ಚಿಕ್ಕೋಡಿ: ಬಹು ನಿರೀಕ್ಷೆಯಂತೆ ಮುಂಗಾರು ಆರಂಭವಾಗಿರುವ ಪರಿಣಾಮ ರೈತರು ಹೊಲಗಳತ್ತ ಮುಖ ಮಾಡಿ ಭರದಿಂದ ಬಿತ್ತನೆ ಕಾರ್ಯ ಆರಂಭಿಸಿದ್ದಾರೆ.
ಹವಾಮಾನ ಇಲಾಖೆ ಮೂನ್ಸೂಚನೆಯಂತೆ ಗಡಿ ಭಾಗದಲ್ಲಿ ಭೂಮಿ ಹಸಿಯಾಗುವಂತೆ ಮಳೆ ಸುರಿದಿದೆ. ಕಬ್ಬು ಹೊರತು ಪಡಿಸಿ ಶೇ 8ರಷ್ಟ್ರು ಬಿತ್ತನೆಯಾಗಿದೆ. ದೇವರ ಮೇಲೆ ಮೋರೆಹೋಗಿ ರೈತರು ಬಿತ್ತನೆ ಕಾರ್ಯ ಆರಂಭಿಸಿದ್ದಾರೆ. ಬಿತ್ತಿದ್ದ ಮೇಲೆ ಬೀಜ ಮೊಳಕೆಯೊಡೆಯಲು ಮತ್ತಷ್ಟು ಮಳೆ ಸುರಿಯಬೇಕೆನ್ನುವುದು ಬಿತ್ತನೆ ಮಾಡಿದ ರೈತರು ಆಗಸದತ್ತ ಮುಖ ಮಾಡಿ ಮಳೆಗಾಗಿ ಪ್ರಾರ್ಥಿಸುತ್ತಿದ್ದಾರೆ.
ಕುಗ್ಗಿದ ಮಳೆ ಪ್ರಮಾಣ: ಚಿಕ್ಕೋಡಿ ಉಪಕೃಷಿ ನಿರ್ದೇಶಕರ ಕಚೇರಿ ವ್ಯಾಪ್ತಿಯಲ್ಲಿ ಬರುವ ಚಿಕ್ಕೋಡಿ, ಅಥಣಿ, ರಾಯಬಾಗ, ಗೋಕಾಕ ಮತ್ತು ಹುಕ್ಕೇರಿ ತಾಲೂಕುಗಳ ವ್ಯಾಪ್ತಿಯಲ್ಲಿ ವಾಡಿಕೆಯಂತೆ 97.05 ಮಿ.ಮೀ,ಮಳೆ ನಿರೀಕ್ಷೆ ಮಾಡಲಾಗಿತ್ತು. ಅದರೆ ಶೇ 25ರಷ್ಟ್ರು ಮಾತ್ರ ಮಳೆಯಾಗಿದೆ. ಈ ತಿಂಗಳಲ್ಲಿ ಈವರೆಗೆ ಶೇ 47 ಮಿ.ಮೀ ರಷ್ಟ್ರು ಮಳೆಯಾಗಿದ್ದು, ಅದರಲ್ಲಿಯೂ ಗೋಕಾಕ ಮತ್ತು ಹುಕ್ಕೇರಿ ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದೆ. ಎಲ್ಲ ಕಡೆ ಸಮನಾಗಿ ಮಳೆ ಸುರಿಯದ ಕಾರಣದಿಂದ ಮುಂಗಾರು ಬಿತ್ತನೆಯಲ್ಲಿ ರೈತರು ಹಿಂಜರಿಯುತ್ತಿದ್ದಾರೆ. ಉತ್ತಮ ಮಳೆಯಾದ ಕಡೆಗಳಲ್ಲಿ ರೈತರು ಬಿತ್ತನೆ ಮಾಡಿದ್ದಾರೆ. ಬಿತ್ತನೆ ಮಾಡದ ರೈತರು ಇದೀಗ ಬಿತ್ತನೆ ಕಾರ್ಯಕ್ಕೆ ಚಾಲನೆ ಕೊಡುತ್ತಿದ್ದಾರೆ.
ಕ್ಷೇತ್ರದ ಬಿತ್ತನೆ ಗುರಿ: ಚಿಕ್ಕೋಡಿ ವಿಭಾಗದ ಚಿಕ್ಕೋಡಿ, ಅಥಣಿ, ರಾಯಬಾಗ, ಹುಕ್ಕೇರಿ ಹಾಗೂ ಗೋಕಾಕ ತಾಲೂಕು ವ್ಯಾಪ್ತಿಯನ್ನು ಒಳಗೊಂಡಂತೆ ಕ್ಷೇತ್ರ ಬಿತ್ತನೆ ಗುರಿ 4,14,479 ಹೆಕ್ಟೇರನಷ್ಟು ಇದ್ದು, ಅದರಲ್ಲಿ 182303 ಹೆಕೇrರ್ ಬಿತ್ತನೆಯಾಗಿದ್ದು, ಕಬ್ಬು ಹೊರತುಪಡಿಸಿದರೆ ಕೇವಲ 16,796 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಉಳಿದ ಕಡೆಗಳಲ್ಲಿ ಬಿತ್ತನೆ ಕಾರ್ಯ ಭರದಿಂದ ನಡೆದಿದೆ.
ಬೀಜ-ಗೊಬ್ಬರಕ್ಕಿಲ್ಲ ಕೊರತೆ: ಚಿಕ್ಕೋಡಿ ಉಪ ಕೃಷಿ ನಿರ್ದೇಶಕರ ಕಚೇರಿ ವ್ಯಾಪ್ತಿಯಲ್ಲಿ ಎಲ್ಲ ಮುಖ್ಯ ಬೆಳೆಗಳ ಬೀಜಗಳನ್ನು ಜಿಲ್ಲಾದ್ಯಂತ 48,895 ಮೆ.ಟನ್ ದಾಸ್ತಾನು ಮಾಡಲಾಗಿದ್ದು, ಅದರಲ್ಲಿ ಈಗಾಗಲೇ 20815 ಮೆ.ಟನ್ ಬೀಜಗಳನ್ನು 122 ಕೇಂದ್ರಗಳ ಮುಖಾಂತರ ವಿತರಣೆ ಮಾಡಲಾಗಿದೆ ಹಾಗೂ ಉಳಿದ 28080 ಮೆ ಟನ್ ದಾಸ್ತಾನು ಬೀಜ ವಿವಿಧ ರೈತ ಸಂಪರ್ಕ ಕೇಂದ್ರಗಳಲ್ಲಿ ಲಭ್ಯವಿರುತ್ತದೆ. ಈ ಎಲ್ಲ ಬೆಳೆಗಳಿಗೆ ಬೇಕಾದ ರಸಗೊಬ್ಬರ ಜಿಲ್ಲಾದ್ಯಂತ 1,36,090 ಮೆ. ಟನ್ ದಾಸ್ತಾನು ಮಾಡಲಾಗಿದ್ದು, ಅದರಲ್ಲಿ ಈಗಾಗಲೇ 34000 ಮೆ ಟನ್ ವಿತರಣೆಯಾಗಿದು,್ದ ಉಳಿದ 1,02,090 ಮೆ.ಟನ್ ರಸಗೊಬ್ಬರ ಪಿಕೆಪಿಎಸ್ ಹಾಗೂ ಖಾಸಗಿ ಮಾರಾಟ ಕೇಂದ್ರಗಳಲ್ಲಿ ಲಭ್ಯವಿರುತ್ತದೆ ಎನ್ನುತ್ತಾರೆ ಕೃಷಿ ಅಧಿಕಾರಿಗಳು.
•ಮಹಾದೇವ ಪೂಜೇರಿ