Advertisement

ತೆಕ್ಕಟ್ಟೆ: ಡಾ. ಎಂ.ಕುಸುಮಾಕರ ಶೆಟ್ಟಿ ಅವರನ್ನು ಹೃದಯಸ್ಪರ್ಶಿಯಾಗಿ ಭರಮಾಡಿಕೊಂಡ ಗ್ರಾಮಸ್ಥರು

08:12 AM Nov 02, 2019 | mahesh |

ತೆಕ್ಕಟ್ಟೆ: ಜನ ಸೇವೆಯಿಂದಲೇ ಜಿಲ್ಲೆಯಲ್ಲಿ ಗುರುತಿಸಿಕೊಂಡಿರುವ ಅತ್ಯಂತ ಸರಳತೆಯಿಂದಲೇ ದಿನದ 24 ಗಂಟೆಗಳ ಕಾಲ ರೋಗಿಗಳ ಆರೈಕೆ ಸಿದ್ಧರಾಗಿರುವ ವೈದ್ಯರು ಗ್ರಾಮೀಣ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಾ ಜನರ ಪ್ರೀತಿಗೆ ಪಾತ್ರರಾದ ಅಪರೂಪದ ವ್ಯಕ್ತಿ ಊರಿನ ಹೆಮ್ಮೆಯ ವೈದ್ಯ ಡಾ.ಎಂ.ಕುಸುಮಾಕರ ಶೆಟ್ಟಿ ಅವರು ತೆಕ್ಕಟ್ಟೆ ಹಾಗೂ ಸುತ್ತಮುತ್ತಲ ಹತ್ತಾರು ಗ್ರಾಮಗಳ ಜನತೆಗೆ ಕಳೆದ 21 ವರ್ಷಗಳಿಂದ ವೈದ್ಯಕೀಯ ಸೇವೆಯನ್ನು ನೀಡುತ್ತಿರುವ ಜನಸೇವಕನಿಗೆ ಈ ಬಾರಿಗೆ ಉಡುಪಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿ ತೆಕ್ಕಟ್ಟೆ ಗ್ರಾಮಕ್ಕೆ ಆಗಮಿಸುತ್ತಿರುವ ಸಂದರ್ಭದಲ್ಲಿ ನೂರಾರು ಮಂದಿ ಗ್ರಾಮಸ್ಥರು ಶುಕ್ರವಾರದಂದು ಸಂಭ್ರಮದಿಂದ ಭರಮಾಡಿಕೊಂಡರು.

Advertisement

ಕಳೆದ 21 ವರ್ಷಗಳಿಂದ  ಪ್ರೇಮಾ ಕ್ಲಿನಿಕ್‌ ಶಾಪ್‌ನ  ಕುಂದಾಪುರ ತಾಲೂಕಿನ ತೆಕ್ಕಟ್ಟೆ ಹಾಗೂ ಸುತ್ತಮುತ್ತಲ ಹತ್ತಾರು ಗ್ರಾಮಗಳ ಜನತೆಗೆ ವೈದ್ಯಕೀಯ ಸೇವೆಯನ್ನು ಅವರು ಕಳೆದ 21 ವರ್ಷಗಳಿಂದ ನೀಡುತ್ತಾ ಬಂದಿದ್ದಾರೆ. ಕಡ್ರಿ ಗೋವಿಂದ ಶೆಟ್ಟಿ ಹಾಗೂ ಮೊಗೆಬೆಟ್ಟು ಪ್ರೇಮಾ ಶೆಡ್ತಿ ದಂಪತಿಗಳ ಪುತ್ರನಾಗಿರುವ 1977ರಲ್ಲಿ ಅವರಲ್ಲಿ ನೂಜಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಪಡೆದು , ಬಿದ್ಕಲ್‌ಕಟ್ಟೆ ಸರಕಾರಿ ಪ್ರೌಢಶಾಲೆ ಹಾಗೂ ಭಂಡಾರ್‌ಕಾರ್ ಕಾಲೇಜಿನಲ್ಲಿ ಪದವಿ ಮುಗಿಸಿ, ಕೆಎಎಂಸಿ ಕಾಲೇಜು ಕೊಪ್ಪದಲ್ಲಿ ಟಿಎಎಂಎಸ್‌ ಪದವಿ ಪಡೆದಿದ್ದಾರೆ. ಪತ್ನಿ ರೇಶ್ಮಾ ಕೆ.ಶೆಟ್ಟಿ, ಪುತ್ರ ಅದ್ವಿತ್‌ ಶೆಟ್ಟಿ ಹಾಗೂ ಪುತ್ರಿ ಬ್ರಾಹ್ಮಿ ಯೊಂದಿಗೆ ಸುಖೀ ಸಂಸಾರ ನಡೆಸುತ್ತಿದ್ದಾರೆ.

ಪರಿಸರದ ಬಗ್ಗೆ ವಿಶೇಷ ಕಾಳಜಿ : ನಿಸರ್ಗ ಅಧ್ಯಯನದ ಬಗ್ಗೆ ವಿಶೇಷ ಕಾಳಜಿ ಹೊಂದಿರುವ
ಡಾ| ಎಂ.ಕುಸುಮಾಕರ ಶೆಟ್ಟಿ ಅವರು ಮೊಗೆಬೆಟ್ಟಿನ ತಮ್ಮ ಮನೆಯ ಪರಿಸರದಲ್ಲಿ ಔಷಧೀಯ ಗಿಡಗಳನ್ನು ನೆಟ್ಟು ಪೋಷಿಸಿದ್ದಾರೆ. ಸಾಂಪ್ರದಾಯಿಕ ಕೃಷಿ ಚಟುವಟಿಕೆಯ ಬಗ್ಗೆ ಅಪಾರ ಆಸಕ್ತಿಯನ್ನು ಹೊಂದಿರುವ ಇವರು ಕೃಷಿಯಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ.

ಜನಸೇವೆ : ಜನ ಸೇವೆಯಿಂದಲೇ ಜಿಲ್ಲೆಯಲ್ಲಿ ಗುರುತಿಸಿಕೊಂಡಿರುವ ಇವರು ಅತ್ಯಂತ ಸರಳತೆಯಿಂದಲೇ ದಿನದ 24 ಗಂಟೆಗಳ ಕಾಲ ರೋಗಿಗಳ ಆರೈಕೆ ಸಿದ್ಧರಾಗಿರುವ ವೈದ್ಯರು ಗ್ರಾಮೀಣ ಪ್ರದೇಶಲ್ಲಿ ಕಾರ್ಯನಿರ್ವಹಿಸುತ್ತಾ ಜನರ ಪ್ರೀತಿಗೆ ಪಾತ್ರರಾದ ಅಪರೂಪದ ವ್ಯಕ್ತಿ ನಮ್ಮೂರಿನ ಹೆಮ್ಮೆಯ ವೈದ್ಯ ಡಾ| ಎಂ.ಕುಸುಮಾಕರ ಶೆಟ್ಟಿ . ಗ್ರಾಮೀಣ ಭಾಗದ ಹೊರರೋಗಿಗಳಿಗೆ ಮಾನಸಿಕ ಸ್ಥೈರ್ಯ ನೀಡುವ ಜತೆಗೆ ಔಷದೋಪಚಾರವನ್ನು ನೀಡಿ ಸದಾ ಗ್ರಾಮೀಣ ಜನತೆಗೆ ಉತ್ತಮ ಸೇವೆಯನ್ನು ನಿರಂತರವಾಗಿ ನೀಡುತ್ತಿದ್ದಾರೆ. ಸ್ಥಳೀಯ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ತುರ್ತು ಚಿಕಿತ್ಸೆಗಾಗಿ ಬಂದಾಗ ಅವರಿಗೆ ಉಚಿತ ಚಿಕಿತ್ಸೆಯನ್ನು ಕಳೆದ ಹಲವು ವರ್ಷಗಳಿಂದಲೂ ನೀಡುತ್ತಾ ಬಂದಿದ್ದಾರೆ. ಇವರ ಸೇವೆಯನ್ನು ಕಂಡು ವಿವಿಧ ಸಂಘ ಸಂಸ್ಥೆಗಳು ಗುರುತಿಸಿ ಗೌರವಿಸಿದೆ.

Advertisement

ಚಿತ್ರಗಳು : ಟಿ.ಲೋಕೇಶ್ ಆಚಾರ್ಯ ತೆಕ್ಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next