Advertisement

ಹೃದಯ ತಂದ ಕಾಪ್ಟರ್‌!

12:46 AM May 10, 2020 | Sriram |

ಕಳ್ಳಕಾಕರ ಜಾಡು ಪತ್ತೆಹಚ್ಚಲು ಕೇರಳ ಪೊಲೀಸರು ಬಳಸುತ್ತಿದ್ದ ಬಾಡಿಗೆ ಹೆಲಿಕಾಪ್ಟರ್‌ ಮೊದಲ ಬಾರಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಮಹಿಳೆಯ ಪ್ರಾಣ ರಕ್ಷಣೆಗೆ ಬಳಕೆಯಾಗಿದೆ.

Advertisement

ಕೇರಳ ಕೋವಿಡ್-19 ಸೋಂಕಿನ ದಾಳಿಯಿಂದ ತತ್ತರಿಸಿರುವ ನಡುವೆಯೇ ಮಿದುಳು ನಿಷ್ಕ್ರಿಯಗೊಂಡಿದ್ದ ವ್ಯಕ್ತಿಯೊಬ್ಬರ ಹೃದಯ ವನ್ನು ಶನಿವಾರ ಹೆಲಿಕಾಪ್ಟರ್‌ ಮೂಲಕ ತಿರುವನಂತಪುರ ದಿಂದ ಕೊಚ್ಚಿಗೆ ಸುರಕ್ಷಿತವಾಗಿ ತಲುಪಿಸಿದೆ. ತೀವ್ರ ಅನಾರೋಗ್ಯ ದಿಂದ ಬಳಲುತ್ತಿರುವ ಮಹಿಳೆ ಯೊಬ್ಬರಿಗೆ ಆ ಹೃದಯವನ್ನು ಕಸಿ ಮಾಡಲಾಗುತ್ತಿದೆ.

ತಿರುವನಂತಪುರದ ಕಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ, ಮಿದುಳು ನಿಷ್ಕ್ರಿಯಗೊಂಡಿದ್ದ 50 ವರ್ಷದ ಮಹಿಳೆಯ ಹೃದಯವನ್ನು ಶನಿವಾರ ಮಧ್ಯಾಹ್ನ ಆ್ಯಂಬುಲೆನ್ಸ್‌ ಮೂಲಕ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತರಲಾಯಿತು. ಹೃದಯ ಹಾಗೂ ವೈದ್ಯಕೀಯ ತಂಡದೊಂದಿಗೆ ಅಪರಾಹ್ನ 3 ಗಂಟೆಗೆ ಹೊರಟ ಕಾಪ್ಟರ್‌, 3.45ಕ್ಕೆ ಸರಿಯಾಗಿ ಕೊಚ್ಚಿಗೆ ತಲುಪಿಸಲಾಯಿತು.

 

Advertisement

Udayavani is now on Telegram. Click here to join our channel and stay updated with the latest news.

Next