ದೇಹಾರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ವಿಚಾರದಲ್ಲಿ ಇ ಸಿಗರೇಟ್‌ಗಳೂ ಪ್ರಮುಖ ಪಾತ್ರ ವಹಿಸುತ್ತವೆ. ಈ ವ್ಯಸನಕ್ಕೆ ಬಲಿಯಾದ ಮನುಷ್ಯ ಹೃದಯಕ್ಕೆ ಸಂಬಂಧಿಸಿದ ಅಥವಾ ಇನ್ಯಾ ವುದೋ ತೆರ ನಾದ ಕಾಯಿಲೆಗೆ ಒಳ ಗಾ ಗುವ ಸಾಧ್ಯತೆ ಇದ್ದು, ಮಾನಸಿಕ ಖನ್ನತೆಗೂ ದಾರಿ ಮಾಡಿಕೊಡುತ್ತದೆ ಎಂದು ಭಾರತೀಯ ಮೂಲದ ಸಂಶೋಧನ ವರದಿಯೊಂದು ತಿಳಿಸಿದೆ. ಯುಎಸ್‌ನ ಕನ್ಸಾಸ್ ವಿಶ್ವವಿದ್ಯಾಲಯ ನಡೆಸಿದ ಸಂಶೋಧನೆಯ ಪ್ರಕಾರ, ಇ ಸಿಗರೇಟ್‌ಗೆ ಅಡಿಕ್ಟ್ ಆಗಿರುವ ಜನರು ಮಾನಸಿಕ ಅಶಾಂತಿ, ಒತ್ತಡ ಮತ್ತು ಹೃದಯಾಘಾತಗಳಂತಹ ಮಾರಣಾಂತಿಕ ಕಾಯಿಲೆಗಳಿಗೂ ತುತ್ತಾಗುವ ಸಂಭವ ಹೆಚ್ಚು. ವರ್ಷಕ್ಕೆ ಸುಮಾರು ಶೇ. 56ರಷ್ಟು ಮಂದಿ ಇ ಸಿಗರೇಟ್ ವ್ಯಸನಿಗಳು ಇಂತಹ ಸಮಸ್ಯೆಗಳಿಂದ ಬಳಲುತ್ತಿರು ವುದಾಗಿಯೂ ಈ ವರದಿ ದಾಖಲೆಗಳನ್ನು ನೀಡಿದೆ.
Advertisement
ಮೈಗ್ರೇನ್ ಕಣ್ಣಿನ ಸಮಸ್ಯೆಗೆ ಕಾರಣಅತಿಯಾದ ಮೈಗ್ರೇನ್ ಭವಿಷ್ಯದಲ್ಲಿ ಶುಷ್ಕ ಅಥವಾ ಒಣ ಕಣ್ಣಿನ ಸಮಸ್ಯೆಗೆ ಕಾರಣವಾಗುತ್ತದೆ ಎಂಬು ದನ್ನು ಹೆಲ್ತ್ ಡೇ ನಡೆಸಿದ ಅಧ್ಯಯನದಿಂದ ತಿಳಿದು ಬಂದಿದೆ. ಈ ಅಧ್ಯಯನದಲ್ಲಿ 65 ವರ್ಷ ಮೇಲ್ಪಟ್ಟ ಪುರುಷರಲ್ಲಿ ಈ ಸಮಸ್ಯೆ ದ್ವಿಗುಣಗೊಂಡರೆ, ಅದೇ ಮಹಿಳೆಯರಲ್ಲಿ ಶೇ. 2.5ರಷ್ಟು ಅಪಾಯ ತರುತ್ತವೆ ಎಂಬ ವಿಷಯ ಬೆಳಕಿಗೆ ಬಂದಿದೆ. ಮೈಗ್ರೇನ್ ಮತ್ತು ಒಣ ಕಣ್ಣಿನ ನಡುವಿನ ಸಂಬಂಧವೂ ವಯಸ್ಸಾದವರಲ್ಲಿ ಕಂಡುಬರತ್ತದೆ. ವಿಶೇಷವಾಗಿ ಗರ್ಭಧಾರಣೆ ಸಂದರ್ಭದಲ್ಲಿ ಹಾರ್ಮೋನ್‌ನಲ್ಲಾಗುವ ಬದಲಾವಣೆಯಿಂದಾಗಿ ಶುಷ್ಕ ಕಣ್ಣಿನ ತೊಂದರೆ ಕಾಣಿಸಿಕೊಳ್ಳುತ್ತದೆ ಎಂದು ಅಧ್ಯಯನದಲ್ಲಿ ತಿಳಿಸಿದೆ.