—-
ಬಿಸಿಲಿನ ಬೇಗೆ ತಡೆಯಲು ತೊಡಲಾಗುತ್ತಿದ್ದ ತಂಪು ಕನ್ನಡಕಗಳನ್ನು ಜನ ಈಗ ಸ್ಟೈಲ್‌ಗಾಗಿಯೇ ಹೆಚ್ಚು ಧರಿಸುತ್ತಾರೆ. ಮನೆಯಿಂದಾಚೆ ಹೋಗುವಾಗ ಪರ್ಸ್ ಮರೆತರೂ ಕನ್ನಡಕ ಮರೆಯುವುದಿಲ್ಲ. ಈ ತಂಪು ಕನ್ನಡಕಗಳು ದಿರಿಸಿನ ಅವಿಭಾಜ್ಯ ಅಂಗವಾಗಿಬಿಟ್ಟಿವೆ ಎಂದರೆ ತಪ್ಪಿಲ್ಲ.
Advertisement
ಹೃದಯದ ಕನ್ನಡಕ ದಪ್ಪ ಫ್ರೆàಮಿನ ಕನ್ನಡಕಗಳು, ಚಿಕ್ಕ ಫ್ರೆàಮ್, ದೊಡ್ಡ ಗ್ಲಾಸ್, ಫ್ರೆàಮ್ ಇಲ್ಲದ ಬರೀ ಗ್ಲಾಸ್ ಉಳ್ಳ ಕನ್ನಡಕ… ಹೀಗೆ ಫ್ಯಾಷನ್ ಲೋಕದಲ್ಲಿ ಅದೆಷ್ಟೋ ಪ್ರಕಾರದ ಕನ್ನಡಕಗಳು ಬಂದಿವೆ. ವಿನ್ಯಾಸಕರು ಹೊಸ ಹೊಸ ಆಕಾರದ, ವಿನ್ಯಾಸದ ಮತ್ತು ಬಣ್ಣದ ಕನ್ನಡಕಗಳನ್ನು ಪರಿಚಯಿಸಿಕೊಟ್ಟಿದ್ದಾರೆ. ಆದರೆ, ಸದ್ಯದ ಟ್ರೆಂಡ್ ಹೃದಯಾಕಾರದ (ಹಾರ್ಟ್ ಶೇಪ್) ಕೂಲಿಂಗ್ ಗ್ಲಾಸ್‌ಗಳು! ವ್ಯಾಲೆಂಟೈನ್ ಡೇ ಪ್ರಯುಕ್ತ ಈ ಹೃದಯಾಕಾರದ ತಂಪು ಕನ್ನಡಕಗಳು ಮಾರುಕಟ್ಟೆಗಳಲ್ಲಿ ರಾರಾಜಿಸುತ್ತಿವೆ.
ಕನ್ನಡಕಕ್ಕಿಂತ ದೊಡ್ಡದಾಗಿರುವ ಫ್ರೆàಮ್ ಎಲ್ಲರ ಗಮನ ಸೆಳೆಯುವುದು ನಿಜ. ಹಾಗಾಗಿ ಈ ಹೃದಯಾಕಾರದ ಫ್ರೆàಮ್‌ಗಳು ದೊಡ್ಡದಾಗಿರುವುದಷ್ಟೇ ಅಲ್ಲದೆ ಬಗೆಬಗೆಯ ಬಣ್ಣ, ಅಲಂಕಾರ ಮತ್ತು ಡಿಸೈನ್‌ಗಳನ್ನೂ ಹೊಂದಿರುತ್ತವೆ. ಫಳ ಫಳ ಹೊಳೆಯುವಂಥ ಮೆಟಾಲಿಕ್ ಬಣ್ಣ, ಅನಿಮಲ್ ಪ್ರಿಂಟ್, ಹೂವಿನ ಆಕೃತಿ ಬಿಡಿಸಲಾದ ಫ್ರೆàಮ್‌ಗಳು, ಮ್ಯಾಟ್ ಫಿನಿಷ್ ಇರುವ ಫ್ರೆàಮ್‌ಗಳು, ವುಡನ್ ಫ್ರೆàಮ್ (ಮರದಿಂದ ಮಾಡಲಾದ ಅಥವಾ ಅದಕ್ಕೆ ಹೋಲುವಂಥ ಫ್ರೆàಮ…), ಪಾರದರ್ಶಕ ಫ್ರೆàಮ್‌ಗಳು (ಬಣ್ಣವಿಲ್ಲದ ಗಾಜು ಅಥವಾ ಪ್ಲಾಸ್ಟಿಕ್ ಫ್ರೆàಮ…) ಅಥವಾ ಕ್ಲಾಸಿಕ್ ಕಪ್ಪು ಬಣ್ಣದ ಫ್ರೆàಮ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಒಂದಕ್ಕೆ ಒಂದು ಉಚಿತ
ಪ್ರೇಮಿಗಳ ದಿನವೆಂದು ಅನೇಕರು ಇಂಥ ಫ್ರೆàಮ್ ಉಳ್ಳ ತಂಪು ಕನ್ನಡಕಗಳನ್ನು ಉಡುಗೊರೆಯಾಗಿಯೂ ನೀಡುತ್ತಿ¨ªಾರೆ. ಕನ್ನಡಕದ ಅಂಗಡಿಗಳಲ್ಲಿ ಒಂದು ಫ್ರೆàಮ್ ಕೊಂಡರೆ ಇನ್ನೊಂದು ಉಚಿತ ಎಂಬ ಕೊಡುಗೆಗಳು ಲಭ್ಯವಿರುವ ಕಾರಣ, ಹೊಸ ಟ್ರೆಂಡ್‌ಅನ್ನು ಪ್ರಯೋಗಿಸಲು ಇಚ್ಛಿಸುವವರು ಹೃದಯಾಕಾರದ ಫ್ರೆàಮ್ ಉಳ್ಳ ತಂಪು ಕನ್ನಡಕಗಳನ್ನು ಕೊಂಡುಕೊಳ್ಳುತ್ತಿ¨ªಾರೆ.
Related Articles
ಸಾಮಾಜಿಕ ಜಾಲತಾಣಗಳಲ್ಲಿ ಸೆಲ್ಫಿ ಅಪ್ಲೋಡ್ ಮಾಡುವ ಕ್ರೇಜ್ ಇರುವವರಿಗಂತೂ ಈ ಹೊಸಬಗೆಯ ಕನ್ನಡಕಗಳು ಖಂಡಿತ ಖುಷಿ ಕೊಡುತ್ತವೆ. ಹೃದಯಾಕಾರದ ತಂಪು ಕನ್ನಡಕಗಳನ್ನು ತೊಟ್ಟು ಬೇರೆ-ಬೇರೆ ಭಂಗಿಯಲ್ಲಿ ಪೋಸ್ ಕೊಟ್ಟು, ಫೋಟೋ ತೆಗೆದು, ಇನ್‌ಸ್ಟಾಗ್ರಾಮ್, ಫೇಸ್‌ಬುಕ್, ಸ್ನ್ಯಾಪ್ ಚಾಟ್‌ಗಳಲ್ಲಿ ಅಪ್ಲೋಡ್ ಮಾಡುತ್ತಿರುವುದನ್ನು ನೀವು ಖಂಡಿತ ನೋಡಿರುತ್ತೀರ. ಪ್ರೇಮಿಗಳ ದಿನದ ಹೊಸ ಹೊಸ ಟ್ರೆಂಡ್‌ಗಳಲ್ಲಿ ಈ ಬಗೆಯ ಕನ್ನಡಕಗಳೂ ಸೇರಿಕೊಂಡಿವೆ.
Advertisement
ಮದುವೆ ಥೀಮ್‌ಗೂ ಕನ್ನಡಕಈಗೆಲ್ಲ ಮದುವೆಗಳಲ್ಲಿ ವಧು -ವರರು ಸಾಂಪ್ರದಾಯಿಕ ಉಡುಗೆ ಜೊತೆ ತಂಪು ಕನ್ನಡಕಗಳ ತೊಟ್ಟು ಫೋಟೋ ಸೆಶನ್ ಮಾಡಿಸುತ್ತಾರೆ. ಸಮಾರಂಭಗಳಿಗೆ ಥೀಮ… ಇಡುತ್ತಾರೆ. ಆ ಥೀಮ್‌ಗೆ ಅನುಗುಣವಾಗಿ ಅತಿಥಿಗಳು ಉಡುಗೆ ತೊಡಬೇಕಿರುತ್ತದೆ. ಗಂಡಿನ ಕಡೆಯವರು, ಹೆಣ್ಣಿನ ಕಡೆಯವರು ಈ ರೀತಿ ಸ್ಪರ್ಧೆ ನಡೆಸುತ್ತಾರೆ. ಇದೂ ಒಂಥರಾ ಮಜಾ. ಈ ರೀತಿ ಮೋಜು ಮಾಡಿ, ಸಮಾರಂಭಗಳ ನೆನಪುಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಾರೆ. ಮುಂದೊಂದು ದಿನ ಈ ಫೋಟೊಗಳು ಮಧುರ ಕ್ಷಣಗಳನ್ನು ನೆನಪಿಸಲಿವೆ. ಪಾರ್ಟಿ, ಮದುವೆ, ಸೀಮಂತ, ನಿಶ್ಚಿತಾರ್ಥ ಮುಂತಾದ ಸಮಾರಂಭಗಳಲ್ಲಿ ಥೀಮ್ ಇಡುವುದಾದರೆ ನೀವೂ ಹೃದಯಾಕಾರದ ಫ್ರೆàಮಿನ ತಂಪು ಕನ್ನಡಕಗಳನ್ನು ಪ್ರಯೋಗಿಸಿ ನೋಡಿ. -ಅದಿತಿಮಾನಸ ಟಿ.ಎಸ್