ಹಿಂದಿನ ವಾರದಿಂದ- ನಿಮ್ಮ ರಕ್ತದೊತ್ತಡ ತಿಳಿಯಿರಿ ಅಧಿಕ ರಕ್ತದೊತ್ತಡ ಸಾಮಾನ್ಯವಾಗಿ ಯಾವುದೇ ಲಕ್ಷಣಗಳನ್ನು ತೋರ್ಪಡಿಸುವುದಿಲ್ಲ. ಆದರೆ ಇದು ಹಠಾತ್ ಲಕ್ವಾ ಅಥವಾ ಹೃದಯಾಘಾತಕ್ಕೆ ಅತ್ಯಂತ ಮುಖ್ಯ ಕಾರಣವಾಗಿದೆ. ನಿಮ್ಮ ರಕ್ತದೊತ್ತಡವನ್ನು ನಿಯಮಿತವಾಗಿ ತಪಾಸಿಸಿಕೊಳ್ಳಿ ಮತ್ತು ನಿಮ್ಮ ರಕ್ತದೊತ್ತಡ ಮಾಪನಗಳನ್ನು ತಿಳಿದಿರಿ. ಅದು ಹೆಚ್ಚು ಇದ್ದರೆ ಕಡಿಮೆ ಉಪ್ಪು ಸೇವಿಸುವುದೇ ಆದಿಯಾಗಿ ಆರೋಗ್ಯಯುತ ಆಹಾರ ಕ್ರಮವನ್ನು ನೀವು ರೂಢಿಸಿಕೊಳ್ಳಬೇಕಾಗುತ್ತದೆ ಮತ್ತು ದೈಹಿಕ ಚಟುವಟಿಕೆಯನ್ನು ಹೆಚ್ಚು ಮಾಡಬೇಕಾಗುತ್ತದೆ; ಅಲ್ಲದೆ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಲು ಔಷಧಗಳೂ ಅಗತ್ಯವಾಗಬಹುದು (ನಿಯಂತ್ರಿತ ಆದರ್ಶ ರಕ್ತದೊತ್ತಡವು 140/90 ಎಂಎಂ ಎಚ್‌ಜಿಗಿಂತ ಕಡಿಮೆ ಇರಬೇಕು).
ನಿಮ್ಮ ರಕ್ತದ ಲಿಪಿಡ್ ಅಂಶಗಳ ಬಗ್ಗೆ ಅರಿಯಿರಿ: ರಕ್ತದಲ್ಲಿ ಹೆಚ್ಚು ಕೊಲೆಸ್ಟರಾಲ್ ಅಂಶ ಮತ್ತು ಅಸಹಜ ಲಿಪಿಡ್ ಪ್ರಮಾಣ ಹೃದಯಾಘಾತ ಮತ್ತು ಲಕ್ವಾದ ಅಪಾಯವನ್ನು ಹೆಚ್ಚಿಸುತ್ತದೆ. ಆರೋಗ್ಯಯುತ ಆಹಾರ ಕ್ರಮ ಮತ್ತು ಅಗತ್ಯವಾದರೆ ಸೂಕ್ತವಾದ ಔಷಧಗಳ ಮೂಲಕ ಲಿಪಿಡ್ ಪ್ರಮಾಣಗಳನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಬೇಕು. ಶಿಫಾರಸು ಮಾಡಲಾಗಿರುವ ಲಿಪಿಡ್ ಪ್ರೊಫೈಲ್ ಮಾಪನಗಳು: ಒಟ್ಟು ಕೊಲೆಸ್ಟರಾಲ್ 200 ಎಂಜಿ/ಡಿಎಲ್‌ಗಿಂತ ಕಡಿಮೆ, ಎಲ್‌ಡಿಎಲ್ 100 ಎಂಜಿ/ಡಿಎಲ್‌ಗಿಂತ ಕಡಿಮೆ, ಟ್ರೈಗ್ಲಿಸರೈಡ್‌ಗಳು 150 ಎಂಜಿ/ಡಿಎಲ್‌ಗಿಂತ ಕಡಿಮೆ ಮತ್ತು ಎಚ್‌ಡಿಎಲ್ 60ಎಂಜಿ/ಡಿಎಲ್‌ಗಿಂತ ಹೆಚ್ಚು.
ನಿಮ್ಮ ರಕ್ತದ ಸಕ್ಕರೆಯಂಶ ತಿಳಿದುಕೊಳ್ಳಿ: ರಕ್ತದಲ್ಲಿ ಗುÉಕೋಸ್ ಅಂಶ (ಮಧುಮೇಹ) ಹೆಚ್ಚಿರುವುದು ಕೂಡ ಹೃದಯಾಘಾತ ಮತ್ತು ಲಕ್ವಾದ ಅಪಾಯವನ್ನು ವೃದ್ಧಿಸುತ್ತದೆ. ನಿಮಗೆ ಮಧುಮೇಹ ಇದ್ದರೆ ರಕ್ತದೊತ್ತಡ ಮತ್ತು ಸಕ್ಕರೆಯ ಅಂಶಗಳೆ ರಡನ್ನೂ ನಿಯಂತ್ರಣದಲ್ಲಿ ಇರಿಸಿಕೊಳ್ಳುವುದರ ಮೂಲಕ ಅಪಾಯದಿಂದ ದೂರ ಇರು ವುದು ಅಗತ್ಯ. ಆರೋಗ್ಯಯುತ ವ್ಯಕ್ತಿಗೆ ಈ ಕೆಳಗಿನ ಪ್ರಯೋಗಾಲಯ ಮಾಪನಗಳು ಸಹಜ ಎಂಬುದಾಗಿ ಭಾವಿಸಲಾಗುತ್ತದೆ: ಖಾಲಿ ಹೊಟ್ಟೆಯಲ್ಲಿ ರಕ್ತದ ಸಕ್ಕರೆಯಂಶ (ಎಫ್ಬಿಎಸ್): 126ಎಂಜಿ/ಡಿಎಲ್‌ಗಿಂತ ಕಡಿಮೆ; ಆಹಾರ ಸೇವಿಸಿದ ಎರಡು ತಾಸುಗಳ ಬಳಿಕ ರಕ್ತದಲ್ಲಿ ಸಕ್ಕರೆಯಂಶ (ಪಿಪಿಬಿಎಸ್): 200 ಎಂಜಿ/ಡಿಎಲ್‌ಗಿಂತ ಕಡಿಮೆ; ಮಾದರಿ ಎಚ್‌ಬಿಎ1ಸಿ ಮಟ್ಟ (ಕಳೆದ 3 ತಿಂಗಳುಗಳಲ್ಲಿ ರಕ್ತದ ಸಕ್ಕರೆಯಂಶದ ಸರಾಸರಿ ಮಟ್ಟ) ಶೇ. 6.5ಕ್ಕಿಂತ ಕಡಿಮೆ.