Advertisement
ಕಳೆದ ಮಾರ್ಚ್ 23 ರಿಂದ ಅಂಜನಾದ್ರಿಯನ್ನು ಭಕ್ತರ ಪ್ರವೇಶಕ್ಕೆ ನಿಷೇಧಿಸಲಾಗಿತ್ತು .ಇಂದು ಶನಿವಾರವಾಗಿದ್ದರಿಂದ ತಾಲ್ಲೂಕು ಮತ್ತು ಬೇರೆ ಜಿಲ್ಲೆಗಳಿಂದ ಭಕ್ತರು ಅಂಜನಾದ್ರಿಗೆ ಆಗಮಿಸಿದ್ದರು. ನೂರಾರು ವಾಹನಗಳು ಮತ್ತು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಅಂಜನಾದ್ರಿ ಬೆಟ್ಟವನ್ನು ಹತ್ತುವ ದೃಶ್ಯ ಕಂಡುಬಂತು. ಕೋವಿಡ್ ರೋಗದ ಹೆದರಿಕೆಯಿಲ್ಲದ ಜನರು ಸಾಮಾಜಿಕ ಅಂತರವನ್ನು ಕಾಪಾಡುವಲ್ಲಿ ವಿಫಲವಾಗಿದ್ದರು. ಜೊತೆಗೆ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ದೇಗುಲ ಸಮಿತಿಯವರು ಹಾಕಿರುವ ಪ್ರಕಟಣೆಯನ್ನು ಭಕ್ತರು ನಿರ್ಲಕ್ಷಿಸಿದ್ದಾರೆ.
Related Articles
Advertisement
ಮೊದಲಿನಂತೆ ತೆಂಗಿನಕಾಯಿ ವ್ಯಾಪಾರ, ಕೇಸರಿ ಟವಲ್ ಗಳ ವ್ಯಾಪಾರ, ಹೂವು ಹಣ್ಣು, ಕೂಲ್ ಡ್ರಿಂಕ್ಸ್ ಗಳ ವ್ಯಾಪಾರ ಭರ್ಜರಿಯಾಗಿ ನಡೆಯುತ್ತಿದೆ.ಬೆಟ್ಟದ ಕೆಳಗಿನ ವಾಹನಗಳ ಪಾರ್ಕಿಂಗ್ ತುಂಬಾ ವಾಹನಗಳ ನಿಂತಿದ್ದು ರಸ್ತೆಯುದ್ದಕ್ಕೂ ಸಹ ವಾಹನಗಳು ನಿಂತಿರುವ ದೃಶ್ಯ ಕಂಡುಬಂತು.