ನನ್ನೊಳಗಿನ ನನ್ನನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡಿದವಳು ನೀನು. ನನ್ನ ನಾಳೆಗಳನ್ನ ಬೆಳದಿಂಗಳಂತೆ ರೂಪಿಸಬೇಕೆಂದು ಕಾದಿರುವ ಪುಟ್ಟ ಶಬರಿ ನೀನು. ಮಾತನಾಡಿದರೆ ಮುತ್ತು ಉದುರಿದಾವು ಎಂಬಂಥ ಲಜ್ಜೆಯ ಮಲ್ಲಿಗೆ ನೀನು. ಕಣ್ಣಂಚಿನಿಂದಲೇ ಮಾತನಾಡಿಸುವ ವಾಗ¾ಯಿ, ದೂರದಲೇ ನಿಂತು, ಗಾಂಭೀರ್ಯ ನಡೆಯಿಂದ ಮನಸೂರೆಗೊಂಡ ಮೈನಾ ಹಕ್ಕಿ ನೀನು.
Advertisement
ಇನ್ನೇಕೆ ಕಾಲ ಹರಣ ದೂರಾನೆ ತುಂಬಾ ಕಠಿಣ
ಏನಪ್ಪ, ಮಾತಾಡ್ತಾ ಮಾತಾಡ್ತಾ ಹಾಡೋಕೆ ಶುರು ಮಾಡಿದನಲ್ಲ ಈ ಪುಣ್ಯಾತ್ಮ ಅಂದುಕೋಬೇಡ. ಹಾಡಿನ ಈ ಸಾಲು ಕೇಳಿದಾಗಲೆಲ್ಲ ನಿನ್ನದೇ ನೆನಪಾಗುತ್ತೆ. ಕೆಲವೊಮ್ಮೆ ನಿನ್ನೆದುರಿಗೆ ಬಂದು ನಿಂತು, “ನಿನ್ನ ಹೃದಯದ ಕೀಲಿ ಕೈ ನಾನಾಗುವಾಸೆ’ ಎಂದು ಪರೋಕ್ಷವಾಗಿಯೋ ಅಥವಾ “ನಂಗೆ ನೀನಂದ್ರೆ ಇಷ್ಟ, ನಿನ್ನ ತುಂಬಾ ಪ್ರೀತಿಸ್ತೀನಿ’ ಅಂತ ನೇರವಾಗಿಯೋ ಹೇಳಿಬಿಡೋಣ ಅಂದುಕೊಳ್ತೀನಿ. ಆದ್ರೆ ಬಡ್ಡಿ ಮಗಂದ್ ಈ ಹಾರ್ಟು, ನಿನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಿದ್ ಕೂಡ್ಲೆà ಹೆದರಿ, ಮುದುರಿಕೊಂಡು ಬಿಡುತ್ತೆ. ಏನ್ಮಾಡ್ಲಿ ಗೆಳತಿ? ಕವಿತೆ ಬರೆದು ಹೇಳ್ಳೋಣ ಅಂದ್ರೆ, ಅದನ್ನು ಓದಿ “ಚೆನ್ನಾಗಿದೆ ಕಣೋ’ ಅಂದು ಸುಮ್ನಾಗ್ತಿàಯ. ಹಾಡು ಹೇಳಿ ಪ್ರೀತಿ ವ್ಯಕ್ತಪಡೊÕàಣ ಅಂದ್ರೆ ಕೇಳ್ತಾ, ತಲೆದೂಗ್ತಾ ಕುಳಿತುಬಿಡ್ತೀಯ.
ದಯಮಾಡಿ ನೀಡಿ ಬಿಡು ನಿನ್ನ ಹೃದಯವನ್ನು
ಆಗಬೇಕು ಜೀವನದ ಸಂಗಾತಿ ನೀ ನನಗಿನ್ನು!! – ಶರಣ್ ಬೂದಿಹಾಳ್,ದಾವಣಗೆರೆ