Advertisement

ಆರೋಗ್ಯ ರಕ್ಷಕ ಕ್ಯಾಲಂಡುಲಾ

09:33 PM Sep 23, 2019 | sudhir |

ಪ್ರಕೃತಿ ಮನುಷ್ಯನ ಜೀವನಕ್ಕೆ ಬೇಕಾದ ಅದೆಷ್ಟೊ ಅಮೂಲ್ಯ ಔಷಧ ಭಂಡಾರವನ್ನು ತನ್ನೊಳಗೆ ಹುದುಗಿಸಿಟ್ಟುಕೊಂಡಿದೆ ಎಂಬುದು ಗಾಳಿಯಷ್ಟೇ ಸತ್ಯ. ನಿಸರ್ಗದತ್ತವಾದ ಹೆಚ್ಚಿನ ಗಿಡ ಮರಗಳು ಒಂದಿಲ್ಲೊಂದು ಔಷಧೀಯ ಗುಣಗಳನ್ನು ತನ್ನೊಳಗೆ ಅಡಕವಾಗಿರಿಸಿಕೊಂಡಿದ್ದು, ಇದನ್ನು ಬೇರೆ ಬೇರೆ ಚಿಕಿತ್ಸೆಗಳ ಸಂದರ್ಭದಲ್ಲಿ ವೈಜ್ಞಾನಿಕವಾಗಿ ಪ್ರಯೋಗಕ್ಕೊಳಪಡಿಸಿ, ಉಪಯೋಗ ಯೋಗ್ಯವಾಗು ವಂತಹ ಕೆಲಸಗಳನ್ನು ಸಂಶೋ ಧಕರು ಮಾಡಿದ್ದಾರೆ. ಹೀಗೆ ಪ್ರಾಕೃತಿಕ ವಾಗಿ ನಾವು ಮನೆಯಲ್ಲಿಯೇ ಬೆಳೆಯಬಹುದಾದ ಕ್ಯಾಲಂಡುಲಾ ಹೂವು ನಮ್ಮ ಮನೆಯಂಗಳಕ್ಕೆ ಮೆರುಗು ನೀಡುವುದರ ಜತೆಗೆ ಕೆಲವೊಂದು ರೋಗಬಾಧೆಗಳಿಗೆ ಔಷಧವಾಗಿಯೂ ಬಳಕೆಯಾಗುತ್ತದೆ ಎಂದರೆ ನಂಬಲೇಬೇಕು. ನೋಡುವುದಕ್ಕೆ ಚೆಂಡು ಹೂವನ್ನೇ ಹೋಲುವ ಈ ಹೂವಿನಿಂದ ತಯಾರಿಸುವ ತೈಲಗಳು ದೇಹಾರೋಗ್ಯವನ್ನು ಹದೆಗೆಡಿಸುವ ಕ್ರಿಮಿ ಕೀಟಗಳ ನಿಯಂತ್ರಣಕ್ಕೂ ಉತ್ತಮ ಪರಿಹಾರವೇ ಸರಿ.

Advertisement

ಕ್ಯಾಲಂಡುಲಾ ಹೂವಿನ ಬಳಕೆ

-  ಮಾಂಸ ಖಂಡಗಳ ನೋವು ನಿವಾರಣೆಗೆ, ಸ್ನಾಯು ಸೆಳೆತಗಳಿಗಾಗಿ ತಯಾರಿಸುವ ತೈಲಗಳಲ್ಲಿ ಕ್ಯಾಲಂಡುಲಾ ಹೂಗಳನ್ನು ಬಳಕೆ ಮಾಡುತ್ತಾರೆ

-  ಜ್ವರ, ಅಲರ್ಜಿಯ ನಿವಾರಣೆಗೂ ಕ್ಯಾಲಂಡುಲಾ ಹೂವಿನಿಂದ ತಯಾರಿಸಿದ ಔಷಧವನ್ನು ನೀಡಲಾಗುತ್ತದೆ

-  ಹೆಣ್ಣುಮಕ್ಕಳ ಮುಟ್ಟಿನ ಸಂದರ್ಭದಲ್ಲಿ ಕಂಡುಬರುವ ಹೊಟ್ಟೆನೋವಿಗೂ ಕ್ಯಾಲಂಡುಲಾ ಹೂವಿನಿಂದ ತಯಾರು ಮಾಡಿದ ಔಷಧ ರಾಮಬಾಣವೇ ಸರಿ

Advertisement

-  ಗಂಟಲು ನೋವು ಮತ್ತು ಬಾಯಿ ಹುಣ್ಣಿನ ನಿವಾರಣೆಗೂ ಕ್ಯಾಲಂಡುಲಾ ಹೂವಿನ ಔಷಧ ಪರಿಣಾಮಕಾರಿಯಾಗಿ ಪ್ರಭಾವ ಬೀರುತ್ತದೆ

-  ಡ್ಯುವೋಡೆನಲ್‌ ಹುಣ್ಣುಗಳ ಚಿಕಿತ್ಸೆಯಲ್ಲಿಯೂ ಇವುಗಳ ಬಳಕೆ ಇದೆ.

-  ದಡಾರ, ಸಿಡುಬು, ಕಾಮಾಲೆಗಳ ಚಿಕಿತ್ಸೆಯಲ್ಲಿಯೂ ಕ್ಯಾಲಂಡುಲಾ ಬಳಕೆಯಿದೆ ಎಂದು ಸಂಶೋಧನೆಗಳಿಂದ ತಿಳಿದುಬಂದಿದೆ.

-  ನೋವು, ಉರಿಯೂತ, ಗಾಯಗಳು, ಹುಣ್ಣುಗಳನ್ನು ಗುಣಪಡಿಸಿಕೊಳ್ಳುವುದಕ್ಕೂ ಈ ಹೂವು ನಮಗೆ ಸಹಾಯವನ್ನು ಮಾಡುತ್ತದೆ.

-  ಚರ್ಮದ ಕಾಂತಿಯನ್ನು ಹೆಚ್ಚಿಸುವಲ್ಲಿಯೂ ಕ್ಯಾಲಂಡುಲಾ ತೈಲ ಅಥವಾ ಕ್ರೀಂ ಸಹಾಯ ಮಾಡುತ್ತದೆ. ಜತೆಗೆ ಮುಖದಲ್ಲಿನ ಟ್ಯಾನ್‌, ಡಾರ್ಕ್‌ ಸರ್ಕಲ್‌ಗ‌ಳನ್ನು ಹೋಗಲಾಡಿಸುವಲ್ಲಿಯೂ ಸಹಕಾರಿ.

-  ಮೂಲವ್ಯಾಧಿ, ಗುದನಾಳದ ಉರಿಯೂತ, ಕಿವಿಯ ಸೋಂಕು, ಒಸಡಿಗೆ ಸಂಬಂಧಿಸಿದಂತಹ ಸಮಸ್ಯೆಗಳು, ತುಟಿ ಒಡೆಯುವುದು, ಮಕ್ಕಳಲ್ಲಿ ಡೈಪರ್‌ ರ್ಯಾಷಸ್‌, ಕೀಟ ನಿವಾರಣೆಯಲ್ಲಿಯೂ ಕ್ಯಾಲಂಡುಲಾ ಹೂವಿನ ತೈಲವನ್ನು ಬಳಕೆ ಮಾಡಲಾಗುತ್ತದೆ.

-  ಈ ಹೂವುಗಳು ಆ್ಯಂಟಿ ಕ್ಯಾನ್ಸರ್‌ ಗುಣವನ್ನು ತನ್ನೊಳಗೆ ಅಡಕವಾಗಿರಿಸಿಕೊಂಡಿದ್ದು, ಕ್ಯಾನ್ಸರ್‌ ರೋಗ ಬಾಧೆಯಿಂದಲೂ ಕೊಂಚ ಮಟ್ಟಿಗೆ ರಕ್ಷಣೆ ನೀಡುತ್ತದೆ.

- ಭಾವಭೃಂಗ

Advertisement

Udayavani is now on Telegram. Click here to join our channel and stay updated with the latest news.

Next