Advertisement

ಹೃದಯಾಘಾತ: ಡ್ರೈವಿಂಗ್‌ ಸ್ಕೂಲ್‌ ಮಾಲಕ ಸಾವು

01:00 AM Jul 04, 2023 | Team Udayavani |

ಬೆಳ್ತಂಗಡಿ: ಕಲ್ಮಂಜ ಗ್ರಾಮದ ಶಾಲಾ ಬಳಿ ನಿವಾಸಿ, ಉಜಿರೆಯಲ್ಲಿ ಶ್ರೀ ಮಂಜುನಾಥ ಮೋಟಾರು ಡ್ರೈವಿಂಗ್‌ ಸ್ಕೂಲ್‌ ನಡೆಸುತ್ತಿದ್ದ ಬಾಲಕೃಷ್ಣ ಶೆಣೈ (56) ಅವರು ಹೃದಯಾಘಾತದಿಂದ ಜು. 3ರಂದು ಮಧ್ಯಾಹ್ನ ಮಂಗಳೂರು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ.

Advertisement

ಮಧ್ಯಾಹ್ನ ಊಟದ ಬಳಿಕ ಉಜಿರೆಯ ತನ್ನ ಕಚೇರಿಯಲ್ಲಿದ್ದ ವೇಳೆ ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು, ಕೂಡಲೇ ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಅವರು ದಾರಿ ಮಧ್ಯೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

20 ವರ್ಷಗಳ ಹಿಂದೆ ಉಜಿರೆಯಲ್ಲಿ ಮೊದಲ ಡ್ರೈವಿಂಗ್‌ ಸ್ಕೂಲ್‌ ಆರಂಭಿಸಿದ ಅವರು ಕಿಟ್ಟು ಎಂದೇ ಪರಿಚಿತರಾಗಿದ್ದರು. ಸಾವಿರಾರು ಮಂದಿಗೆ ಚಾಲನ ತರಬೇತಿ ನೀಡಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next