Advertisement

ಪಟಾಕಿ ತುಂಬಿದ್ದ ಇ-ರಿಕ್ಷಾ ಸ್ಪೋಟ : ಎದೆ ಝಲ್ಲೆನ್ನಿಸುವ ವಿಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆ

03:05 PM Feb 28, 2023 | Team Udayavani |

ಉತ್ತರ ಪ್ರದೇಶ: ಜಗನ್ನಾಥ ಶೋಭಾ ಯಾತ್ರೆಗೆಂದು ಪಟಾಕಿಗಳನ್ನು ತುಂಬಿದ್ದ ಎಲೆಕ್ಟ್ರಿಕ್‌ ರಿಕ್ಷಾದ ಮೇಲೆಯೇ ಪಟಾಕಿ ಕಿಡಿ ಬಿದ್ದು ಸ್ಪೋಟಗೊಂಡ ಪರಿಣಾಮ ಓರ್ವ ಮೃತಪಟ್ಟ ಘಟನೆ ಸೋಮವಾರ ಗ್ರೇಟರ್‌ ನೋಯ್ಡಾದಲ್ಲಿ ನಡೆದಿದೆ. ಪಟಾಕಿ ತುಂಬಿದ್ದ ರಿಕ್ಷಾ ಸ್ಪೋಟಗೊಳ್ಳುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದ್ದು ಬೆಚ್ಚಿ ಬೀಳಿಸುವಂತಿದೆ.

Advertisement

ಯಾತ್ರೆಯ ಸಂದರ್ಭದಲ್ಲಿ ಸಿಡಿಸಲೆಂದು ತರಲಾಗಿದ್ದ ಪಟಾಕಿಗಳನ್ನು ಇ-ರಿಕ್ಷಾದಲ್ಲಿ ಇಡಲಾಗಿತ್ತು. ಈ ವೇಳೆ ಅದರ ಪಕ್ಕದಲ್ಲೇ ಸಿಡಿಸಲಾಗಿದ್ದ ಪಟಾಕಿಯ ಕಿಡಿ ಇತರೆ ಪಟಾಕಿಗಳನ್ನು ತುಂಬಿದ್ದ ಪೆಟ್ಟಿಗೆಗಳಿದ್ದ ರಿಕ್ಷಾದ ಮೇಲೆ ಬಿದ್ದಿದೆ. ಆ ವೇಳೆಗೆ ಭಾರೀ ಸ್ಪೋಟ ಸಂಭವಿಸಿದ್ದು,ಘಟನೆಯಲ್ಲಿ ಓರ್ವ ಮೃತಪಟ್ಟಿದ್ದಾನೆ ಎಂದು ಪೋಲಿಸರು ಮಾಹಿತಿ ನೀಡಿದ್ದಾರೆ. ಘಟನೆಯ ದೃಶ್ಯಗಳು ಅಲ್ಲೇ ಇದ್ದ ಸಿಸಿ ಕ್ಯಾಮರಾಗಳಲ್ಲಿ ದಾಖಲಾಗಿವೆ.

ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನು ಸ್ಥಳಿಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೋಲಿಸರು ಹೇಳಿದ್ದಾರೆ.

ವೈರಲ್‌ ಆಗಿರುವ ವಿಡಿಯೋದಲ್ಲಿ ದಾದ್ರಿ ಪ್ರದೇಶದಲ್ಲಿರುವ ಜನನಿಬಿಡ ಮಾರುಕಟ್ಟೆಯಲ್ಲಿ ಕೆಲವಾರು ಮಂದಿ ಅಂಗಡಿಗಳ ಮುಂಭಾಗ ನಿಂತಿರುವುದು ಕಂಡುಬಂದಿದೆ. ಕೆಲವೇ ಕ್ಷಣಗಳಲ್ಲಿ ಸಿಡಿಮದ್ದುಗಳನ್ನು ತುಂಬಿದ್ದ ಇ-ರಿಕ್ಷಾ ಸ್ಪೋಟಗೊಳ್ಳುವ ದೃಶ್ಯ ಎಂಥವನನ್ನೂ ಝಲ್ಲೆನ್ನಿಸುವುದು ಖಂಡಿತ.

Advertisement

ಸ್ಪೋಟ ಸಂಭವಿಸಿದ ತಕ್ಷಣವೇ ಅಲ್ಲಿ ಸೇರಿದ್ದ ಜನ ಅಕ್ಕಪಕ್ಕದ ಅಂಗಡಿಗಳ ಒಳಗೆ ನುಗ್ಗಿದ್ದರಿಂದ ಹೆಚ್ಚಿನ ಪ್ರಾಣಹಾನಿ ಸಂಭವಿಸಿಲ್ಲ‌ ಎಂದು ಪೋಲಿಸರು ಹೇಳಿದ್ದಾರೆ. ಘಟನೆಯಲ್ಲಿ ಪಟಾಕಿ ಸಿಡಿಸುತ್ತಿದ್ದ ಸಲ್ಮಾನ್‌ ಮತ್ತು ಇ-ರಿಕ್ಷಾದ ಚಾಲಕ ಪಪ್ಪು ಎಂಬವರು ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ, ಮಂಗಳವಾರ ಸಲ್ಮಾನ್‌ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ ಎಂದು ಗ್ರೇಟರ್‌ ನೋಯ್ಡಾ ಎಡಿಜಿಪಿ ಟ್ವೀಟ್‌  ಮಾಡಿದ್ದಾರೆ.

 

ಇದನ್ನೂ ಓದಿ: ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿಗಳ ಮೇಲೆ ಹರಿದ ಕಾರು: ಮೂವರು ಸ್ಥಳದಲ್ಲೇ ಮೃತ್ಯು

Advertisement

Udayavani is now on Telegram. Click here to join our channel and stay updated with the latest news.

Next