ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಹೆದ್ದಾರಿ ಬಳಕೆದಾರರಿಗೆ ಸುಂಕ ಏರಿಕೆಯ ಬಿಸಿ ನೀಡಿದೆ. ಕರಾವಳಿ ಜಿಲ್ಲೆಗಳಲ್ಲಿ ಕಾರ್ಯಾಚರಿಸುತ್ತಿರುವ ಐದು ಟೋಲ್‌ಪ್ಲಾಜಾಗಳಲ್ಲೂ ಎ. 1ರಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ.
Advertisement
ದ.ಕ. ಜಿಲ್ಲೆಯ ಬ್ರಹ್ಮರ ಕೂಟ್ಲು ಹಾಗೂ ಸುರತ್ಕಲ್ ಎನ್‌ಐಟಿಕೆ ಟೋಲ್ ಪ್ಲಾಜಾಗಳು ನೇರವಾಗಿ ಎನ್‌ಎಚ್‌ಎಐ ವ್ಯಾಪ್ತಿಗೆ ಬರುತ್ತವೆ. ದ.ಕ. ಹಾಗೂ ಕೇರಳ ಗಡಿಭಾಗದ ತಲಪಾಡಿ ಹಾಗೂ ಉಡುಪಿ ಜಿಲ್ಲೆಯ ಗುಂಡ್ಮಿ ಮತ್ತು ಹೆಜಮಾಡಿಯ ಟೋಲ್ ಪ್ಲಾಜಾಗಳು ನವಯುಗ ಉಡುಪಿ ಟೋಲ್‌ವೇ ಪ್ರೈ.ಲಿ. ವ್ಯಾಪ್ತಿಗೆ ಬರುತ್ತವೆ.
ಸುರತ್ಕಲ್ ಟೋಲ್ ಪ್ಲಾಜಾದಲ್ಲಿ ಲಘು ವಾಹನದ ಏಕಮುಖ ಸಂಚಾರದ ಶುಲ್ಕ ಹಿಂದಿನಂತೆಯೇ 50 ರೂ. ಇದ್ದರೆ, ಅದೇ ದಿನ ಮರಳಿ ಬರುವ ಶುಲ್ಕ 5 ರೂ. ಹೆಚ್ಚಳವಾಗಿ 80 ರೂ. (ಹಾಲಿ ದರ 75) ರೂ.ಗೆ ಏರಿಕೆಯಾಗಲಿದೆ. ತಿಂಗಳ ಪಾಸ್ ಶುಲ್ಕ 1,670 ರೂ.ಗಳ ಬದಲು 1,740 ರೂ.ಗೆ ಏರಿಕೆಯಾಗಲಿದೆ. ಜಿಲ್ಲೆಯಲ್ಲಿ ನೋಂದಾಯಿತ ವಾಣಿಜ್ಯ ವಾಹನಕ್ಕೆ ಹಿಂದಿ ನಂತೆ 25 ರೂ. ಇರುತ್ತದೆ. ಲಘು ವಾಣಿಜ್ಯ, ಸರಕು ವಾಹನ, ಮಿನಿ ಬಸ್‌ಗಳ ಏಕಮುಖ ಸಂಚಾರ ದರ 85 ರೂ. (ಹಾಲಿ 80 ರೂ.) ಆಗಲಿದ್ದು, ಅದೇ ದಿನ ಮರಳಿ ಬರುವುದಾದರೆ 120 ರೂ.ಗಳ ಬದಲು 125 ರೂ. ಆಗಲಿದೆ. ಮಾಸಿಕ ಶುಲ್ಕ 2,695 ರೂ.ಗಳ ಬದಲು 2810 ರೂ.ಗೆ ಏರಿಕೆಯಾಗಲಿದೆ. ಸ್ಥಳೀಯ ವಾಣಿಜ್ಯ ವಾಹನಗಳಿಗೆ ಶುಲ್ಕ ಹಿಂದಿನಂತೆ 40 ರೂ. ಇರುತ್ತದೆ. ಬಸ್, ಟ್ರಕ್‌ಗಳ ಏಕಮುಖ ಸಂಚಾರಕ್ಕೆ 175 ರೂ. (ಹಾಲಿ170 ರೂ.) ಪಾವತಿಸಬೇಕು. ಅದೇ ದಿನ ಮರಳಿ ಬರುವುದಿ ದ್ದರೆ 265 ರೂ. (255 ರೂ.), ಮಾಸಿಕ ಪಾಸ್‌ಗೆ 5,885 ರೂ (5,650 ರೂ.,) ಜಿಲ್ಲೆಯಲ್ಲಿ ನೋಂದಾಯಿತ ವಾಹನಗಳಿಗೆ ಶುಲ್ಕ 95 ರೂ. (85 ರೂ.)ಗಳಿಗೆ ಏರಿಕೆಯಾಗಲಿದೆ.
Related Articles
Advertisement
ಬ್ರಹ್ಮರಕೂಟ್ಲು ಟೋಲ್ಲಘು ವಾಹನ ಗಳ ಏಕಮುಖ ಸಂಚಾರದ ಶುಲ್ಕ ಹಿಂದಿ ನಂತೆ 25 ರೂ., ಅದೇ ದಿನ ಮರಳಿ ಬರುವ ಶುಲ್ಕ 40 ರೂ.ಗೆ (ಹಾಲಿ 35 ರೂ.) ಏರಿಕೆಯಾಗಿದೆ. ತಿಂಗಳ ಪಾಸ್ ಶುಲ್ಕ 835 ರೂ.ಗೆ (800 ರೂ.) ಏರಿಕೆಯಾದರೆ, ಜಿಲ್ಲೆಯಲ್ಲಿ ನೋಂದಾಯಿತ ವಾಣಿಜ್ಯ ವಾಹನಕ್ಕೆ ಹಿಂದಿನಂತೆ 10 ರೂ. ಇರುವುದು 15 ರೂ. ಆಗಲಿದೆ. ಲಘು ವಾಣಿಜ್ಯ, ಸರಕು ವಾಹನ, ಮಿನಿ ಬಸ್‌ಗಳ ಏಕಮುಖ ಸಂಚಾರಕ್ಕೆ ಹಿಂದಿನಂತೆ 40 ರೂ. ಇರಲಿದ್ದು, ಅದೇ ದಿನ ಮರಳಿ ಬರುವ ದರದಲ್ಲೂ (60 ರೂ.) ಬದಲಾವಣೆ ಇಲ್ಲ. ಮಾಸಿಕ ಶುಲ್ಕ 1,295 ರೂ. ಇರುವುದು 1,350 ರೂ.ಗೆ ಏರಿಕೆಯಾಗಲಿದೆ. ಸ್ಥಳೀಯ ವಾಣಿಜ್ಯ ವಾಹನ ಶುಲ್ಕ ಹಿಂದಿನಂತೆ 20 ರೂ. ಇರುತ್ತದೆ. ಬಸ್, ಟ್ರಕ್‌ಗಳ ಏಕಮುಖ ಸಂಚಾರಕ್ಕೆ ಶುಲ್ಕ 80 ರೂ. ಇರುವುದು 85 ರೂ.ಗೆ, ಅದೇ ದಿನ ಮರಳಿ ಬರುವುದಕ್ಕೆ 120 ರೂ.ಗಳಿಂದ 125 ರೂ.ಗೆ ಏರಿಸಲಾಗಿದೆ. ಮಾಸಿಕ ಪಾಸ್ 2,710 ರೂ. ಇದ್ದದ್ದು 2,825ಕ್ಕೆ ಏರಿದೆ. ಜಿಲ್ಲೆಯ ನೋಂದಣಿ ವಾಹನಕ್ಕೆ ಹಿಂದಿ ನಂತೆಯೇ 40 ರೂ. ಇರುತ್ತದೆ. ನವಯುಗದ 3 ಟೋಲ್‌ಗಳು
ನವಯುಗ ಟೋಲ್‌ಗಳಲ್ಲಿ ಏಕ ಮುಖ ಸಂಚಾರದ ಕಾರು ಜೀಪು ಅಥವಾ ಲಘು ವಾಹನ ಗಳಿಗೆ ಗುಂಡ್ಮಿಯಲ್ಲಿ 40 ರೂ. ಇರುವುದು 45 ರೂ.ಗೆ ಏರಿಕೆಯಾದರೆ, ಹಾಲಿ ದರದಂತೆ ತಲಪಾಡಿ (40 ರೂ.) ಹಾಗೂ ಹೆಜಮಾಡಿಯಲ್ಲಿ (35 ರೂ.)ದರ ಏರಿಕೆ ಇಲ್ಲ. ಅದೇ ದಿನ ಮರಳಿ ಬರುವುದಕ್ಕೆ ಗುಂಡ್ಮಿಯಲ್ಲಿ 65 ರೂ.ಗಳೇ ಇದ್ದು, ಹೆಜಮಾಡಿಯಲ್ಲಿ 55 ರೂ. (ಹಾಲಿ 50 ರೂ.) ಹಾಗೂ ತಲಪಾಡಿಯಲ್ಲಿ 60 ರೂ (ಹಾಲಿ 55 ರೂ.) ಆಗಲಿದೆ. ಮಾಸಿಕ ಪಾಸ್‌ನಲ್ಲಿ ಬದಲಾವಣೆಯಾಗಿದ್ದು ಗುಂಡ್ಮಿಯಲ್ಲಿ 1,450 ರೂ (ಹಾಲಿ 1,395 ರೂ.), ಹೆಜಮಾಡಿಯಲ್ಲಿ 1,195 ರೂ. (ಹಾಲಿ 1,145 ರೂ.) ಹಾಗೂ ತಲಪಾಡಿಯಲ್ಲಿ 1,305 ರೂ.ಗೆ (ಹಾಲಿ 1,255 ರೂ) ಏರಿಕೆಯಾಗಿದೆ. ಲಘು ವಾಣಿಜ್ಯ, ಸರಕು ವಾಹನ ಹಾಗೂ ಮಿನಿ ಬಸ್‌ಗಳಿಗೆ ಗುಂಡ್ಮಿ, ಹೆಜಮಾಡಿ, ತಲಪಾಡಿಗಳಲ್ಲಿ ಕ್ರಮವಾಗಿ ಏಕಮುಖ ಸಂಚಾರಕ್ಕೆ ಹಾಲಿ ದರದಂತೆ 70 ರೂ., 60 ರೂ. (ಹಾಲಿ 55 ರೂ.) ಹಾಗೂ ಹಾಲಿ ದರದಂತೆ 60 ರೂ. ಇರಲಿದೆ. ಅದೇ ದಿನ ಮರಳಿ ಬರುವುದಕ್ಕೆ 105 ರೂ., (ಹಾಲಿ 100 ರೂ), ಹಾಲಿ ದರದಂತೆ 85 ರೂ., ಹಾಗೂ 85 ರೂ. ಇರುವುದು 90 ರೂ.ಗೆ ಏರಿಕೆಯಾಗಲಿದೆ. ಮಾಸಿಕ ಶುಲ್ಕ 2,345 ರೂ (ಹಾಲಿ 2,250 ರೂ.), 1,930 ರೂ. (ಹಾಲಿ 1,850 ರೂ.), ಹಾಗೂ 2,015 ರೂ. (ಹಾಲಿ 1,935ರೂ.) ಆಗಿರುತ್ತದೆ. ಜತೆಗೆ ಬಸ್ ಮತ್ತು ಟ್ರಕ್‌ಗಳಿಗೆ ಕ್ರಮವಾಗಿ ಏಕಮುಖ ಸಂಚಾರಕ್ಕೆ 140 ರೂ. ಇರುವುದು 145 ರೂ.ಗೆ, 115 ರೂ. ಇರುವುದು 120 ರೂ.ಗೆ, 120ರೂ. ಇರುವುದು 125 ರೂ.ಗೆ ಏರಿಕೆಯಾಗಲಿದೆ. ಅದೇ ದಿನ ಮರಳಿ ಬರುವುದಕ್ಕೆ 210 ರೂ. ಇರುವುದು 220 ರೂ., 175 ರೂ. ಇರುವುದು 180 ರೂ. ಹಾಗೂ 175 ರೂ. ಇರುವುದು 185 ರೂ.ಗೆ ಏರಿಕೆಯಾಗಲಿದೆ. ಮಾಸಿಕ ಶುಲ್ಕವೂ ಮೂರೂ ಟೋಲ್‌ಗಳಲ್ಲಿ ಕ್ರಮವಾಗಿ 4,910 ರೂ. (ಹಾಲಿ 4,715 ರೂ), 4,040 ರೂ. (ಹಾಲಿ 3,880 ರೂ.) ಹಾಗೂ 4,100 ರೂ.ಗೆ (ಹಾಲಿ 3,935 ರೂ.) ಏರಿಕೆಯಾಗಿದೆ. ಮೂರೂ ಟೋಲ್ ಪ್ಲಾಜಾಗಳಿಂದ 20 ಕಿ.ಮೀ. ಅಂತರದಲ್ಲಿ ವಾಸಿಸುವವರ ಸ್ಥಳೀಯ ವಾಣಿಜ್ಯೇತರ ವಾಹನಗಳಿಗೆ ಪ್ರತಿ ಟೋಲ್ ಪ್ಲಾಜಾಕ್ಕೆ ಮಾಸಿಕ ಪಾಸ್ ದರ 255 ರೂ. ಇರುವುದು 265 ರೂ.ಗೆ ಏರಿದೆ.