Advertisement

ಗ್ರಾಹಕರಿಗೆ ತಟ್ಟಿದ ಮುಷ್ಕರ ಬಿಸಿ

08:50 PM Jan 31, 2020 | Lakshmi GovindaRaj |

ಚಿಕ್ಕಬಳ್ಳಾಪುರ: ಬ್ಯಾಂಕ್‌ಗಳನ್ನು ವಿಲೀನಗೊಳಿಸುತ್ತಿರುವ ಕೇಂದ್ರ ಸರ್ಕಾರದ ಧೋರಣೆ ಖಂಡಿಸಿ ಹಾಗೂ ಬ್ಯಾಂಕ್‌ ನೌಕರರ ವೇತನ ಪರಿಷ್ಕರಣೆಗೆ ಪಟ್ಟು ಹಿಡಿದು ದೇಶವ್ಯಾಪಿ ವಿವಿಧ ಬ್ಯಾಂಕ್‌ಗಳ ನೌಕರರ ಸಂಘಟನೆಗಳು ಕೆರೆ ನೀಡಿರುವ 3 ದಿನಗಳ ಅಖೀಲ ಭಾರತ ಮಟ್ಟದ ಬ್ಯಾಂಕ್‌ಗಳ ಮುಷ್ಕರಕ್ಕೆ ಮೊದಲ ದಿನವಾದ ಶುಕ್ರವಾರ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ದೊರೆತಿದೆ.

Advertisement

ಗ್ರಾಹಕರಿಗೆ ತಟ್ಟಿದ ಬಿಸಿ: ಜಿಲ್ಲೆಯ ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ, ಕೆನರಾ ಬ್ಯಾಂಕ್‌, ಕಾರ್ಪೊ, ಕೆನರಾ, ಸಿಂಡಿಕೇಟ್‌ ಹಾಗೂ ಕರ್ನಾಟಕ ಬ್ಯಾಂಕ್‌ಗಳ ನೌಕರರು ಮುಷ್ಕರಕ್ಕೆ ಕೈ ಜೋಡಿಸಿರುವುದರಿಂದ ಸಹಜವಾಗಿಯೇ ಜಿಲ್ಲೆಯಲ್ಲಿ ಬ್ಯಾಂಕ್‌ ಮುಷ್ಕರ ಸಾರ್ವಜನಿಕರ ಹಾಗೂ ಗ್ರಾಹಕರಿಗೆ ಬಿಸಿ ತಟ್ಟಿತು.

ಪರದಾಟ: ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರ, ವಾಣಿಜ್ಯ ನಗರಿ ಚಿಂತಾಮಣಿ, ಗೌರಿಬಿದನೂರು, ಶಿಡ್ಲಘಟ್ಟ ಮತ್ತಿತರ ಕಡೆಗಳಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳ ಬಾಗಿಲು ಮುಚ್ಚಿ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದವು. ಬ್ಯಾಂಕ್‌ ಮುಷ್ಕರದ ಬಗ್ಗೆ ಅರಿವಿಲ್ಲದ ಗ್ರಾಮಾಂತರ ಭಾಗದವರು ಮುಷ್ಕರ ಬೆಂಬಲಿಸಿ ತಮ್ಮ ದಿನ ನಿತ್ಯದ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಿದ್ದರಿಂದ ಗ್ರಾಹಕರು ತಮ್ಮ ದಿನ ನಿತ್ಯದ ಆರ್ಥಿಕ ಚಟುವಟಿಕೆಗಳಿಗೆ ಬ್ಯಾಂಕ್‌ಗಳಲ್ಲಿನ ಸೇವೆ ಲಭ್ಯವಾಗದೇ ಪರದಾಡಬೇಕಾಯಿತು.

ಬ್ಯಾಂಕ್‌ ಮುಷ್ಕರದ ಅರಿವಿಲ್ಲದೇ ನಗರಕ್ಕೆ ಆಗಮಿಸಿದ್ದ ರೈತರು, ವಯೋವೃದ್ಧರು, ಸ್ತ್ರೀಶಕ್ತಿ ಸಂಘಗಳ ಪ್ರತಿನಿಧಿಗಳು ಬ್ಯಾಂಕ್‌ಗಳು ಬಾಗಿಲು ಮುಚ್ಚಿರುವುದನ್ನು ಕಂಡು ವಾಪಸ್ಸು ತೆರಳಿದ ದೃಶ್ಯಗಳು ಸಾಮಾನ್ಯವಾಗಿತ್ತು. ಮುಷ್ಕರದ ನೇತೃತ್ವವನ್ನು ಸುನೀಲ್‌, ರಮೇಶ್‌, ಎಂ.ಬಿ.ಸಂಧ್ಯಾ, ರಮೇಶ್‌, ಎಚ್‌.ವಿ.ಸಂಧ್ಯಾ ವಹಿಸಿದ್ದರು.

ಇಂದು ಮುಂದುವರಿಯಲಿದೆ ಬ್ಯಾಂಕ್‌ ಮುಷ್ಕರ: ಸುಮಾರು ಹತ್ತು ಲಕ್ಷ ಮಂದಿ ಬ್ಯಾಂಕ್‌ ನೌಕರರ ವೇತನ ಪರಿಷ್ಕರಣೆ 2012 ಜಾರಿಯಾಗಬೇಕಿತ್ತು. ಈ ಬಗ್ಗೆ ಕೆಲ ತಿಂಗಳುಗಳಿಂದ ನಡೆದ ಮಾತುಕತೆ ಬೇಡಿಕೆಗೆ ತಕ್ಕಂತೆ ಯಶಸ್ವಿಯಾಗದ ಹಿನ್ನೆಲೆಯಲ್ಲಿ ದೇಶಾದ್ಯಂತ ಮುಷ್ಕರ ನಡೆಸಲು ತೀರ್ಮಾನಿಸಲಾಗಿತ್ತು.

Advertisement

ಈ ನಿಟ್ಟಿನಲ್ಲಿ ರಾಜ್ಯದಲ್ಲೂ ಎರಡು ದಿನಗಳ ಕಾಲ ಮುಷ್ಕರ ನಡೆಯುತ್ತಿದ್ದು, ಶುಕ್ರವಾರ ಜಿಲ್ಲಾದ್ಯಂತ ಬ್ಯಾಂಕ್‌ ಮುಷ್ಕರ ನಡೆದಿದ್ದು, ಕೇಂದ್ರ ಬಜೆಟ್‌ ಮಂಡನೆಯಾಗಲಿರುವ ಶನಿವಾರವು ಕೂಡ ಬ್ಯಾಂಕ್‌ ಮುಷ್ಕರ ನಡೆಯಲಿದೆ. ಹೀಗಾಗಿ ಭಾನುವಾರ ರಜೆ ಇರುವುದರಿಂದ ಸತತ ಮೂರು ದಿನಗಳ ಕಾಲ ಬ್ಯಾಂಕ್‌ ಸೇವೆ ಲಭ್ಯವಾಗದೇ ಗ್ರಾಹಕರು ಪರದಾಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next