Advertisement

RBIನಿಂದ ಎಸ್‌ಬಿಐ, ಕೆನರಾ ಬ್ಯಾಂಕ್‌ಗಳಿಗೆ ಭಾರೀ ದಂಡ!

12:55 AM Feb 27, 2024 | Team Udayavani |

ಹೊಸದಿಲ್ಲಿ: ಕೆಲವೊಂದು ನಿಬಂಧನೆಗಳನ್ನು ಪಾಲಿಸುವಲ್ಲಿ ವಿಫ‌ಲವಾದ ಸ್ಟೇಟ್‌ಬ್ಯಾಂಕ್‌ ಆಫ್ ಇಂಡಿಯಾ(ಎಸ್‌ಬಿಐ) ಮತ್ತು ಕೆನರಾ ಬ್ಯಾಂಕ್‌ಗೆ ಆರ್‌ಬಿಐ ಸೋಮವಾರ ಕ್ರಮವಾಗಿ 2 ಕೋಟಿ ರೂ. ಮತ್ತು 32 ಲಕ್ಷ ರೂ. ದಂಡ ವಿಧಿಸಿದೆ. ಕೆಲವು ಕಂಪೆನಿಗಳ ಪಾವತಿಸಿದ ಷೇರು ಬಂಡವಾಳದ ಶೇ.30ಕ್ಕಿಂತ ಹೆಚ್ಚಿನ ಷೇರುಗಳನ್ನು ಎಸ್‌ಬಿಐ ಅಡಮಾನವಾಗಿ ಇಟ್ಟುಕೊಂಡಿರುವುದು ಬೆಳಕಿಗೆ ಬಂದಿತ್ತು. ಅಲ್ಲದೇ, ನಿಗದಿತ ಕಾಲಮಿತಿಯೊಳಗೆ ಮೊತ್ತವನ್ನು ಡೆಪಾಸಿಟರ್‌ ಎಜುಕೇಶನ್‌ ಆ್ಯಂಡ್‌ ಅವೇರ್‌ನೆಸ್‌ ಫಂಡ್ ನಲ್ಲಿ ಜಮೆ ಮಾಡುವಲ್ಲಿ ವಿಫ‌ಲವಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next