Advertisement

Heart attack: ಕಚೇರಿಯಲ್ಲೇ 40 ವರ್ಷದ ಟೆಕ್ಕಿ ಸಾವು

12:59 AM Sep 30, 2024 | Team Udayavani |

ನಾಗಪುರ: ಹೃದಯಾಘಾತದಿಂದಾಗಿ ಎಚ್‌ಸಿಎಲ್‌ ಸಂಸ್ಥೆಯ ಉದ್ಯೋಗಿಯೊಬ್ಬರು ಕಚೇರಿಯಲ್ಲಿಯೇ ಸಾವೀಗೀಡಾಗಿರುವ ಘಟನೆ ನಾಗಪುರದಲ್ಲಿ ನಡೆದಿದೆ. ಶುಕ್ರವಾರ ಸಂಜೆ 7 ಗಂಟೆ ಸುಮಾರಿಗೆ ಕಚೇರಿಯ ಶೌಚಾಲಯ ಪ್ರವೇಶಿಸಿದ್ದ 40 ವರ್ಷದ ಉದ್ಯೋಗಿ ನಿತಿನ್‌ ಎಡ್ವಿನ್‌ ಮೈಕಲ್‌, ನಿತ್ರಾಣ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರಿಗೆ ಕಚೇರಿಯಲ್ಲಿ ತುರ್ತು ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದರೂ, ಅವರು ಅಸುನೀಗಿದ್ದಾರೆಂದು ವೈದ್ಯರು ಘೋಷಿಸಿದ್ದಾರೆ. ಘಟನೆ ಬಗ್ಗೆ ಸಂಸ್ಥೆ ವಿಷಾದಿಸಿದ್ದು, ಉದ್ಯೋಗಿಯ ಕುಟುಂಬಕ್ಕೆ ನೆರವಾಗುವುದಾಗಿ ಭರವಸೆ ನೀಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next