ಮಾರ್ಚ್ ಅಂತ್ಯದಿಂದ ಆರಂಭವಾಗಿದ್ದ ಲಾಕ್‌ಡೌನ್‌ನಿಂದಾಗಿ, ದೇಶದಲ್ಲಿನ ಕಾರು ಕಂಪನಿಗಳ ಸರ್ವೀಸ್ ಸೆಂಟರ್‌ಗಳು ಬಂದ್ ಆಗಿದ್ದವು. ಈಗ ಅನ್‌ಲಾಕ್ 1.0 ವೇಳೆ, ನಿಧಾನಗತಿ ಯಲ್ಲಿ ಇವೆ ಲ್ಲವೂ ಓಪನ್ ಆಗುತ್ತಿವೆ. ಅಷ್ಟೇ ಅಲ್ಲ, ಸಾಮಾಜಿಕ ಅಂತರ, ಶುದತೆಯ ದೃಷ್ಟಿಯಿಂದ ಜನ ಕೂಡ ಸಾರ್ವಜನಿಕ ಸಾರಿಗೆ ಬಿಟ್ಟು, ಖಾಸಗಿ ವಾಹನಗಳನ್ನೇ ಹೆಚ್ಚಾಗಿ ಬಳಕೆ ಮಾಡುತ್ತಿದ್ದಾರೆ. ಜತೆಗೆ, ಲಾಕ್‌ಡೌನ್‌ನ ಸುದೀರ್ಘ ಅವಧಿಯಲ್ಲಿ ಎಷ್ಟೋ ಕಾರುಗಳು ನಿಂತಲ್ಲೇ ನಿಂತಿದ್ದರಿಂದ ಬ್ಯಾಟರಿ ಸಮಸ್ಯೆ, ಟೈರ್‌ಗಳಲ್ಲಿನ ಸಮಸ್ಯೆ ಕಾಣಿಸಿ ಕೊಂಡಿದೆ. ಹೀಗಾಗಿ, ಈಗ ಸರ್ವೀಸ್ ಸೆಂಟರ್‌ಗಳಿಗೆ ಡಿಮ್ಯಾಂಡ್ ಆರಂಭವಾಗಿದೆ. ನಿಧಾನ ಗತಿಯಲ್ಲಿ ವ್ಯವಹಾರವೂ ಚಿಗಿತುಕೊಳ್ಳುತ್ತಿದೆ. ಜತೆಗೆ, ಇಲ್ಲೂ ಹಲವಾರು ಬದಲಾವಣೆಗಳಾಗಿವೆ.
ಕಾಂಟ್ಯಾಕ್ಟ್‌ಲೆಸ್ ಸರ್ವೀಸ್: ಸಂಪರ್ಕ ರಹಿತ ಸೇವೆ ಬಗ್ಗೆ ಎಲ್ಲಾ ಕಾರು ಶೋರೂಂಗಳು ಗ್ರಾಹಕರಿಗೆ ಅರಿವು ಮೂಡಿಸುತ್ತಿವೆ. ಈಗಾಗಲೇ ಕಾರು ಮಾರಾಟದ ವಿಚಾರದಲ್ಲಿ ಇದು ನಡೆಯುತ್ತಿದೆ. ಅತ್ತ ಸರ್ವೀಸ್ ವಿಚಾರದಲ್ಲೂ ಇದೇ ನಿಯಮ ಅನುಸರಿಸಲಾಗುತ್ತಿದೆ. ಸರ್ವೀಸ್ ಸೆಂಟರ್‌ಗಳೇ ಕಾರುಗಳ ಪಿಕ್ ಅಪ್ ಮತ್ತು ಡ್ರಾಪ್ ಮಾಡುತ್ತಿವೆ. ಗ್ರಾಹಕರಿಗೆ ಶೋರೂಂನತ್ತ ಬರಲು ಪ್ರೋತ್ಸಾಹ ನೀಡುತ್ತಿಲ್ಲ. ಈ ಮೂಲಕ, ಗ್ರಾಹಕರು ಮತ್ತು ಸರ್ವೀಸ್ ಸೆಂಟರ್‌ನಲ್ಲಿ ಇರುವವರ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಲಾಗುತ್ತಿದೆ. ಅಷ್ಟೇ ಅಲ್ಲ, ಟಾಟಾದಂಥ ಕಂಪನಿಗಳು, ಸ್ಟೀರಿಂಗ್ ವೀಲ್, ಡ್ರೈವರ್ ಸೀಟ್ ಮತ್ತು ಗೇರ್ ನಾಬ್‌ಗ ಬಯೋ ಡಿಗ್ರೇಡಬಲ್ ಕವರ್ ಹಾಕುವ ಮೂಲಕ, ಶುದತೆ ಕಾಪಾಡಿಕೊಳ್ಳುತ್ತಿವೆ.
ಡೋರ್ ಸ್ಟೆಪ್ ಸರ್ವೀಸ್: ಮಾರುತಿ ಸುಜುಕಿ ಕಂಪನಿ, ಡೋರ್ ಸ್ಟೆಪ್ ಸರ್ವೀಸ್‌ಗೆ ಹೆಚ್ಚು ಆದ್ಯತೆ ನೀಡಿದೆ. ಅಲ್ಲದೆ, ಲಾಕ್‌ಡೌನ್ ಅವಧಿಯಲ್ಲಿ ಹಲವಾರು ಮಂದಿ, ತಮ್ಮ ಕಾರುಗಳ ಸಮಸ್ಯೆ ಕುರಿತು ಹೇಳಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೇ ಇವರಿಗೆ ಉತ್ತರ ನೀಡುವ ಜತೆಗೆ, ಸರ್ಕಾರದ ನಿಯಮ ಗಳಂತೆ ಶುಚಿತ್ವ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಂಡು ಸರ್ವೀಸ್ ಮಾಡಿಕೊಡಲಾಗುತ್ತಿದೆ. ಡೋರ್ ಸ್ಟೆಪ್ ಸರ್ವೀಸ್ ಜತೆಯಲ್ಲೇ, ಪಿಕ್‌ಅಪ್ ಮತ್ತು ಡ್ರಾಪ್ ಸೇವೆಯನ್ನೂ ನೀಡಲಾಗುತ್ತಿದೆ.
ಎಲ್ಲಾ ಆನ್‌ಲೈನ್: ಕಾರು ತಯಾರಿಕಾ ಕಂಪನಿಗಳು, ಗ್ರಾಹಕರಿಗೆ ತಮ್ಮ ಸರ್ವೀಸ್ ಸೆಂಟರ್‌ನತ್ತ ಬರಲು ಪ್ರೋತ್ಸಾಹ ನೀಡುತ್ತಿಲ್ಲ. ಇದಕ್ಕೆ ಬದಲಾಗಿ ಟಾಟಾದಂಥ ಕಂಪನಿಗಳು, ಎಸ್ ಎಂಎಸ್ ಮೂಲಕ ಗ್ರಾಹಕರ ಜತೆ ಸಂಪರ್ಕ ಸಾಧಿಸಿದ್ದರೆ, ಮಾರುತಿ ಸುಜುಕಿ ಯಂಥ ಕಂಪನಿ ಗಳು ಆನ್‌ಲೈನ್ ಮೂಲಕವೇ ಸರ್ವೀಸ್‌ಗಾಗಿ ಬುಕ್ ಮಾಡಲು ಪ್ರೋತ್ಸಾಹ ನೀಡುತ್ತಿವೆ.
ಅಪಾಯಿಂಟ್‌ಮೆಂಟ್ ಮುಖ್ಯ: ಎರಡು ತಿಂಗಳಿಗೂ ಹೆಚ್ಚು ಕಾಲ ಸರ್ವೀಸ್ ಸೆಂಟರ್ ಗಳು ಸ್ಥಗಿತವಾಗಿದ್ದರಿಂದ, ಈಗ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ, ದಿಢೀರನೇ ಕಾರು ಅಥವಾ ಬೈಕು ಗಳನ್ನು ಸರ್ವೀಸ್ ಮಾಡಿಸಿಕೊಳ್ಳಬ ಹುದು ಎಂಬ ನಿರೀಕ್ಷೆ ಸುಳ್ಳಾಗ ಬಹುದು. ಇದಕ್ಕೆ ಬದಲಾಗಿ ಅಪಾಯಿಂಟ್‌ಮೆಂಟ್ ತೆಗೆದು ಕೊಳ್ಳಲು ಕಾರು ಕಂಪನಿಗಳು ಸಲಹೆ ನೀಡಿವೆ. ಈ ಅಪಾಯಿಂಟ್‌ಮೆಂಟ್ ಲೆಕ್ಕಾಚಾರದಲ್ಲೇ ಕಾರುಗಳ ಪಿಕ್ ಅಪ್ ಮತ್ತು ಡ್ರಾಪ್ ಮಾಡಬಹುದು ಎಂಬುದು ಅವುಗಳ ಅಭಿಪ್ರಾಯ. ಆದರೆ, ಇಲ್ಲೊಂದು ಬದಲಾವಣೆ ಯಾ ಗಿದೆ. ಈವರೆಗೂ ಪಿಕ್ ಅಪ್ ಮತ್ತು ಡ್ರಾಪ್ ಉಚಿತವಾಗಿತ್ತು. ಈಗ ಕೆಲ ಕಂಪನಿಗಳು ಅದಕ್ಕೆ ಚಾರ್ಜ್ ಮಾಡುತ್ತಿವೆ.
ಸ್ಯಾನಿಟೈಸೇಶನ್ ಇದು: ಲಾಕ್ ಡೌನ್ ನಂತರದ ಟ್ರೆಂಡ್. ಒಮ್ಮೆ ಕಾರು ಸರ್ವೀಸ್ ಸೆಂಟರ್‌ಗೆ ಹೋಗಿ ಬಂತು ಎಂದರೆ, ಅದು ಸಂಪೂರ್ಣವಾಗಿ ಸ್ಯಾನಿಟೈಸ್ ಆಗಿಯೇ ಬರುತ್ತದೆ. ಕೆಲವೊಂದು ಕೆಮಿಕಲ್‌ಗಳನ್ನು ಬಳಸಿ, ವಿಶೇಷ ರೀತಿಯಲ್ಲಿ ವಾಷ್ ಮಾಡಲಾಗುತ್ತದೆ. ಇದರಿಂದ, ಸರ್ವೀಸ್ ಸೆಂಟರ್‌ನಲ್ಲಿದ್ದವರ ಮತ್ತು ಕಾರು ತೆಗೆದುಕೊಂಡ ಹೋಗುವ ಗ್ರಾಹಕರ ಆರೋಗ್ಯಕ್ಕೂ ಒಳ್ಳೆಯದು ಎಂಬ ಅಭಿಪ್ರಾಯ, ಸರ್ವೀಸ್ ಸೆಂಟರ್ ನವರದು.
* ಸೋಮಶೇಖರ ಸಿ. ಜೆ.