Advertisement
ದಕ್ಷಿಣ ಆಪ್ರೀಕಾ ಮೂಲದ ಈ ಪಪ್ಪಾಯ ಹಣ್ಣು ಕೊಲಂಬಸ್ ನಿಂದ ಜಗತ್ತಿಗೆ ಪರಿಚಿತವಾಯಿತು. ಅವಾಬಿ(ದೇವರ ಹಣ್ಣು) ಎಂದು ಕರೆಸಿಕೊಳ್ಳುವ ಈ ಪಪ್ಪಾಯ ಹಣ್ಣು ತನ್ನ ರುಚಿ ಹಾಗೂ ಆರೋಗ್ಯಕ್ಕೆ ಪೂರಕವಾಗಿರುವ ಅಂಶಗಳ ಮೂಲಕ ಭಾರತದಲ್ಲಿ ನೆಲೆಯೂರಿದೆ.
Related Articles
- ಪಪ್ಪಾಯ ಹಣ್ಣಿನ ಸೇವನೆಯಿಂದ ಜೀರ್ಣಾಂಗದ ಹಲವು ಸಮಸ್ಯೆಗಳನ್ನು ದೂರ ಮಾಡುವುದರೊಂದಿಗೆ ದೇಹಕ್ಕೆ ಸೇರಿರುವ ಅಪಾಯಕಾರಿ ಕ್ರಿಮಿಗಳನ್ನು ಇದು ನಾಶಗೊಳಿಸುತ್ತದೆ.
- ದೇಹದಲ್ಲಿ ಗಾಯಗಳಾದಾಗ ಪಪ್ಪಾಯ ಹಣ್ಣಿನ ತಿರುಳನ್ನು ಲೇಪನ ಮಾಡುವುದರಿಂದ ಗಾಯ ಬಹುಬೇಗ ಗುಣವಾಗುತ್ತದೆ.
- ಹುಳಕಜ್ಜಿ ಮತ್ತು ಇತರ ಚರ್ಮ ರೋಗಗಳಿಗೆ ಪಪ್ಪಾಯ ಕಾಯಿಯ ಸೊನೆಯನ್ನು ಹಚ್ಚುವುದರಿಂದ ಸಮಸ್ಯೆ ನಿವಾರಣೆಯಾಗುತ್ತದೆ.
- ಮಲಬದ್ಧತೆಯಿಂದ ಬಳಲುತ್ತಿರುವವರು ಪ್ರತಿನಿತ್ಯ ಊಟದ ಬಳಿಕ ಪಪ್ಪಾಯ ಹಣ್ಣನ್ನು ಸೇವಿಸುವುದರಿಂದ ಸಮಸ್ಯೆ ನಿವಾರಣೆಯಾಗುತ್ತದೆ.
- ಮಕ್ಕಳಿಗೆ ಪಪ್ಪಾಯ ಹಣ್ಣನ್ನು ತಿನ್ನಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
- ಮೊಡವೆ ಮತ್ತು ಕಲೆಗಳಿಗೆ ಪಪ್ಪಾಯ ಹಣ್ಣಿನ ತಿರುಳನ್ನು ಸ್ಪಲ್ಪ ಲೇಪಿಸುವುದರಿಂದ ಕಲೆ ಮಾಯವಾಗುತ್ತದೆ.
Advertisement