ಹೊಸದಿಲ್ಲಿ: ವೈರ್ ಅಥವಾ ವೈರ್‌ಲೆಸ್ ಇಯರ್ ಬಡ್ಸ್‌ಗಳನ್ನು ನಾವೆಲ್ಲರೂ ಬಳಸುವುದು ಸರ್ವೇ ಸಾಮಾನ್ಯವಾಗಿದೆ. ಅವು ನಮ್ಮ ಜೀವನದ ಭಾಗವಾಗಿ ಹೋಗಿವೆ. ಅನೇಕರು ದಿನದಲ್ಲಿ ಹೆಚ್ಚು ಹೊತ್ತು ಇಯರ್ ಬಡ್ಸ್‌ಗಳನ್ನು ಬಳಸುತ್ತಾರೆ. ಆದರೆ ಇಲ್ಲಿ ಅಪಾಯವಿದೆ. ಉತ್ತರಪ್ರದೇಶದ ಗೋರಖಪುರದ 18 ವರ್ಷದ ಯುವಕನೊಬ್ಬ ಹೆಚ್ಚು ಹೊತ್ತು ಇಯರ್ ಬಡ್ಸ್‌ಗಳನ್ನು ಬಳಸಿ ತನ್ನ ಶ್ರವಣಶಕ್ತಿಯನ್ನೇ ಕಳೆದುಕೊಂಡಿರುವ ಘಟನೆ ವರದಿಯಾಗಿದೆ. ದಿಲ್ಲಿಯ ವೈದ್ಯರ ತಂಡ ಯಶಸ್ವಿಯಾಗಿ ಯುವಕನ ಶಸ್ತ್ರ ಚಿಕಿತ್ಸೆ ನಡೆಸಿದ್ದು, ಮರಳಿ ಆತ ಶ್ರವಣಶಕ್ತಿಯನ್ನು ಪಡೆದಿದ್ದಾನೆ. “ದೀರ್ಘ ಕಾಲ ಇಯರ್ ಬಡ್ಸ್ ಗಳನ್ನು ಬಳಸುತ್ತಿದ್ದ. ಇದರಿಂದ ಆತನಿಗೆ ಸೋಂಕು ತಗಲಿ ಶ್ರವಣ ಶಕ್ತಿ ಕುಂದಿತ್ತು. ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಈಗ ಆತ ಮೊದಲಿನಂತೆ ಕೇಳಬಲ್ಲ’ ಎಂದು ಹೇಳಿದ್ದಾರೆ.
Advertisement
Ear Buds: ಇಯರ್ ಬಡ್ಸ್‌ನಿಂದ ಶ್ರವಣಶಕ್ತಿ ನಷ್ಟ!
11:32 PM Jun 02, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.