡಿಯಲ್ಲಿ ನಡೆಸುವ ನಿರಂತರ 9ನೇ ದಿನದ ದಾಳಿ ಇದಾಗಿದೆ. 

ಇಂದು ಬೆಳಗ್ಗೆ 9 ಗಂಟೆಗೆ ಪಾಕ್‌ ಸೈನಿಕರು ಆರಂಭಿಸಿದ ಅಪ್ರಚೋದಿತ ಗುಂಡಿನ ದಾಳಿಗೆ 4 ಪೌರರು ಮೃತಪಟ್ಟು ಇತರ 9 ಮಂದಿ ಗಾಯಗೊಂಡರೆಂದು ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next