Advertisement

“ಸಮತೋಲಿತ ಆಹಾರದಿಂದ ಆರೋಗ್ಯ’

11:12 PM Sep 24, 2019 | sudhir |

ಉಡುಪಿ: ಮಣಿಪಾಲ ಮಾಹೆಯ ವೆಲ್ಕಮ್‌ ಗ್ರೂಪ್‌ ಗ್ರಾಜುವೇಟ್‌ ಸ್ಕೂಲ್‌ ಆಫ್ ಹೊಟೇಲ್‌ ಅಡ್ಮಿನಿಸ್ಟ್ರೇಶನ್‌ನ (ವಾಗಾÏ) ಪಥ್ಯಾಹಾರ ಮತ್ತು ಆನ್ವಯಿಕ ಪೌಷ್ಟಿಕಾಂಶ ವಿಭಾಗವು ಕೇಂದ್ರ ಸರಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆರಂಭಿಸಿದ ಪೋಷಣ ಅಭಿಯಾನದಡಿ ಈ ತಿಂಗಳು ಪೂರ್ತಿ “ರಾಷ್ಟ್ರೀಯ ಪೋಷಣ್‌ ಮಾಸ’ ನಿಗದಿಪಡಿಸಿದಂತೆ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

Advertisement

ಮಕ್ಕಳ ಮೊದಲ 1,000 ದಿನಗಳಲ್ಲಿ ಸಮುದಾಯ ಜಾಗೃತಿ ವಹಿಸಬೇಕಾದ ಐದು ಮುಖ್ಯ ಪೌಷ್ಟಿಕಾಂಶ ಆಹಾರದ ಕುರಿತು ಬೆಳಕು ಚೆಲ್ಲುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು. ಅನೀಮಿಯ ಮುಕ್ತ ಭಾರತ, ತೊಳೆಯುವ ನೈರ್ಮಲ್ಯ, ಆರೋಗ್ಯಜ್ಞಾನ, ಅತಿಸಾರ ಮತ್ತು ಪೌಷ್ಟಿಕ ಆಹಾರವೇ ಜನರು ಅನುಸರಿಸಬೇಕಾದ ಐದು ಮುಖ್ಯ ಅಂಶಗಳು.

ಕಾಲಮಾನಕ್ಕೆ ಸಿಗುವ ಮತ್ತು ಸ್ಥಳೀಯವಾಗಿ ಸಿಗುವ ಆಹಾರಧಾನ್ಯಗಳನ್ನು ಬಳಸಿಕೊಂಡು ಸಮತೋಲಿತ ಆಹಾರ ಸ್ವೀಕರಿಸಿದರೆ ಅನಾರೋಗ್ಯದಿಂದ ಪಾರಾಗಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಉಪನ್ಯಾಸದಲ್ಲಿ ತಿಳಿಸಲಾಯಿತು.

ಉಪನ್ಯಾಸಕರಾದ ಡಾ|ಮೀನಾಕ್ಷಿ ಗರ್ಗ್‌, ಪಲ್ಲವಿ ಮಹೇಶ ಶೆಟ್ಟಿಗಾರ್‌, ಸ್ವಾತಿ ಆಚಾರ್ಯ, ನಮ್ರತಾ ಎನ್‌. ಪೈ ಅವರು ವಿದ್ಯಾರ್ಥಿ ಸ್ವಯಂಸೇವಕರ ಜತೆ ಉಪನ್ಯಾಸ ನೀಡಿದರು. ಸಗ್ರಿನೊಳೆ ಹಿ.ಪ್ರಾ. ಶಾಲೆ, ಪೆರಂಪಳ್ಳಿ ಸಮೀಪದ ಅಂಗನವಾಡಿಯಲ್ಲಿ ನಡೆದ ಪೋಷಕರು, ಅಂಗನವಾಡಿ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next