Advertisement

ಭರಪೂರ ಉಪಯೋಗದ ತಾವರೆ ಬೇರು

03:55 PM Sep 24, 2019 | sudhir |

ತಾವರೆ ಹೂ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ನೀರಿನಲ್ಲೇ ಬೆಳೆಯುವ ಈ ಹೂವು ಆರೋಗ್ಯಕ್ಕೆ ಬಲು ಉಪಕಾರಿ. ಆದರೆ ಇದರ ಬೇರಿನಿಂದ ಆರೋಗ್ಯಕ್ಕೆ ಪ್ರಯೋಜನವಿದೆ ಎಂಬ ಸತ್ಯ ಹೆಚ್ಚಿನವರಿಗೆ ತಿಳಿದೇ ಇಲ್ಲ. ನೀರಿನಲ್ಲಿ ಪೂರ್ತಿಯಾಗಿ ಮುಳುಗಡೆಯಾಗಿರುವ ತಾವರೆ ಬೇರುಗಳಲ್ಲಿ ಯಾವುದೇ ರೀತಿಯ ವಿಷದ ಅಂಶ ಇರುವುದಿಲ್ಲ. ಆ ಕಾರಣಕ್ಕಾಗಿಯೇ ಇದು ಹೆಚ್ಚು ಆರೋಗ್ಯಕರ ಎಂಬುದು ದೃಢಪಟ್ಟಿದೆ.

Advertisement

ತಾವರೆ ಬೇರು ನೀರಿನಲ್ಲಿ ನಾಲ್ಕರಿಂದ ಐದು ಅಡಿ ಉದ್ದ ಬೆಳೆಯುತ್ತದೆ. ಇದರಲ್ಲಿ ಪೊಟಾಶಿಯಂ, ಕಬ್ಬಿಣದ ಸಣ್ತೀ ವಿಟಮಿನ್‌ ಎ ಹಾಗೂ ಸಿ ಯ ಅಂಶಗಳು ಭರಪೂರವಾಗಿವೆ. ನೋಡಲು ಸಾಧಾರಣ ಬೇರಿನಂತೆ ಇರುವ ಇದರ ರುಚಿ ತೆಂಗಿನಕಾಯಿಯನ್ನು ಹೆಚ್ಚು ಹೋಲುತ್ತದೆ.

ರಕ್ತದೊತ್ತಡ ನಿಯಂತ್ರಣ
ತಾವರೆ ಬೇರಿನಲ್ಲೂ ಒತ್ತಡವನ್ನು ಕಡಿಮೆ ಮಾಡುವ ಅಂಶವಿದೆ. ಇದು ರಕ್ತದ ಒತ್ತಡವನ್ನು ಕಡಿಮೆಗೊಳಿಸಿ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.

ಪಚನ ಕ್ರಿಯೆ ಅಧಿಕ
ಫೈಬರ್‌ನ ಅಂಶವು ತಾವರೆ ಬೇರಿನಲ್ಲಿ ಅಧಿಕವಾಗಿದ್ದು ಇದು ಪಚನ ಕ್ರಿಯೆ ಸುಗಮವಾಗಿ ನಡೆಯಲು ಸಹಕಾರಿ.

ತೂಕ ಇಳಿಸಲು ಸಹಕಾರಿ
ತಾವರೆ ಬೇರುಗಳನ್ನು ನಿಮ್ಮ ಡಯೆಟ್‌ ಆಹಾರವಾಗಿ ಸೇವಿಸುವುದರಿಂದ ತೂಕ ಇಳಿಕೆಯಾಗುತ್ತದೆ.

Advertisement

ನೀರಿನಂಶ ಹೆಚ್ಚಳ
ಪ್ರತಿ ದಿನ ಆಹಾರದಲ್ಲಿ ತಾವರೆ ಬೇರುಗಳನ್ನು ಸೇವಿಸುವುದರಿಂದ ನೀರಿನ ಅಂಶ ಹೆಚ್ಚಳವಾಗುತ್ತದೆ.

ರಕ್ತ ಪರಿಚಲನೆ ಹೆಚ್ಚಳ
ಆಹಾರದಲ್ಲಿ ತಾವರೆ ಬೇರನ್ನು ಬಳಸುವುದರಿಂದ ಅಥವಾ ಡಯೆಟ್‌ ಆಹಾರಗಳಲ್ಲಿ ತಾವರೆ ಬೇರನ್ನು ಸೇವಿಸುವುದರಿಂದ ರಕ್ತದ ಪರಿಚಲನೆ ಹೆಚ್ಚಳವಾಗುತ್ತದೆ. ಇದರಲ್ಲಿರುವ ಪೊಟಾಶಿಯಂ ಹಾಗೂ ಕಬ್ಬಿಣದ ಸತ್ವಗಳು ರಕ್ತದ ಕಣಗಳನ್ನು ಹೆಚ್ಚಳ ಮಾಡುವುದರಿಂದ ರಕ್ತ ಪರಿಚಲನೆ ಅಧಿಕವಾಗುತ್ತದೆ.

- ಸುಶ್ಮಿತಾ ಶೆಟ್ಟಿ ಸಿರಿಬಾಗಿಲು

Advertisement

Udayavani is now on Telegram. Click here to join our channel and stay updated with the latest news.

Next