Advertisement

ಹಳ್ಳಿಗಳಲ್ಲಿ ಆರೋಗ್ಯ ಸೇವೆ ವಿಸ್ತರಣೆ ಶ್ಲಾಘನೀಯ

02:11 PM Sep 06, 2021 | Team Udayavani |

ಬಾದಾಮಿ:ಗ್ರಾಮೀಣಭಾಗಗಳಲ್ಲಿಆರೋಗ್ಯಸೇವೆವಿಸ್ತರಿಸುತ್ತಿರುವ ಮಹಾವಿದ್ಯಾಲಯದ ಕಾರ್ಯಶ್ಲಾಘನೀಯ ಎಂದು ಚೊಳಚಗುಡ್ಡ ಗ್ರಾಪಂಅಧ್ಯಕ್ಷೆ ರತ್ನಾ ಹಂಪಿಹೊಳಿಮಠ ಹೇಳಿದರು.

Advertisement

ತಾಲೂಕಿನ ಚೊಳಚಗುಡ್ಡ ಗ್ರಾಮದಲ್ಲಿಎಸ್‌.ವಿ.ಪಿ. ಆಯುರ್ವೇದ ವಿದ್ಯಾಲಯದ ದತ್ತುಗ್ರಾಮದಲ್ಲಿ ನೂತನ ಹೊರರೋಗಿಗಳ ವಿಭಾಗಉದ್ಘಾಟಿಸಿ ಅವರು ಮಾತನಾಡಿದರು.ಪಿಡಿಒ ಚಂದ್ರಕಾಂತ ದೊಡ್ಡಪತ್ತಾರ ಮಾತನಾಡಿ, ಇಂತಹ ಶಿಬಿರಗಳನ್ನು ಹೆಚ್ಚುಹಮ್ಮಿಕೊಳ್ಳುವುದರಿಂದ ದೊಡ್ಡ ಆಸ್ಪತ್ರೆಗಳಿಗೆಹೋಗುವುದು ತಪ್ಪುತ್ತದೆ. ಇದರಿಂದ ಆರ್ಥಿಕಹೊರೆ ತಪ್ಪುತ್ತದೆ. ಈ ಕಾರ್ಯಕ್ಕೆ ಗ್ರಾಮಪಂಚಾಯಿತಿ ವತಿಯಿಂದ ಎಲ್ಲ ಸಹಕಾರನೀಡಲಾಗುತ್ತದೆ ಎಂದರು.

ಡಾ| ಕವಿತಾ ಮಿಟ್ಟಲಕೋಡ ಮಾತನಾಡಿ,ಹೆಚ್ಚುಮಕ್ಕಳು ಋತುಸ್ರಾವದ ಸಮಯದಲ್ಲಿತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳಕುರಿತು ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿಸೇವಾ ಇಂಟರ್‌ನ್ಯಾಷನಲ್‌ ವತಿಯಿಂದ 200ಕ್ಕೂಹೆಚ್ಚು ವಿದ್ಯಾರ್ಥಿನಿಯರಿಗೆ ಋತುಸ್ರಾವದಶು ಚಿತ್ವದ ಮತ್ತು ಕೋವಿಡ್‌ ನಿಯಂತ್ರಣಾ ಕಿಟ್‌ವಿತರಿಸಲಾಯಿತು.

ಪ್ರಾಚಾರ್ಯ ಡಾ| ಬಸವರಾಜ ಮುಲ್ಕಿಪಾಟೀಲ, ಮುಖ್ಯಶಿಕ್ಷಕಿ ಎಂ.ಆರ್‌.ಕುಲಕರ್ಣಿ,ಶ್ರೀಮತಿ ಕಾಲೇಖಾನ್‌, ಡಾ| ಸುಮಯ್ನಾ, ಡಾ|ದಿವ್ಯಾ ಮತ್ತು ಗ್ರಾಪಂ ಸದಸ್ಯರು ಹಾಜರಿದ್ದರು.136 ಮಕ್ಕಳಿಗೆ ಸ್ವರ್ಣಾಮೃತ ಪ್ರಾಶಾನನೀಡಲಾಯಿತು. ಪ್ರಸೂತಿ ತಂತ್ರ ಮತ್ತು ಸ್ತ್ರೀರೋಗದ ವತಿಯಿಂದ ಹಮ್ಮಿಕೊಂಡಿದ್ದ ಉಚಿತಆರೋಗ್ಯ ತಪಾಸಣಾ ಶಿಬಿರದಲ್ಲಿ18ಹೆಣ್ಣುಮಕ್ಕಳುತಪಾಸಣೆಗೆ ಒಳಪಟ್ಟರು. ಡಾ| ಗಿರೀಶದಾನಪ್ಪಗೌಡರ ಪ್ರಾಸ್ತಾವಿಕವಾಗಿ ಮಾತನಾಡಿದರು.ಡಾ| ಸೋಮಶೇಖರ ಬಿರಾದಾರ ವಂದಿಸಿದರು

Advertisement

Udayavani is now on Telegram. Click here to join our channel and stay updated with the latest news.

Next