Advertisement

ರಾಮಜನ್ಮಭೂಮಿ ವಿವಾದ; 90 ಸಾವಿರ ದಾಖಲೆ ಭಾಷಾಂತರಕ್ಕೆ 3 ತಿಂಗಳು ಟೈಂ

03:56 PM Aug 11, 2017 | Sharanya Alva |

ನವದೆಹಲಿ:ರಾಮಜನ್ಮಭೂಮಿ ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ವಿಚಾರಣೆ ಆರಂಭಿಸಿದ್ದ ಸುಪ್ರೀಂಕೋರ್ಟ್ ನ ತ್ರಿಸದಸ್ಯ ನ್ಯಾಯಮೂರ್ತಿಗಳ ಪೀಠ ಶುಕ್ರವಾರ ದಾಖಲೆಗಳ ಭಾಷಾಂತರಕ್ಕೆ ಮೂರು ತಿಂಗಳ ಕಾಲಾವಕಾಶ ನೀಡಿ, ಡಿಸೆಂಬರ್ 5ಕ್ಕೆ ವಿಚಾರಣೆಯನ್ನು ಮುಂದೂಡಿದೆ.

Advertisement

ಸುಮಾರು 90 ಸಾವಿರ ಪುಟಗಳನ್ನು ಒಳಗೊಂಡಿರುವ ಐತಿಹಾಸಿಕ ದಾಖಲೆಗಳು 7 ಭಾಷೆಗೆ ಭಾಷಾಂತರಿಸಲು ಕಾಲಾವಕಾಶ ಬೇಕಾಗಿರುವ ಹಿನ್ನೆಲೆಯಲ್ಲಿ ಹಿನ್ನೆಲೆಯಲ್ಲಿ ಸುನ್ನಿ ವಕ್ಫ್ ಬೋರ್ಡ್ ಗೆ  ಮೂರು ತಿಂಗಳ ಕಾಲಾವಕಾಶ ನೀಡಿದೆ. ಡಿಸೆಂಬರ್ 5ರಿಂದ ನಿರಂತರವಾಗಿ ವಿಚಾರಣೆ ನಡೆಯಲಿದೆ ಎಂದು ಸುಪ್ರೀಂ ಪೀಠ ತಿಳಿಸಿದೆ.

ಈ ಪ್ರಕರಣದಲ್ಲಿ ಮುವರು ಪ್ರಮುಖ ಅರ್ಜಿದಾರರಿದ್ದಾರೆ. ಹಾಗಾಗಿ ಮೊದಲು ಪ್ರಮುಖ ಅರ್ಜಿದಾರರ ವಾದ ಆಲಿಸುತ್ತೇವೆ. ರಾಮ್ ಲಲ್ಲ ವಿರಾಜಮಾನ್, ನಿರ್ಮೊಹಿ ಅಖಾಡ್ ಹಾಗೂ ಸುನ್ನಿ ಬೋರ್ಡ್ ಕೇಸ್ ನ ಪ್ರಮುಖ ಅರ್ಜಿದಾರರು ಎಂದು ಪೀಠ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next