Advertisement

ಆಸ್ಪತ್ರೆ ಕಟ್ಟಡದಿಂದ ಹಾರಿ 55ರ ಹರೆಯದ ಹೃದ್ರೋಗಿ ಆತ್ಮಹತ್ಯೆ

12:12 PM Feb 08, 2018 | Team Udayavani |

ನಾಶಿಕ್‌ : ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 55ರ ಹರೆಯದ ಹೃದ್ರೋಗಿಯೊಬ್ಬರು ಆಸ್ಪತ್ರೆ ಕಟ್ಟಡದ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ಆತ್ಮಹತ್ಯೆ ಮಾಡಿಕೊಂಡಿರುವ ಹೃದ್ರೋಗಿಯನ್ನು  ಉತ್ತರ ಮಹಾರಾಷ್ಟ್ರದ ದೇವಲಾಲಿಗಾಂವ್‌ ನಿವಾಸಿ ಕಿಸನ್‌ ನಾನಾ ಪಟೋಳೆ ಎಂದು ಗುರುತಿಸಲಾಗಿದೆ. 

ಪಟೋಳೆಯನ್ನು ಆಸ್ಪತ್ರೆಯ ನಾಲ್ಕನೇ ಮಹಡಿಯಲ್ಲಿರುವ ಐಸಿಯು ಘಟಕಕ್ಕೆ ಸೇರಿಸಲಾಗಿತ್ತು. ತನ್ನ ಅನಾರೋಗ್ಯದ ಬಗ್ಗೆ ತೀವ್ರ ಖನ್ನರಾಗಿದ್ದ ಅವರು ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡರೆಂದು ಪೊಲೀಸರು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next