Advertisement
ಗಡಿನಾಡ ನುಡಿದೀವಿಗೆ ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ ಷಷ್ಟéಬ್ದ ಹರಿಕೀರ್ತನ ಅಭಿಯಾನದ ಸಮಾರೋಪ ಸಮಾರಂಭವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ವಸಂತ ಮಹಲ್‌ನಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
Related Articles
Advertisement
ಹರಿದಾಸ ಜಯಾನಂದ ಕುಮಾರ್ ಅವರ ಅರುವತ್ತರ ಹುಟ್ಟುಹಬ್ಬದ ಅಂಗವಾಗಿ ಆಯೋಜಿಸಿದ ಹರಿಕೀರ್ತನ ಅಭಿಯಾನದ ಸಂಚಾಲಕರಾಗಿ ಯಶಸ್ವೀ ಸಾಧನೆ ಮಾಡಿದ ಕಾಸರಗೋಡಿನ ಸಮರ್ಥ ಸಂಘಟಕ ಗುರುಪ್ರಸಾದ್ ಕೋಟೆಕಣಿ ಅವರನ್ನು ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಸಮ್ಮಾನಿಸಿದರು.
ಇದೇ ಸಂದರ್ಭದಲ್ಲಿ ಜಯಾನಂದ ಕುಮಾರ್ ದಂಪತಿಯನ್ನೂ ಹೆಗ್ಗಡೆ ಯವರು ಸಮ್ಮಾನಿಸಿದರು. ಹರಿಕಥಾ ಅಭಿಯಾನ ಸಮಿತಿ ಪರವಾಗಿ ಹೆಗ್ಗಡೆಯವರನ್ನು ಗೌರವಿಸಲಾಯಿತು. ವಿವಿಧ ಭಜನ ತಂಡಗಳಿಂದ ಗುರುವಂದನೆ ನಡೆಯಿತು.ಹರಿದಾಸ ಜಯಾನಂದ ಕುಮಾರ್ ಅವರಿಂದ ತರಬೇತಿಗೊಂಡ ಕಾಸರ ಗೋಡು ಜಿಲ್ಲೆಯ ಹದಿನೈದು ಮಹಿಳಾ ಭಜನ ಮಂಡಳಿಯವರಿಂದ ಸಂಕೀರ್ತನೆ ನಡೆಯಿತು. ಡಾ| ಹೆಗ್ಗಡೆ ಮತ್ತು ಸ್ವಾಮೀಜಿದ್ವಯರ ಉಪಸ್ಥಿತಿಯಲ್ಲಿ ಜಯಾನಂದ ಕುಮಾರ್ ಸುಶ್ರಾವ್ಯವಾಗಿ ಹಾಡಿದರು. ಸಭಾ ಕಾರ್ಯಕ್ರಮದಲ್ಲಿ ರವಿ ನಾಯ್ಕಪು ಸ್ವಾಗತಿಸಿದರು
ರಾಧಾಕೃಷ್ಣ ಕೆ. ಉಳಿಯತ್ತಡ್ಕ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮೀರಾ ಆಳ್ವ ಕಾರ್ಯಕ್ರಮ ನಿರೂಪಿಸಿದರು. ಹರೀಶ್ ಶೆಟ್ಟಿ ಮಾಡ ವಂದಿಸಿದರು. ಹರಿದಾಸ ಜಯಾನಂದ ಕುಮಾರ್ ಕೃತಜ್ಞತಾ ನುಡಿಗಳನ್ನಾಡಿದರು.ಬಳಿಕ ಅವರಿಂದ “ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತೆ¾’ ಹರಿಕಥೆ ಜರಗಿತು. ಮಾತು, ಬರಹಗಳಲ್ಲಿ ಶುದ್ಧ ಕನ್ನಡ
ಕಾಸರಗೋಡಿನ ಕನ್ನಡಿಗರು ಮಲೆಯಾಳಿಗರ ಮಧ್ಯೆ ವಾಸಿಸುತ್ತಿದ್ದರೂ ಅವರು ಶುದ್ಧ ಕನ್ನಡವನ್ನು ಉಳಿಸಿಕೊಂಡಿದ್ದಾರೆ. ಅಚ್ಚ ಕನ್ನಡಿಗರಾಗಿಯೇ ಬದುಕುತ್ತಿದ್ದಾರೆ. ಅವರ ಮಾತು, ಬರಹಗಳಲ್ಲಿ ಶುದ್ಧ ಕನ್ನಡವಿದೆ. ಈ ಕನ್ನಡ ಪ್ರಜ್ಞೆ ಇತರರಿಗೆ ಮಾದರಿ ಯಾಗಿದೆ. ಸಾಹಿತ್ಯ ಕಲೆಗಳಿಗೆ ಕಾಸರಗೋಡಿನ ಕನ್ನಡಿಗರ ಕೊಡುಗೆ ಅಪಾರ. ವಿವಿಧ ಕ್ಷೇತ್ರಗಳ ಅನೇಕ ಮಂದಿ ಸಾಧಕರು ಅಲ್ಲಿದ್ದಾರೆ. ಕಾಸರಗೋಡು ಎಂದೆಂದಿಗೂ ಕನ್ನಡದ ನಾಡಾಗಿಯೇ ಉಳಿಯುತ್ತದೆ. ಎಂದು ಡಾ| ಹೆಗ್ಗಡೆ ಅವರು ಹೇಳಿದರು.