Advertisement

ಐಪಿಎಲ್ : 99 ಕ್ಕೆ ಔಟಾಗಿ ಭಾರಿ ನಿರಾಸೆ ಅನುಭವಿಸಿದ ರುತುರಾಜ್ ಗಾಯಕ್ವಾಡ್

09:42 PM May 01, 2022 | Team Udayavani |

ಪುಣೆ : ಇಲ್ಲಿ ಭಾನುವಾರ ನಡೆದ ಐಪಿಎಲ್ ಹಣಾಹಣಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಎದುರಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್ 99 ಕ್ಕೆ ಔಟಾಗಿ ಭಾರಿ ನಿರಾಸೆ ಅನುಭವಿಸಿದರು.

Advertisement

57 ಎಸೆತಗಳಲ್ಲಿ99 ರನ್ ಗಳಿಸಿದ ಗಾಯಕ್ವಾಡ್ ಅವರು ತಲಾ 6 ಸಿಕ್ಸರ್ ಮತ್ತು ಬೌಂಡರಿಗಳನ್ನು ಬಾರಿಸಿದ್ದರು. ನಟರಾಜನ್ ಎಸೆದ ಚೆಂಡನ್ನು ಭುವನೇಶ್ವರ್ ಕೈಗೆ ಕ್ಯಾಚಿತ್ತು ಭಾರಿ ನಿರಾಸೆ ಅನುಭವಿಸಿದರು. ಒನ್ ಡೌನ್ ಆಟಗಾರನಾಗಿ ಹೊಸ ಹುರುಪಿನಲ್ಲಿ ಬಂದ ನಾಯಕ 7 ಎಸೆತಗಳಲ್ಲಿ 8 ರನ್ ಗಳಿಸಿ ಔಟಾದರು. ಗಾಯಕ್ವಾಡ್ ಗೆ ಸಾಥ್ ನೀಡಿದ ಡೆವನ್ ಕಾನ್ವೆ 85 (55 ಎಸೆತ ) ರನ್ ಗಳಿಸಿ ಅಜೇಯರಾಗಿ ಉಳಿದರು. ಚೆನ್ನೈ 20 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 202 ರನ್ ಗಳಿಸಿತು.

ಟಾಸ್ ಗೆದ್ದ ಸನ್ ರೈಸರ್ಸ್ ಹೈದರಾಬಾದ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next